ಅರಿಶಿನದ ಉಪಾಯ: ಪ್ರತಿ ಭಾರತೀಯ ಅಡುಗೆ ಮನೆಯಲ್ಲಿ ಅರಿಶಿನ ಇದ್ದೇ ಇರುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿಯೇ ಅರಿಶಿನವನ್ನು ಉತ್ತಮ ಆಯುರ್ವೇದ ಔಷಧ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಹಿಂದೂ ಧರ್ಮದಲ್ಲಿ ಯಾವುದೇ ಮಂಗಳ ಕಾರ್ಯಗಳಲ್ಲಿ ಅರಿಶಿನದ ಕೊನೆಯನ್ನು ಬಳಸುವುದನ್ನು ನೋಡಬಹುದು. ಅರಿಶಿನ ಇಲ್ಲದೆ ಪೂಜೆಗಳು ಪೂರ್ಣಗೊಳ್ಳುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅರಿಶಿನಕ್ಕೆ ಮಹತ್ತರವಾದ ಸ್ಥಾನವಿದೆ ಮತ್ತು ಅರಿಶಿನದ ಕೊನೆಯ ಒಂದು ಸಣ್ಣ ತುಂಡು ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸಬಹುದು ಎಂದು ಹೇಳಲಾಗುತ್ತದೆ.
ವಾಸ್ತವವಾಗಿ, ಅರಿಶಿನದ ಕೊನೆಯನ್ನು ಬಳಸುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ಅಡೆತಡೆಗಳಿಂದ ಪಾರಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಅರಿಶಿನದ ಕೊನೆ ಪರಿಹಾರದಿಂದ ಲಕ್ಷ್ಮಿದೇವಿಯನ್ನು ಮೆಚ್ಚಿಸಬಹುದು ಎಂದೂ ಸಹ ಹೇಳಲಾಗುತ್ತದೆ. ಮನೆಯಲ್ಲಿ ನಾನಾ ರೀತಿಯ ಆರ್ಥಿಕ ಸಮಸ್ಯೆಯನ್ನು ನಿವಾರಿಸಲು ಒಂದು ಅರಿಶಿನದ ಕೊನೆ ಸಾಕು ಎನ್ನಲಾಗುತ್ತದೆ. ಅಂತಹ ಪರಿಹಾರದ ಬಗ್ಗೆ ತಿಳಿಯೋಣ...
ಇದನ್ನೂ ಓದಿ- ಸಿಂಹ ರಾಶಿಯಲ್ಲಿ ಶುಕ್ರನ ಸಂಚಾರ: ಇನ್ನೊಂದು ವಾರದಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ
ಅರಿಶಿನದ ಪರಿಹಾರದಿಂದ ಬೃಹಸ್ಪತಿಯ ಸ್ಥಾನ ಬಲಗೊಳ್ಳಲಿದೆ:
ಅರಿಶಿನವು ಗುರು ಗ್ರಹಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಭಗವಾನ್ ವಿಷ್ಣುವು ಮಾತಾ ಲಕ್ಷ್ಮಿಯ ಪತಿ ಮತ್ತು ಈ ಬ್ರಹ್ಮಾಂಡದ ರಕ್ಷಕ. ನೀವು ಭಗವಾನ್ ವಿಷ್ಣುವನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರೆ, ಲಕ್ಷ್ಮಿ ದೇವಿಯು ಸಹ ನಿಮಗೆ ದಯೆ ತೋರುತ್ತಾಳೆ ಮತ್ತು ನಿಮ್ಮ ಮೇಲೆ ವಿಶೇಷ ಆಶೀರ್ವಾದವನ್ನು ಸುರಿಸುತ್ತಾರೆ. ಅರಿಶಿನವು ವಿಷ್ಣುವಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದಾಗಿದೆ ಮತ್ತು ಗುರುವಾರದಂದು ಅರಿಶಿನ ಪರಿಹಾರಗಳನ್ನು ಮಾಡುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನವು ಬಲಗೊಳ್ಳುತ್ತದೆ ಎಂದು ಸಹ ಹೇಳಲಾಗುತ್ತದೆ.
