Loan: ಈ ದಿನ ಅಪ್ಪಿತಪ್ಪಿಯೂ ಯಾರಿಂದಲೂ ಸಾಲ ತೆಗೆದುಕೊಳ್ಳಲೇಬಾರದು

ಯಾವುದೇ ಸಮಸ್ಯೆಯಿಂದಾಗಿ ಸಾಲ ಪಡೆಯುವ ಅನಿವಾರ್ಯತೆ ಇದ್ದರೆ ಈ ಪರಿಹಾರವು ನಿಮಗೆ ಸಾಲ ಮುಕ್ತವಾಗಿರಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ನೀವು ಯಾವುದೇ ಕಾರಣಕ್ಕಾಗಿ ಸಾಲ ತೆಗೆದುಕೊಳ್ಳಲು ಅಥವಾ ಯಾರಿಗಾದರೂ ಸಾಲ ನೀಡಲು ಯೋಜಿಸುತ್ತಿದ್ದರೆ, ಸಾಲ ವಹಿವಾಟಿನ ಈ ನಿಯಮಗಳನ್ನು ಖಂಡಿತವಾಗಿ ತಿಳಿದುಕೊಳ್ಳಿ.

Written by - Zee Kannada News Desk | Last Updated : Jul 17, 2021, 07:55 AM IST
  • ಸಾಲ ತೆಗೆದುಕೊಳ್ಳಲು ವಿಶೇಷ ನಿಯಮಗಳಿವೆ
  • ನೀವು ಜ್ಯೋತಿಷ್ಯದ ಈ ನಿಯಮಗಳನ್ನು ಅನುಸರಿಸಿದರೆ, ನೀವು ಶೀಘ್ರದಲ್ಲೇ ಸಾಲ ಮುಕ್ತರಾಗಬಹುದು
  • ಸಾಲವನ್ನು ಯಾವಾಗ ಪಡೆಯಬೇಕು, ಯಾವಾಗ ಬೇರೆಯವರಿಗೆ ನೀಡಬಹುದು ಎಂದು ತಿಳಿಯಿರಿ
Loan: ಈ ದಿನ ಅಪ್ಪಿತಪ್ಪಿಯೂ ಯಾರಿಂದಲೂ ಸಾಲ ತೆಗೆದುಕೊಳ್ಳಲೇಬಾರದು  title=
ಸಾಲ ನೀಡುವ/ಪಡೆಯುವ ಮೊದಲು ಜ್ಯೋತಿಷ್ಯದ ಈ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಿ

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ-ಸುಖ ಇದ್ದದ್ದೇ. ಹಲವು ಬಾರಿ ನಾವು ಯಾರಿಂದಲಾದರೂ ಸಾಲ ಪಡೆಯುವ ಅನಿವಾರ್ಯತೆ ಎದುರಾಗುತ್ತದೆ. ಸಾಲ ಪಡೆಯುವುದು ಒಂದೆಡೆಯಾದರೆ ಬಡ್ಡಿಯ ಹೊರೆ ಮತ್ತೊಂದೆಡೆ. ಹಲವು ಸಂದರ್ಭಗಳಲ್ಲಿ ಪಡೆದ ಸಾಲದ ಹಣಕ್ಕಿಂತ ಹಲವು ಪಟ್ಟು ಹೆಚ್ಚು ಬಡ್ಡಿಯನ್ನು ಪಾವತಿಸಿರುತ್ತೇವೆ. ಹಾಗಾಗಿ ಸಾಲದಿಂದ ಮುಕ್ತರಾಗುವುದೇ ಕಷ್ಟವಾಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಬೇರೆಯವರಿಗೆ ಸಾಲ ನೀಡುವುದರಿಂದ ತೊಂದರೆ ಕಾಣಿಸಿಕೊಳ್ಳುತ್ತದೆ. ಅಂದರೆ ಬೇರೆಯವರಿಗೆ ಕೊಟ್ಟ ಹಣವನ್ನು ಸಮಯಕ್ಕೆ ಸರಿಯಾಗಿ ಮರಳಿ ಪಡೆಯದೇ ತೊಂದರೆಗೆ ಸಿಲುಕಬಹುದು. ಇಂತಹ ಸಂದರ್ಭಗಳನ್ನು ತಪ್ಪಿಸಲು ಜ್ಯೋತಿಷ್ಯಶಾಸ್ತ್ರದಲ್ಲಿ ಸಾಲ ನೀಡುವುದು ಮತ್ತು ಸಾಲ ತೆಗೆದುಕೊಳ್ಳುವ ಬಗ್ಗೆ ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಸಾಲವು ತ್ವರಿತವಾಗಿ ತೆರವುಗೊಳ್ಳುತ್ತದೆ ಅಥವಾ ಸಾಲವನ್ನು ಸಮಯಕ್ಕೆ ಹಿಂದಿರುಗಿಸಲಾಗುತ್ತದೆ ಎಂದು ನಂಬಲಾಗಿದೆ.

