Zodiac Sign: ಕುಬೇರನ ಕೃಪೆಯಿಂದ ಜುಲೈ ತಿಂಗಳಿನಲ್ಲಿ ಈ 3 ರಾಶಿಗಳ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ವೃದ್ಧಿ

July Horoscope 2022: ಜುಲೈ ತಿಂಗಳಲ್ಲಿ ಹಲವು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಜುಲೈ 16 ರಂದು, ಸೂರ್ಯ ದೇವ ಕರ್ಕ ರಾಶಿಗೆ ಪ್ರವೇಶಿಸಿದರೆ. ಈ ಅವಧಿಯಲ್ಲಿ  ಮಂಗಳ ಮತ್ತು ಶುಕ್ರರು  ಕೂಡ ತಮ್ಮ ರಾಶಿಯನ್ನು ಬದಲಾಯಿಸಲಿವೆ. ಈ ಬದಲಾವಣೆಯಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jun 15, 2022, 05:19 PM IST
  • ಜುಲೈ ತಿಂಗಳಲ್ಲಿ ಹಲವು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ.
  • ಜುಲೈ 16 ರಂದು, ಸೂರ್ಯ ದೇವ ಕರ್ಕ ರಾಶಿಗೆ ಪ್ರವೇಶಿಸಿದರೆ.
  • ಈ ಅವಧಿಯಲ್ಲಿ ಮಂಗಳ ಮತ್ತು ಶುಕ್ರರು ಕೂಡ ತಮ್ಮ ರಾಶಿಯನ್ನು ಬದಲಾಯಿಸಲಿವೆ.
Zodiac Sign: ಕುಬೇರನ ಕೃಪೆಯಿಂದ ಜುಲೈ ತಿಂಗಳಿನಲ್ಲಿ ಈ 3 ರಾಶಿಗಳ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ವೃದ್ಧಿ title=
July Month Horoscope 2022

Lucky Zodiac Sing For July 2022: ಪ್ರತಿ ಹೊಸ ತಿಂಗಳು ಜನರಿಗೆ ಹೊಸ ಭರವಸೆಯನ್ನು, ಹೊಸ ಆಸೆ ಆಕಾಂಕ್ಷೆಗಳನ್ನು ತರುತ್ತದೆ. ಹೀಗಿರುವಾಗ ಜುಲೈ ತಿಂಗಳ ಬಗ್ಗೆಯೂ ಕೂಡ ಜನರಲ್ಲಿ ಅಪಾರ ನಿರೀಕ್ಷೆ ಶುರುವಾಗಿದೆ. ಮುಂಬರುವ ಸಮಯವು ತನಗೆ ಪ್ರಯೋಜನಕಾರಿಯಾಗಬೇಕು, ಶುಭ ಫಲಿತಾಂಶಗಳನ್ನು ನೀಡಬೇಕು ಎಂದು ಪ್ರತಿಯೊಬ್ಬ ವ್ಯಕ್ತಿ ಬಯಸುವುದು ಸಾಮಾನ್ಯ. ಆದರೆ ಇದು ಗ್ರಹಗಳ ನಡೆಯನ್ನು ಅವಲಂಬಿಸಿರುತ್ತದೆ. ಜುಲೈ ತಿಂಗಳಲ್ಲಿ, ಅನೇಕ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಈ ಗ್ರಹಗಳ ನಡೆಯ ಅನೇಕ ಶುಭ ಮತ್ತು ಅಶುಭ ಪರಿಣಾಮಗಳು ವಿವಿಧ ರಾಶಿಗಳ ಮೇಲೆ ಗೋಚರಿಸಲಿವೆ.

ಜುಲೈನಲ್ಲಿ, ಸೂರ್ಯ, ಶುಕ್ರ ಮತ್ತು ಬುಧದಂತಹ ಅನೇಕ ದೊಡ್ಡ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಲಿವೆ. 68 ದಿನಗಳ ನಂತರ ಜುಲೈ 2 ರಂದು ಬುಧ ತನ್ನ ರಾಶಿಯನ್ನು ಬದಲಾಯಿಸಲಿದ್ದು, ಅದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಇದೇ ವೇಳೆ ಜುಲೈ 16 ರಂದು ಸೂರ್ಯ ದೇವರು ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾರೆ. ಅಷ್ಟೇ ಅಲ್ಲ, ಮಂಗಳ ಮತ್ತು ಶುಕ್ರರ ರಾಶಿ ಬದಲಾವಣೆ ಕೂಡ ಇದೇ ತಿಂಗಳಲ್ಲಿ ನಡೆಯಲಿದೆ. ಈ ಎಲ್ಲಾ ಗ್ರಹಗಳ ನಡೆಯಲ್ಲಿನ ಬದಲಾವಣೆ ಯಾವ ರಾಶಿಯವರಿಗೆ ಲಾಭ ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ. 

