Garuda Purana Teaching: ಗರುಡ ಪುರಾಣದಲ್ಲಿ ವ್ಯಕ್ತಿಯ ಹುಟ್ಟಿನಿಂದ ಆತನ ಸಾವಿನವರೆಗೆ ಎಲ್ಲಾ ವಿಷಯಗಳ ಕುರಿತು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಕರ್ಮಗಳ ಆಧಾರದ ಮೇಲೆ ಸ್ವರ್ಗ ಅಥವಾ ನರಕದಲ್ಲಿ ಜಾಗಪಡೆಯುತ್ತಾನೆ ಎಂದು ಈ ಧಾರ್ಮಿಕ ಗ್ರಹ್ಥದಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ವ್ಯಕ್ತಿಯ ಈ ಜನ್ಮದ ಕರ್ಮಗಳು ಆತನ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎನ್ನಲಾಗಿದೆ. ಮುಂದಿನ ಜನ್ಮದ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಗರುಡ ಪುರಾಣದ ಪ್ರಕಾರ ಮುಂದಿನ ಜನ್ಮವನ್ನು ಹೀಗೆ ನಿರ್ಧರಿಸಲಾಗುತ್ತದೆ?
>> ಗರುಡ ಪುರಾಣದ ಪ್ರಕಾರ ಯಾವುದೇ ಓರ್ವ ವ್ಯಕ್ತಿ ಹತ್ಯೆಗೈದು ತನ್ನ ಕುಟುಂಬವನ್ನು ಸಾಹಿಸುತ್ತಿದ್ದರೆ, ಕೊಳ್ಳೆ ಹೊಡೆಯುವ ಕೆಲಸದಲ್ಲಿ ನಿರತನಾಗಿದ್ದರೆ, ಪ್ರಾಣಿಗಳನ್ನು ಹತ್ಯೆಗೈಯುವ ಅಥವಾ ಬೇಟೆಯಾಡುವ ಕೆಲಸದಲ್ಲಿ ನಿರತನಾಗಿದ್ದಾರೆ, ಆತ ಮುಂದಿನ ಜನ್ಮದಲ್ಲಿ ಕಟುಕನ ಕೈಗೆ ಬಲಿಯಾಗುವ ಮೇಕೆಯಾಗಿ ಜನ್ಮತಾಳುತ್ತಾನೆ ಎನ್ನಲಾಗಿದೆ. 


>> ಧಾರ್ಮಿಕ ಗ್ರಂಥಗಳ ಪ್ರಕಾರ, ಸ್ತ್ರೀಯರನ್ನು ಶೋಷಣೆ ಮಾಡುವವರು ಅಥವಾ ಅವರನ್ನು ದುಡಿಸಿಕೊಳ್ಳುವವರು ಮುಂದಿನ ಜನ್ಮದಲ್ಲಿ ಯಾವುದಾದರೂ ಭಯಾನಕ ಕಾಯಿಲೆಗೆ ತುತ್ತಾಗುತ್ತಾರೆ. ಇದೇ ವೇಳೆ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವ್ಯಕ್ತಿಯು ಮುಂದಿನ ಜನ್ಮದಲ್ಲಿ ದುರ್ಬಲನಾಗುತ್ತಾನೆ. ಗುರುವಿನ ಪತ್ನಿಯೊಡನೆ ಅನುಚಿತವಾಗಿ ವರ್ತಿಸುವವನಿಗೆ ಮುಂದಿನ ಜನ್ಮದಲ್ಲಿ ಕುಷ್ಠರೋಗ ಬರುತ್ತದೆ ಎಂದು ಹೇಳಲಾಗಿದೆ.


>> ಈ ಜನ್ಮದಲ್ಲಿ ಪುರುಷನು ಮಹಿಳೆಯಂತೆ ವರ್ತಿಸಿದರೆ ಅಥವಾ ಮಹಿಳೆಯರ ಗುಣಧರ್ಮಗಳನ್ನು ಹೊಂದಿರುತ್ತಾರೆಯೋ ಅಂತಹವರು ಮುಂದಿನ ಜನ್ಮದಲ್ಲಿ ಹೆಣ್ಣಿನ ರೂಪ ಪಡೆಯುತ್ತಾರೆ.