ಮಂಗಳವಾರ ಸಾಲ ತೆಗೆದುಕೊಳ್ಳಬೇಡಿ ಮತ್ತು ಬುಧವಾರ ಸಾಲ ನೀಡಬೇಡಿ:
ಬುಧವಾರ ಯಾರಿಗೂ ಸಾಲ (Loan) ನೀಡಬಾರದು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಈ ದಿನದಂದು ನೀಡಿದ ಹಣವನ್ನು ಮರಳಿ ಪಡೆಯುವುದು ತುಂಬಾ ಕಷ್ಟ ಅಥವಾ ಹಲವು ಬಾರಿ ಅದು ಹಿಂದಿರುಗಿ ಬರುವುದೇ ಇಲ್ಲ. ಮತ್ತೊಂದೆಡೆ, ಮಂಗಳವಾರ ಎಂದಿಗೂ ಸಾಲ ತೆಗೆದುಕೊಳ್ಳಬಾರದು. ಈ ದಿನದಂದು ಪಡೆಯುವ ಅಥವಾ ತೆಗೆದುಕೊಳ್ಳುವ ಸಾಲವನ್ನು ಮರುಪಾವತಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಈ ಸಾಲವು ವರ್ಷಗಳವರೆಗೆ ಮತ್ತು ಕೆಲವೊಮ್ಮೆ ಮುಂದಿನ ಪೀಳಿಗೆವರೆಗೆ ಮುಂದುವರೆಯುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಶ್ರಾವಣದಲ್ಲಿ ರುದ್ರಾಕ್ಷಿ ಬಳಸಿದರೆ ಎಲ್ಲವೂ ಶುಭಾವಾಗುತ್ತದೆಯಂತೆ, ಬಳಸುವ ವಿಧಾನ ಹೀಗಿರಲಿ

ಬೇರೆಯವರಿಗೆ ಸಾಲ ನೀಡುವ ಮೊದಲು ಈ ನಿಯಮದ ಬಗ್ಗೆ ತಿಳಿಯಿರಿ:-
- ಹಸ್ತಾ ನಕ್ಷತ್ರದವರು ಭಾನುವಾರ, ಸಂಕ್ರಾಂತಿ ವೃದ್ಧ ಯೋಗ ಮತ್ತು ಮಂಗಳವಾರ ಸಾಲವನ್ನು ತೆಗೆದುಕೊಳ್ಳುವುದರಿಂದ ಅದರ ಹೊಣೆಯನ್ನು ತಲೆಮಾರುಗಳವರೆಗೆ ಹೊರಬೇಕಾಗುತ್ತದೆ. ಅಂದರೆ, ಕುಟುಂಬವು (Family) ಈ ಸಾಲವನ್ನು ಅನೇಕ ವರ್ಷಗಳವರೆಗೆ ಮತ್ತು ದಶಕಗಳವರೆಗೆ ಮರುಪಾವತಿಸಲು ಸಾಧ್ಯವಾಗುವುದಿಲ್ಲ.

- ಭರಣಿ, ಕೃತಿಕಾ, ಶತಾಭಿಷಾ, ಅರ್ದ್ರಾ, ಶ್ಲೇಶ, ಮಾಘ, ಮೂಲ, 3 ಉತ್ತರಾ, 3 ಪೂರ್ವಾ, ಹಸ್ತಾ, ಜ್ಯೇಷ್ಠ, ಉತ್ತರಾಭದ್ರಾ ನಕ್ಷತ್ರಗಳಲ್ಲಿ ನೀಡಿದ ಸಾಲದ ಹಣ ಮುಳುಗುತ್ತದೆ ಅಥವಾ ಮರಳಿ ಪಡೆಯುವುದು ತುಂಬಾ ಕಷ್ಟ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Dream Interpretation: ಯಾವ ಸಮಯದಲ್ಲಿ ಬೀಳುವ ಕನಸು ಎಷ್ಟು ದಿನಗಳ ನಂತರ ಫಲ ನೀಡಲಿದೆ ಗೊತ್ತಾ!

- ನೀವು ಸಾಲವನ್ನು ತೆಗೆದುಕೊಂಡು ಅದನ್ನು ಮರುಪಾವತಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ, ಮಂಗಳವಾರ ಪೂರ್ಣ ಭಕ್ತಿ ಮತ್ತು ನಂಬಿಕೆಯೊಂದಿಗೆ 'ಋಣಮೋಚಕ್ ಮಂಗಲ್ ಸ್ತೋತ್ರ'ವನ್ನು ಜಪಿಸಿದರೆ ಖಂಡಿತವಾಗಿಯೂ ಸಾಲ ಮುಕ್ತ ಜೀವನವನ್ನು ಪಡೆಯಬಹುದು ಎಂಬ ನಂಬಿಕೆಯಿದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News