Lucky Painting: ವಾಸ್ತು ಶಾಸ್ತ್ರದ ಪ್ರಕಾರ, ಮನಕ್ಕೆ ಮುದ ನೀಡುವ ಕೆಲವು ಚಿತ್ರಗಳು ಮನೆಯಲ್ಲಿದ್ದರೆ ಅವು ನಮ್ಮ ಮಲಗಿರುವ ಅದೃಷ್ಟವನ್ನೂ ಜಾಗೃತ ಗೊಳಿಸುತ್ತವೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.
ಹಿಂದೂ ಧರ್ಮದಲ್ಲಿ, ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಬಹಳ ಪಾಮುಖ್ಯತೆ ಇದೆ. ನಮ್ಮಲ್ಲಿ ಕೆಲವರು ಮನೆಯ ಅಲಂಕಾರಕ್ಕಾಗಿ ಹಲವು ಬಗೆಯ ಚಿತ್ರಕಲೆಗಳನ್ನು ಎಂದರೆ ಪೇಂಟಿಂಗ್ ಹಾಕಲಾಗುತ್ತದೆ. ಆದರೆ, ಕೆಲವು ಚಿತ್ರಕಲೆಗಳು ಮನೆಗೆ ಧನಾತ್ಮಕ ಶಕ್ತಿಯನ್ನು ಪ್ರವಹಿಸುವಂತೆ ಮಾಡುತ್ತವೆ. ಇದರಿಂದ ನಿಮ್ಮ ಅದೃಷ್ಟವೇ ಬದಲಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮನೆಯಲ್ಲಿ ಎಂತಹ ಪೇಂಟಿಂಗ್ಗಳನ್ನು ಇಡುವುದು ಪ್ರಯೋಜನಕಾರಿ? ಅದನ್ನು ಯಾವ ದಿಕ್ಕಿನಲ್ಲಿ ಇಡುವುದು ಒಳಿತು ಎಂದು ತಿಳಿಯೋಣ...
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹನುಮಂತನೊಂದಿಗೆ ರಾಮ, ಲಕ್ಷ್ಮಣ, ಸೀತೆ ಇರುವ ಫೋಟೋ ಇಡುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಫೋಟೋವನ್ನು ಮನೆಯ ಲಿವಿಂಗ್ ಏರಿಯಾದಲ್ಲಿ ಇಡುವುದರಿಂದ ಕುಟುಂಬಸ್ಥರಲ್ಲಿ ಪರಸ್ಪರರ ನಡುವೆ ಪ್ರೀತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ಓಡುವ ಕುದುರೆಯ ಚಿತ್ರ, ಅದರಲ್ಲೂ ಓಡುವ ಬಿಳಿ ಸಪ್ತ ಕುದುರೆಗಳು ಮನೆಯಲ್ಲಿದ್ದರೆ ವ್ಯಾಪಾರ-ವ್ಯವಹಾರದಲ್ಲಿ ಲಾಭ ಗಳಿಸಬಹುದು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಚಿತ್ರ ನಿಮ್ಮ ಕಚೇರಿಯಲ್ಲಿದ್ದರೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಪ್ರತಿ ಮನೆಯಲ್ಲೂ ಲಕ್ಷ್ಮಿ ದೇವಿಯ ಚಿತ್ರ ಇರುತ್ತದೆ. ಆದರೆ, ಮನೆಯ ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಇಡುವುದು ತುಂಬಾ ಮಂಗಳಕರ, ಅಂತಹ ಮನೆಯಲ್ಲಿ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ ಎಂದು ನಂಬಲಾಗಿದೆ.
ತಾಯಿ ಯಶೋಧೆಯೊಂದಿಗೆ ಬಾಲ ಕೃಷ್ಣನ ಫೋಟೋ ಮನೆಯಲ್ಲಿದ್ದರೆ ಅದರಲ್ಲೂ ಗರ್ಭಿಣಿ ಮಹಿಳೆಯರು ಮನೆಯಲ್ಲಿದ್ದರೆ ಅವರ ಕೋಣೆಯಲ್ಲಿ ಈ ಫೋಟೋ ಇದ್ದರೆ ತಾಯಿ ಮಗುವಿನ ನಡುವಿನ ಸಂಬಂಧ, ಅವರ ನಡುವಿನ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತುವಿನ ಪ್ರಕಾರ, ಹಂಸವನ್ನು ಸಮೃದ್ಧಿಯ ಸಂಕೇತ ಎಂದು ನಂಬಲಾಗಿದೆ. ಲಿವಿಂಗ್ ರೂಂ, ಇಲ್ಲವೇ ಅತಿಥಿಗಳ ಕೋಣೆಯಲ್ಲಿ ಹಂಸದ ಚಿತ್ರವನ್ನು ಇಡುವುದನ್ನು ಮಂಗಳಕರ ಎಂದು ಹೇಳಲಾಗುತ್ತದೆ.
ರಾಧಾ ಕೃಷ್ಣರನ್ನು ನಿಜವಾದ ಪ್ರೀತಿಯ ಸಂಕೇತ ಎಂದು ನಂಬಲಾಗಿದೆ. ಹಾಗಾಗಿ, ಬೆಡ್ ರೂಂನಲ್ಲಿ ರಾಧಾ ಕೃಷ್ಣರ ಫೋಟೋ ಇಡುವುದರಿಂದ ದಂಪತಿಗಳ ಪ್ರೀತಿ, ಸಾಮರಸ್ಯ ಹೆಚ್ಚಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ತಾಯಿ ಅನ್ನಪೂರ್ಣೆಯ ಫೋಟೋ ಇಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಆಹಾರಕ್ಕೆ ಕೊರತೆ ಆಗುವುದಿಲ್ಲ ಎಂದು ನಂಬಲಾಗಿದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.