ಆರ್ಥಿಕ ಸಮಸ್ಯೆಗೆ ಪರಿಹಾರಕ್ಕಾಗಿ ಅರಿಶಿನದ ಈ ಕ್ರಮ ಕೈಗೊಳ್ಳಿ:
ಲಕ್ಷ್ಮಿ ದೇವಿಯನ್ನು ಸಂತೋಷಪಡಿಸಲು ಮತ್ತು ಹಣದ ಕೊರತೆಯನ್ನು ನೀಗಿಸಲು ಗುರುವಾರದಂದು ಕೈಗೊಳ್ಳುವ ಅರಿಶಿನದ ಪರಿಹಾರವು ಪ್ರಯೋಜನಕಾಗಿ ಎನ್ನಲಾಗುವುದು. ಇದಕ್ಕಾಗಿ ಐದು ಅರಿಶಿನದ ಕೊನೆಗಳನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಒಂದು ಕಟ್ಟು ಮಾಡಿ. ಇದನ್ನು ನೀವು ಮನೆಯಲ್ಲಿ ಹಣ ಇದುವ ಸ್ಥಳದಲ್ಲಿ ಇರಿಸಿ. ಈ ಪರಿಹಾರದಿಂದ ತಾಯಿ ಲಕ್ಷ್ಮಿಯು ನಿಮ್ಮ ಮೇಲೆ ದಯೆ ತೋರುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಹಣದ ಕೊರತೆ ದೂರವಾಗುವುದು. ಪ್ರತಿ ತಿಂಗಳು, ಈ ಅರಿಶಿನವನ್ನು ಪವಿತ್ರ ಸ್ಥಳದಲ್ಲಿ ಹಾಕಿ, ಮತ್ತೆ ಗುರುವಾರದಂದು ಈ ಪರಿಹಾರ ಮಾಡಿ. ಇದರಿಂದ ನಿಮಗೆ ಎಂದಿಗೂ ಹಣದ ಕೊರತೆ ಕಾಡುವುದಿಲ್ಲ ಎಂಬ ನಂಬಿಕೆ ಇದೆ.
ಇದನ್ನೂ ಓದಿ- ಆಗಸ್ಟ್ನಲ್ಲಿ ಗ್ರಹಗಳ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ
ಅರಿಶಿನ ದಾನದ ಮಹತ್ವ:
ಭಗವಾನ್ ವಿಷ್ಣುವನ್ನು ಮೆಚ್ಚಿಸಲು, ಗುರುವಾರದಂದು ಬ್ರಾಹ್ಮಣರಿಗೆ ಅರಿಶಿನದೊಂದಿಗೆ ಬೇಳೆಕಾಳು, ಹಳದಿ ಬಟ್ಟೆ ಮತ್ತು ಲಡ್ಡುಗಳನ್ನು ದಾನ ಮಾಡಿ. ಇದರೊಂದಿಗೆ ಗುರುವಾರ ಬಾಳೆ ಸಸಿಗೆ ಅರಿಶಿನವನ್ನು ಅರ್ಪಿಸಿ, ನಂತರ ಪೂಜಿಸಿ. ಈ ಪರಿಹಾರವನ್ನು ಮಾಡುವುದರಿಂದ, ನಿಮ್ಮ ಸ್ಥಗಿತಗೊಂಡ ಕೆಲಸವು ಯಾವುದೇ ಅಡೆತಡೆ ಇಲ್ಲದೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
ಇದಲ್ಲದೇ ಗುರುವಾರದಂದು ನೀವು ಯಾವುದೇ ಶುಭ ಕಾರ್ಯಗಳಿಗೆ ಹೋಗುತ್ತಿದ್ದರೆ ಗಣೇಶನಿಗೆ ಅರಿಶಿನವನ್ನು ಹಚ್ಚಿ ಮತ್ತು ಅದೇ ಅರಿಶಿನವನ್ನು ಹಣೆಗೆ ತಿಲಕವಾಗಿ ಹಚ್ಚಿ. ಇದರಿಂದ ನೀವು ಮಾಡುವ ಯಾವುದೇ ಕೆಲಸದಲ್ಲಿ ಜಯ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.