Garuda Purana Punishments in Kannada : ಹಿಂದೂ ಧರ್ಮದಲ್ಲಿ, ಮಾ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ಅಪಾರವಾದ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಲಕ್ಷ್ಮಿ ದೇವಿಯ ಅನುಗ್ರಹವನ್ನು ಹೊಂದಿರಬೇಕು. ಜನನ-ಮರಣ, ಮರಣಾನಂತರದ ಕರ್ಮಗಳ ಫಲ, ಆತ್ಮದ ಪ್ರಯಾಣ ಮತ್ತು ಕರ್ಮಕ್ಕನುಗುಣವಾಗಿ ಶಿಕ್ಷೆಯ ಬಗ್ಗೆ ಗರುಡ ಪುರಾಣದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಆದರೆ ಇದರ ಹೊರತಾಗಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಮಾರ್ಗಗಳನ್ನೂ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಲಕ್ಷ್ಮಿ ದೇವಿಯು ತಪ್ಪು ಕೆಲಸ ಮಾಡುವವರನ್ನು ಎಂದಿಗೂ ಇಷ್ಟಪಡುವುದಿಲ್ಲ. ಕಷ್ಟಪಟ್ಟು ದುಡಿದರೂ ಶ್ರೀಮಂತನಾಗಲು ಬಿಡದ, ತಾಯಿ ಲಕ್ಷ್ಮಿದೇವಿಯನ್ನು ಕೆರಳಿಸುವ ತಪ್ಪು ಅಭ್ಯಾಸಗಳು ಯಾವುವು? ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

- ತಮ್ಮ ಆದಾಯದ ಒಂದು ಭಾಗವನ್ನು ಧರ್ಮಕ್ಕೆ ದಾನ ಮಾಡದ ಜನ. ಆ ಜನರು ಕಷ್ಟಪಟ್ಟು ದುಡಿದರೂ ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ. ಅಂತಹವರ ಮನೆಯಲ್ಲಿ ಎಂದಿಗೂ ಆಶೀರ್ವಾದವಿಲ್ಲ, ಅವರ ಆದಾಯವು ಹೆಚ್ಚಾಗುವುದಿಲ್ಲ. ಅವರು ಯಾವಾಗಲೂ ಒಂದೇ ಜೀವನವನ್ನು ನಡೆಸುತ್ತಾರೆ.


ಇದನ್ನೂ ಓದಿ : Astro Tips: ಈ 3 ಕೆಲಸ ಮಾಡಿದ್ರೆ ಲಕ್ಷ್ಮಿದೇವಿಯ ಕೃಪೆಯಿಂದ ಹಣದ ಮಳೆಯಾಗಲಿದೆ!


- ಹೆಣ್ಣನ್ನು ಗೌರವಿಸದವರನ್ನು ಮಹಾಲಕ್ಷ್ಮಿದೇವಿ ಯಾವತ್ತೂ ಇಷ್ಟಪಡುವುದಿಲ್ಲ. ಅಂಥವರು ಎಷ್ಟೇ ದುಡಿದರೂ ಸಂಪತ್ತು ಹೆಚ್ಚುವುದಿಲ್ಲ. ವಿದ್ಯಾರ್ಹತೆ ಇದ್ದು, ದುಡಿದು ಗಳಿಸಿದರು  ಶ್ರೀಮಂತರಾಗುವುದರಲ್ಲಿ, ಹಿಂದೆ ಉಳಿಯುತ್ತಾರೆ. ಮತ್ತೊಂದೆಡೆ, ಅವರು ಶ್ರೀಮಂತರಾಗಿದ್ದರೂ, ಅವರ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ.


- ಹಿರಿಯರನ್ನು ಗೌರವಿಸದ ಜನರು. ಮನೆಯಲ್ಲಿ ಸದಾ ಭಿನ್ನಾಭಿಪ್ರಾಯ, ಜಗಳದ ವಾತಾವರಣ ಇರುತ್ತದೆ. ಆ ಮನೆಗಳಲ್ಲಿ ತಾಯಿ ಲಕ್ಷ್ಮಿ ವಾಸವಿರುವುದಿಲ್ಲ. ಇಂತಹ ಕುಟುಂಬದವರು ಎಷ್ಟೇ ದುಡಿದರೂ ಪ್ರಗತಿ ಕಾಣುವುದಿಲ್ಲ. ಅವರ ಜೀವನದಲ್ಲಿ ಅಡೆತಡೆಗಳು ಮತ್ತು ಸಂಕಟಗಳು ಯಾವಾಗಲೂ ಇರುತ್ತವೆ.


ಇದನ್ನೂ ಓದಿ : Tulsi Astro Tips: ಮರೆತೂ ಕೂಡ ಈ ರೀತಿ ತುಳಸಿ ದಳಗಳನ್ನು ಕೇಳಬೇಡಿ, ಭಾರಿ ಹಾನಿಗೆ ಕಾರಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.