>> ಗರ್ಭಪಾತ, ಸ್ತ್ರೀ ಹತ್ಯೆ ಇತ್ಯಾದಿ ಯಾವುದೇ ರೀತಿಯ ಪರೋಕ್ಷ ಕೊಲೆಯಲ್ಲಿ ನಿರತರಾಗಿರುವ ಜನರು ಭಿಲ್ಲಿ ರೋಗ, ಬೆನ್ನುಬಾಕು ರೋಗಿಯಾಗಿ ಜನ್ಮ ಪಡೆಯುತ್ತಾರೆ. ಅಷ್ಟೇ ಅಲ್ಲ, ನರಕಯಾತನೆಗಳನ್ನು ಅನುಭವಿಸುವ ಈ ಜನರು ಮುಂದಿನ ಜನ್ಮದಲ್ಲಿ ಚಂಡಾಲ್ ಯೋನಿಯಲ್ಲಿ ಜನಿಸುತ್ತಾರೆ.


>>  ಸಾಯುತ್ತಿರುವಾಗ ದೇವರ ಹೆಸರನ್ನು ತೆಗೆದುಕೊಳ್ಳುವ ವ್ಯಕ್ತಿ, ಮರಣದ ನಂತರ, ಮೋಕ್ಷದ ಹಾದಿಯಲ್ಲಿ ಮುಂದುವರಿಯುತ್ತಾನೆ. ಆದ್ದರಿಂದಲೇ ಧಾರ್ಮಿಕ ಗ್ರಂಥಗಳಲ್ಲಿ ಸಾವಿನ ಸಮಯದಲ್ಲಿ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ.


>> ಗರುಡ ಪುರಾಣದ ಪ್ರಕಾರ, ತಮ್ಮ ತಂದೆ-ತಾಯಿ ಮತ್ತು ಮಕ್ಕಳಿಗೆ ತೊಂದರೆ ನೀಡುವವರು ಮುಂದಿನ ಜನ್ಮವನ್ನು ತಳೆಯುತ್ತಾರೆ, ಆದರೆ ಈ ಜನರು ಜನ್ಮ ಪಡೆಯುವ ಮುನ್ನವೇ ಸಾವನ್ನಪ್ಪುತ್ತಾರೆ ಎನ್ನಲಾಗಿದೆ.


>> ಶಾಸ್ತ್ರಗಳ ಪ್ರಕಾರ ಗುರುವನ್ನು ನಿಂದಿಸುವವರಿಗೆ ಉಪ್ಪಿನಲ್ಲಿ ಸ್ಥಾನ ಸಿಗುತ್ತದೆ. ಗುರುವನ್ನು ಅವಮಾನಿಸುವುದು ಎಂದರೆ ದೇವರನ್ನು ಅವಮಾನಿಸಿದಂತೆ ಎಂದು ಹೇಳಲಾಗಿದೆ. ಇತಹವರು ನೀರಿಲ್ಲದೆ ಬ್ರಹ್ಮರಾಕ್ಷಸನ ಜನ್ಮವನ್ನು ಪಡೆಯುತ್ತಾರೆ ಎನ್ನಲಾಗಿದೆ.


ಇದನ್ನೂ ಓದಿ-Surya Gochar 2022: ಈ ರಾಶಿಗಳ ಪಾಲಿಗೆ ದುಬಾರಿ ಪರಿಣಮಿಸಲಿದೆ ಸೂರ್ಯನ ಮಿಥುನ ಗೋಚರ, ಒಂದು ತಿಂಗಳು ಎಚ್ಚರದಿಂದಿರಿ


>> ಮೋಸ ಹಾಗೂ ವಂಚನೆಯಲ್ಲಿ ತೊಡಗಿದವರು ಮುಂದಿನ ಜನ್ಮದಲ್ಲಿ ಗೂಬೆಯಾಗಿ ಜನ್ಮ ಪಡೆಯುತ್ತಾರೆ ಎಂದು ವಂಚಕರ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಯಾರಿಗಾದರೂ ಸುಳ್ಳು ಸಾಕ್ಷ್ಯವನ್ನು ನೀಡುವ ಜನರು ಕುರುಡರ ಜನ್ಮವನ್ನು ತಳೆಯುತ್ತಾರೆ ಎನ್ನಲಾಗಿದೆ.


ಇದನ್ನೂ ಓದಿ-Zodiac Sign: ಕುಬೇರನ ಕೃಪೆಯಿಂದ ಜುಲೈ ತಿಂಗಳಿನಲ್ಲಿ ಈ 3 ರಾಶಿಗಳ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ವೃದ್ಧಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.