Ganesh Chaturti 2023: ಭಾರತದಲ್ಲಿ ಭೇಟಿ ನೀಡಲೇಬೇಕಾದ 10 ಪ್ರಸಿದ್ದ ಗಣಪತಿ ಮಂದಿರಗಳು
Ganesh Chaturti 2023: ಭಾರತದಲ್ಲಿ ಭೇಟಿ ನೀಡಲೇಬೇಕಾದ ಕೆಲವು ಗಣೇಶ ಮಂದಿರಗಳಿವೆ.
Ganesh Chaturti 2023: ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆಗಾಗಿ ಸಂಭ್ರಮ ಸಡಗರ ಮನೆ ಮಾಡಿದೆ. ಈ ವರ್ಷ ಗಣೇಶ ಚತುರ್ಥಿ ಸಮಯದಲ್ಲಿ ನೀವು ಪ್ರಸಿದ್ದ ಗಣೇಶನ ದೇವಸ್ಥಾನಗಳಿಗೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದರೆ, ಭಾರತದಲ್ಲಿ ಒಮ್ಮೆಯಾದರೂ ನೋಡಬೇಕಾದ 10 ಪ್ರಸಿದ್ದ ಗಣೇಶ ಮಂದಿರಗಳ ಬಗ್ಗೆ ಇಲ್ಲಿದೆ ಮಾಹಿತಿ...
1. ಮುಂಬೈನ ಸಿದ್ದಿವಿನಾಯಕ ದೇವಸ್ಥಾನ:
ವಾಣಿಜ್ಯ ನಗರಿ ಮುಂಬೈನಲ್ಲಿರುವ ಗಣೇಶ ದೇವಸ್ಥಾನವು ಪ್ರಸಿದ್ದ ಗಣೇಶ ಮಂದಿರಗಳಲ್ಲಿ ಒಂದು. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ.
2. ಕಾಣಿಪಾಕಾಂ ವಿನಾಯಕ ದೇವಸ್ಥಾನ:
ಆಂಧ್ರ ಪ್ರದೇಶದಲ್ಲಿರುವ ಕಾಣಿಪಾಕಂ ವಿನಾಯಕ ದೇವಾಸ್ಥಾನವು ಸ್ವಯಂ-ವ್ಯಕ್ತ ವಿಗ್ರಹ ಎಂದು ಹೆಸರುವಾಸಿಯಾಗಿದೆ.
3. ಪರಕಾಲ ಮಠ:
ಸಾಂಸ್ಕೃತಿಕ ನಗರ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿರುವ ಪರಕಾಲ ಮಠ ದೇವಾಲಯವು ಧಾರ್ಮಿಕ ಮಹತ್ವದೊಂದಿಗೆ ಸುಂದರವಾದ ವಾಸ್ತು ಶಿಲ್ಪಕ್ಕೂ ಹೆಸರುವಾಸಿಯಾಗಿದೆ.
4. ಖಜುರಾಹೊ ವರಹಾ ದೇವಾಲಯ:
ಮಧ್ಯಪ್ರದೇಶದ ಖಜುರಾಹೊ ವರಾಹ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ- Lucky Painting: ನಿಮ್ಮ ಮಲಗಿರುವ ಅದೃಷ್ಟವನ್ನೂ ಬಡಿದೆಬ್ಬಿಸುತ್ತದೆ ಮನೆಯಲ್ಲಿರುವ ಈ ಚಿತ್ರಗಳು
5. ಶ್ರೀಮಂತ್ ದಗ್ದುಶೇತ್ ಗಣಪತಿ ದೇವಸ್ಥಾನ:
ಪುಣೆಯಲ್ಲಿರುವ ಶ್ರೀಮಂತ್ ದಗ್ದುಶೇತ್ ಗಣಪತಿ ದೇವಸ್ಥಾನ ಪುಣೆಯ ಸಾಂಸ್ಕೃತಿಕ ಪರಂಪರ್3ಯೇ ಸಂಕೇತವಾಗಿದೆ. ಇದೊಂದು ಐತಿಹಾಸಿಕ ದೇವಾಲಯ.
6. ಕರ್ಪಗ ವಿನಾಯಕ ದೇವಾಲಯ:
ಪಿಳ್ಳ್ಯಾರಪಟ್ಟಿಯಲ್ಲಿರುವ ಕರ್ಪಗ ವಿನಾಯಕ ದೇವಾಲಯ ಕಲ್ಲಿನ ವಿಗ್ರಹದ ದೇವಾಲಯವಾಗಿದ್ದು ಇದು ತನ್ನ ಪುರಾತನ ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿದೆ.
7. ಹಂಪಿ ಗಣೇಶ ದೇವಸ್ಥಾನ:
ಕೃಷ್ಣದೇವರಾಯನ ಕಾಲದ ಹಂಪಿಯಲ್ಲಿರುವ ಗಣೇಶನ ದೇವಸ್ಥಾನವೂ ಕೂಡ ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು.
8. ಮಣಕುಲ ವಿನಯಗರ್ ದೇವಾಲಯ:
ಪುದುಚೇರಿಯ ಹೃದಯ ಭಾಗದಲ್ಲಿರುವ ಪ್ರಶಾಂತ ಮಂದಿರ ಮಣಕುಲ ವಿನಯಗರ್ ದೇವಾಲಯ.
ಇದನ್ನೂ ಓದಿ- ಎಲೊವೇರಾ ಜೊತೆಗೆ ಮನೆಯಂಗಳದಲ್ಲಿ ಈ 3 ಸಸ್ಯಗಳು, ಝಣಝಣ ಕಾಂಚಾಣದ ಸುರಿಮಳೆ ಗ್ಯಾರಂಟಿ!
9. ಲಾಲ್ಬೌಚಾ ರಾಜಾ
ಮುಂಬೈನ ಬೃಹತ್ ವಿಗ್ರಹಕ್ಕೆ ಹೆಸರುವಾಸಿಯಾಗಿರುವ ಗಣೇಶ ಲಾಲ್ಬೌಚಾ ರಾಜಾ. ಪ್ರತಿ ವರ್ಷ ಗಣೇಶ ಚತುರ್ಥಿಯ ಸಮಯದಲ್ಲಿ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
10. ದಗ್ದುಶೇತ್ ಹಲ್ವಾಯಿ ಗಣಪತಿ
ಪುಣೆಯಲ್ಲಿರುವ ದಗ್ದುಶೇತ್ ಹಲ್ವಾಯಿ ಗಣಪತಿ ದೇವಸ್ಥಾನ ಇತಿಹಾಸ ಪ್ರಸಿದ್ದ ದೇವಾಲಯವಾಗಿದೆ. ಇಲ್ಲಿನ ಭವ್ಯವಾದ ಗಣೇಶನ ವಿಗ್ರಹ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.