ಸಿಂಹ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಯಶಸ್ಸು ಇರಲಿದೆ. ಬಡ್ತಿಯ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಸಮಯದಲ್ಲಿ, ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳ್ಳಲಿವೆ . ಗ್ರಹಗಳ ರಾಶಿ ಬದಲಾವಣೆಯ ಲಾಭವನ್ನು ನೀವು ಪಡೆಯಲಿದ್ದೀರಿ. ಈ ಸಮಯದಲ್ಲಿ ನೀವು ಕಚೇರಿಯಲ್ಲಿ ಉತ್ತಮ ಕೆಲಸ ಮಾಡುತ್ತೀರಿ. ಜೊತೆಗೆ ನಿಮಗೆ ಉತ್ತಮ ಉದ್ಯೋಗದ ಪ್ರಸ್ತಾಪವೂ ಬರಬಹುದು. ವಿದೇಶದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸು ಸಿಗಲಿದೆ. ಅಲ್ಲದೆ, ವ್ಯಾಪಾರದಲ್ಲಿ ಲಾಭವೂ ಇರಲಿದೆ.

ಧನು ರಾಶಿ - ಆರ್ಥಿಕ ದೃಷ್ಟಿಕೋನದಲ್ಲಿ ಈ ರಾಶಿಯವರಿಗೆ ಜುಲೈ ತಿಂಗಳು ಪ್ರಯೋಜನಕಾರಿ ಸಾಬೀತಗಲಿದೆ. ಸಂಪತ್ತಿನ ದೇವರಾಗಿರುವ ಕುಬೇರನು ಈ ಅವಧಿಯಲ್ಲಿ ಧನು ರಾಶಿಯವರ ಮೇಲೆ ತನ್ನ ಕ್ರುಪಾವೃಷ್ಟಿ ಸುರಿಸಲಿದ್ದಾನೆ. ಇದೇ ವೇಳೆ ಹಣಕಾಸಿನ ಹೊಸ ಮೂಲಗಳು ಕೂಡ ಹುಟ್ಟಿಕೊಳ್ಳಲಿವೆ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭದ ಸಾಧ್ಯತೆಯೂ ಇದೆ. ನೀವು ಕೂಡ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನೀವು ಉಳಿತಾಯ ಮಾಡುವಲ್ಲಿಯೂ ಕೂಡ ಯಶಸ್ವಿಯಾಗುವಿರಿ.

ಇದನ್ನೂ ಓದಿ-ಈ ರೀತಿ ತುಳಸಿ ಒಣಗದಂತೆ ಕಾಪಾಡಿ, ಲಕ್ಷ್ಮೀ ನಾರಾಯಣ ಕೃಪೆಗೆ ಪಾತ್ರರಾಗಿ

ಮಿಥುನ ರಾಶಿ - ಈ ರಾಶಿಯವರಿಗೆ ಜುಲೈ ತಿಂಗಳು ಶುಭಕರ ಸಾಬೀತಗಲಿದೆ. ಕೆಲಸದ ಸ್ಥಳದಲ್ಲಿ ನೀವು ಘನತೆ-ಗೌರವವನ್ನು ಪಡೆಯುವಿರಿ. ಈ ಅವಧಿಯಲ್ಲಿ, ಕೆಲವು ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಬೀಳಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಯೋಚಿಸುತ್ತಿದ್ದರೆ, ಸಮಯವು ಅನುಕೂಲಕರವಾಗಿರುತ್ತದೆ. ಇದೇ ವೇಳೆ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ ಇದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಉದ್ಯೋಗದ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ಜುಲೈನಲ್ಲಿ ಪೂರ್ವಜರ  ಆಸ್ತಿಯಿಂದ ಲಾಭ ಸಿಗುವ ಸಾಧ್ಯತೆ ಇದೆ. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಮಯವು ಅನುಕೂಲಕರವಾಗಿರುತ್ತದೆ.

ಇದನ್ನೂ ಓದಿ-ಶಾಪಿಂಗ್ ಪ್ರಿಯರೇ ಗಮನಿಸಿ.. ಈ ದಿನ ವಸ್ತುಗಳನ್ನು ಖರೀದಿಸಿದ್ರೆ ಅಶುಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News