Garud Puran: ವಿವಾಹಿತ ದಂಪತಿಗಳು ಮಕ್ಕಳನ್ನು ಪಡೆಯಲು ಬಯಸುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇದೇ ವೇಳೆ, ಪ್ರತಿ ಪೋಷಕರು ತಮ್ಮ ಮಕ್ಕಳು ಆರೋಗ್ಯವಂತರಾಗಿರುವುದರ ಜೊತೆಗೆ  ಸುಸಂಸ್ಕೃತ ಮತ್ತು ಅರ್ಹತೆ ಹೊಂದಿರಬೇಕೆಂದು ಬಯಸುತ್ತಾರೆ. ಜನನದ ನಂತರ ಮಗು ಹೇಗಿರುತ್ತದೆ, ಅವನ ಹಿಂದಿನ ಜನ್ಮದ ಕರ್ಮಗಳು, ತಾಯಿಯ ನಡವಳಿಕೆ ಮತ್ತು ಗರ್ಭಧಾರಣೆಯ ಸಮಯವು ತುಂಬಾ ಮುಖ್ಯವಾಗಿದೆ (Lifestyle News In Kannada) ಎಂದು ಶಾಸ್ತ್ರಗಳಲ್ಲಿ ಮತ್ತು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದನ್ನು ಗರ್ಭ ಸಂಸ್ಕಾರ ಎಂದೂ ಕೂಡ ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

ಗರ್ಭ ಸಂಸ್ಕಾರದಲ್ಲಿ, ಗರ್ಭಧಾರಣೆಯ ಸಮಯದಿಂದ ಹಿಡಿದು ಮಗುವಿನ ಜನನದವರೆಗೆ, ಅಂದರೆ ಸಂಪೂರ್ಣ 9 ತಿಂಗಳವರೆಗೆ ತಾಯಿಯ ಆರೋಗ್ಯ, ಆಹಾರ ಪದ್ಧತಿ, ದಿನಚರಿ ಮತ್ತು ಯೋಗ ಇತ್ಯಾದಿಗಳನ್ನು ವಿವರಿಸಲಾಗಿದೆ. ಅದೇ ರೀತಿ, 18 ಮಹಾಪುರಾಣಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ, ಗರ್ಭಧಾರಣೆಯ ಸಮಯ ಮತ್ತು ನಿಯಮವನ್ನು ವಿವರಿಸಲಾಗಿದ್ದು, ಅವುಗಳನ್ನು ಅನುಸರಿಸಿ ದಂಪತಿಗಳು ಶ್ರೇಷ್ಠ ಮಗುವನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಗರ್ಭಧಾರಣೆಯ ಈ ವಿಷಯಗಳನ್ನು ನೆನಪಿನಲ್ಲಿಡಿ
>> ಗರುಡ ಪುರಾಣದ ಪ್ರಕಾರ, ಮಹಿಳೆ ಋತುಮತಿಯಾದಾಗ, ಅವಳನ್ನು ಗೌರವದಿಂದ ನೋಡಿಕೊಳ್ಳಿ ಮತ್ತು ದಂಪತಿಗಳು ಈ ಅವಧಿಯಲ್ಲಿ ಬ್ರಹ್ಮಚರ್ಯವನ್ನು ಆಚರಿಸಬೇಕು. ಇದು ಅತ್ಯುತ್ತಮ ಮಗುವಿಗೆ ಜನ್ಮ ನೀಡಲು ಸಹಕರಿಸುತ್ತದೆ.

>> ಮುಟ್ಟಿನ ಶುದ್ಧೀಕರಣದ ಬಳಿಕ ಎಂಟನೇ ಮತ್ತು ಹದಿನಾಲ್ಕನೇ ದಿನವನ್ನು ಗರ್ಭಧಾರಣೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇಂತಹ ಮಕ್ಕಳು ಕೇವಲ ಸಮರ್ಥರಾಗಿರದೆ ಸದ್ಗುಣಶೀಲರು, ಅದೃಷ್ಟವಂತರು ಮತ್ತು ಉತ್ತಮ ನಡವಳಿಕೆಯನ್ನು ಹೊಂದಿರುತ್ತಾರೆ.

>> ಮುಟ್ಟಿನ ಶುದ್ಧೀಕರಣದ ಬಳಿಕ ಮಹಿಳೆ ಏಳು ದಿನಗಳವರೆಗೆ ಗರ್ಭಿಣಿಯಾಗಬಾರದು. ಈ ದಿನಗಳಲ್ಲಿ ಗರ್ಭಿಣಿಯಾಗಿರುವುದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎನ್ನಲಾಗಿದೆ.

>> ಶುಭ ದಿನಗಳ ಕುರಿತು ಹೇಳುವುದಾದರೆ,  ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರವನ್ನು ಧರ್ಮಗ್ರಂಥಗಳಲ್ಲಿ ಗರ್ಭಧಾರಣೆಗೆ ಅತ್ಯುತ್ತಮ ದಿನಗಳು ಎಂದು ಪರಿಗಣಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಪಂಚಾಂಗದ ಅಷ್ಟಮಿ, ದಶಮಿ ಮತ್ತು ಹನ್ನೆರಡನೆಯ ತಿಥಿಗಳೂ ಕೂಡ ಶುಭ ಎಂದು ಭಾವಿಸಲಾಗಿದೆ.


ಇದನ್ನೂ ಓದಿ-ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಬೇಕೆ? ಈ ಹೇಲ್ದಿ ಸ್ನ್ಯಾಕ್ಸ್ ನಿಮ್ಮ ಆಹಾರದಲ್ಲಿರಲಿ!


>> ಶುಭ ದಿನಗಳನ್ನು ಹೊರತುಪಡಿಸಿ, ಶುಭ ನಕ್ಷತ್ರಗಳೂ ಕೂಡ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ರೋಹಿಣಿ, ಮೃಗಶಿರ, ಹಸ್ತ, ಚಿತ್ರ, ಪುನರ್ವಸು, ಅನುರಾಧ, ಶ್ರಾವಣ, ಧನಿಷ್ಠ, ಶತಭಿಷ, ಉತ್ತರ, ಭಾದ್ರಪದ, ಉತ್ತರಾಷಾಢ ಮತ್ತು ಉತ್ತರ ಫಾಲ್ಗುಣಿ ನಕ್ಷತ್ರಗಳನ್ನು ಅತ್ಯಂತ ಶುಭ ನಕ್ಷತ್ರಗಳೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ-ನೀವೂ ದಿನವಿಡೀ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತೀರಾ? ಈ ಸುದ್ದಿ ನಿಮಗಾಗಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.