Garuda Purana: ಗರುಡ ಪುರಾಣದ ಪ್ರಕಾರ ಇವುಗಳನ್ನು ಕಂಡರೆ ಸಾಕು ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು
ಗರುಡ ಪುರಾಣದಲ್ಲಿ, ಕೆಲವು ವಿಷಯಗಳನ್ನು ಎಷ್ಟು ಶುಭ ಎಂದು ವಿವರಿಸಲಾಗಿದೆ. ಅಂದರೆ ಒಬ್ಬ ವ್ಯಕ್ತಿಯು ಅವುಗಳನ್ನು ನೋಡುವ ಮೂಲಕ ಸಾಕಷ್ಟು ಪುಣ್ಯವನ್ನು ಪಡೆಯುತ್ತಾನೆ. ಇದರಲ್ಲಿ ಹಸುವಿನ ಹಾಲು, ಹಸುವಿನ ಸಗಣಿ, ಹಸುವಿನ ಮೂತ್ರ ಸೇರಿವೆ. ಅದೇ ಸಮಯದಲ್ಲಿ, ಗೋಶಾಲೆ ದೇವಾಲಯದಷ್ಟೇ ಪವಿತ್ರವೆಂದು ಹೇಳಲಾಗುತ್ತದೆ.
ಬೆಂಗಳೂರು: ಗರುಡ ಪುರಾಣದಲ್ಲಿ, ಜೀವನ-ಸಾವು ಮತ್ತು ಮರಣಾನಂತರದ ಜೀವನವನ್ನು ವಿವರವಾಗಿ ಹೇಳಲಾಗಿದೆ. ಇದಲ್ಲದೆ, ದೇವರು ಮತ್ತು ದೇವತೆಗಳ ಆಶೀರ್ವಾದ ಪಡೆಯುವ ಮಾರ್ಗಗಳು ಮತ್ತು ಸಂತೋಷದ ಜೀವನವನ್ನು ಪಡೆಯುವ ಮಾರ್ಗಗಳನ್ನು ಸಹ ಅದರಲ್ಲಿ ತಿಳಿಸಲಾಗಿದೆ. ಇಂದು ನಾವು ಗರುಡ ಪುರಾಣದಲ್ಲಿ (Garuda Purana) ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆಯುವ ಮಾರ್ಗಗಳ ಬಗ್ಗೆ ತಿಳಿಸಲಿದ್ದೇವೆ. ಈ ಪುರಾಣದ ಪ್ರಕಾರ, ಕೆಲವು ವಿಷಯಗಳು ಎಷ್ಟು ಶುಭವಾಗಿದೆಯೆಂದರೆ, ಯಾವುದೇ ವ್ಯಕ್ತಿ ಇವುಗಳನ್ನು ನೋಡುವುದರಿಂದಲೂ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು.
ಇವುಗಳನ್ನು ನೋಡುವುದರಿಂದ ಶುಭವಾಗುತ್ತದೆ:
ಹಸುವಿನ ಹಾಲು: ಹಸುವಿನ ಹಾಲು (Cow Milk) ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ ಗರುಡ ಪುರಾಣದ ಪ್ರಕಾರ, ಯಾವುದೇ ವ್ಯಕ್ತಿ ಹೊರ ಹೋಗುವಾಗ ಹಸುವಿನ ಹಾಲನ್ನು ಕಂಡರೆ ಪುಣ್ಯ ಎಂದು ಹೇಳಲಾಗುತ್ತದೆ. ಮುಂಜಾನೆ ಹಸುವಿನ ಹಾಲನ್ನು ನೋಡುವುದರಿಂದ ದಿನ ಶುಭವಾಗಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ- Loan: ಈ ದಿನ ಅಪ್ಪಿತಪ್ಪಿಯೂ ಯಾರಿಂದಲೂ ಸಾಲ ತೆಗೆದುಕೊಳ್ಳಲೇಬಾರದು
ಗೋ ಮೂತ್ರ: ಹಸುವಿನ ಮೂತ್ರವನ್ನು ಅನೇಕ ಜನರು ಔಷಧಿಯಾಗಿ ಬಳಸುತ್ತಾರೆ, ಆದರೆ ಧರ್ಮಗ್ರಂಥಗಳಲ್ಲಿ ತಾಯಿ ಗಂಗಾ ಹಸುವಿನ ಮೂತ್ರದಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಗರುಡ ಪುರಾಣದ ಪ್ರಕಾರ, ಹಸುವಿನ ಮೂತ್ರವನ್ನು ನೋಡುವುದರಿಂದ ಬಹಳಷ್ಟು ಪುಣ್ಯ ದೊರೆಯುತ್ತವೆ.
ಸಗಣಿ: ಸನಾತನ ಧರ್ಮದಲ್ಲಿ ಶುಭ ಕಾರ್ಯಗಳ ಮೊದಲು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಹಸುವಿನ ಸಗಣಿಯನ್ನು (Cow Dung) ಗಣಪತಿ ರೂಪದಲ್ಲಿ ಸ್ಥಾಪಿಸುವ ಸಂಪ್ರದಾಯವಿದೆ. ಇದನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಗೋವಿನ ಸಗಣಿ ನೋಡುವುದೂ ಬಹಳ ಲಾಭದಾಯಕ. ಒಂದು ಹಸು ಮನೆಯ ಮುಂದೆ ಬಂದು ಸಗಣಿ ಹಾಕಿದರೆ, ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿಯ ಅನುಗ್ರಹವಿರಲಿದೆ ಎಂದೂ ಹೇಳಲಾಗುತ್ತದೆ.
ಇದನ್ನೂ ಓದಿ- Shukra Rashi Parivartan: ದ್ವಾದಶ ರಾಶಿಗಳ ಮೇಲೆ ಶುಕ್ರನ ರಾಶಿ ಪರಿವರ್ತನೆಯ ಪರಿಣಾಮ ಹೇಗಿರಲಿದೆ!
ಗೋ ಶಾಲ: ಹಸುಗಳನ್ನು ಸಾಕುವ ಸ್ಥಳ ಅಂದರೆ ಗೋ ಶಾಲೆಯನ್ನು ನೋಡುವುದರಿಂದ ಸಾಕಷ್ಟು ಲಾಭವಾಗುತ್ತದೆ. ಒಂದು ಗೋ ಶಾಲೆಯನ್ನು ನಿರ್ಮಿಸಿವುದು ದೇವಾಲಯವನ್ನೇ ನಿರ್ಮಿಸಿದಷ್ಟು ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ.
ಗೋಪಾದ: ಸಾಮಾನ್ಯವಾಗಿ ಜನರು ಹಸುವಿನ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ. ಅಂತೆಯೇ, ಹಸುವಿನ ಉಜ್ಜುವಿಕೆಯಿಂದ ಹೊರಹೊಮ್ಮುವ ಧೂಳನ್ನು ಸಹ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಸು ನೆಲವನ್ನು ಗೀಚುವುದನ್ನು ನೋಡುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