Gayatri Mantra Chanting Rules: ಹಿಂದೂ ಧರ್ಮದಲ್ಲಿ ನಿತ್ಯ ಗಾಯತ್ರಿದೇವಿಯನ್ನು ಪೂಜಿಸುವುದಕ್ಕೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಇದಲ್ಲದೇ ಹಲವರು ನಿಯಮಿತವಾಗಿ ಗಾಯತ್ರಿ ಮಂತ್ರವನ್ನೂ ಪಠಿಸುತ್ತಾರೆ, ಆದರೆ ಈ ಮಂತ್ರವನ್ನು ಜಪಿಸುವಾಗ ಹಲವು ಬಾರಿ ಸಣ್ಣ ತಪ್ಪುಗಳು ನಡೆದುಹೋಗುತ್ತವೆ, ಕೆಲವರಿಗೆ ಇದರ ಸರಿಯಾದ ಉಚ್ಚಾರಣೆ ಏನು ಎಂಬುದು ತಿಳಿದಿರುವುದಿಲ್ಲ. ವೇದಗಳು ಮತ್ತು ಪುರಾಣಗಳಲ್ಲಿ ಗಾಯತ್ರಿ ಮಂತ್ರವನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಈ ಮಂತ್ರವನ್ನು ಪಠಿಸುವ ಮನೆಯೊಳಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುವುದಿಲ್ಲ ಎಂದು ಹೇಳಲಾಗುತ್ತದೆ, ಆದ್ದರಿಂದ ನೀವು ಈ ಮಂತ್ರವನ್ನು ಹೇಗೆ ಮತ್ತು ಎಷ್ಟು ಬಾರಿ ಜಪಿಸಬೇಕೆಂದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಸರಿಯಾದ ಗಾಯತ್ರಿ ಮಂತ್ರ ಯಾವುದು ಗೊತ್ತಾ?
ಅನೇಕ ಜನರು ಗಾಯತ್ರಿ ಮಂತ್ರವನ್ನು ಪಠಿಸುತ್ತಾರೆ ಆದರೆ ಅವರು ಅದನ್ನು ಸರಿಯಾಗಿ ಉಚ್ಚರಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಸರಿಯಾದ ಮಂತ್ರದ ಬಗ್ಗೆ ತಿಳಿದಿರಬೇಕು, ಆದ್ದರಿಂದ ನಾವು ಇಂದು ಒಂದು ಸಣ್ಣ ಮಂತ್ರವನ್ನು ನೆನಪಿಸಿಕೊಳ್ಳೋಣ. ಇದು ಸರಿಯಾದ ಗಾಯತ್ರಿ ಮಂತ್ರ. ಓಂ ಭೂರ್ಭವ: ಸ್ವ: ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನ: ಪ್ರಚೋದಯಾತ್.


ಅದರ ಅರ್ಥ ನಿಮಗೆ ತಿಳಿದಿದೆಯೇ?
ನೀವು ಗಾಯತ್ರಿ ಮಂತ್ರವನ್ನು ಹಲವು ಬಾರಿ ಪಠಿಸಿರಬೇಕು, ಆದರೆ ನಿಮಗೆ ಅದರ ಹಿಂದಿ ಅರ್ಥವು ಅಷ್ಟೇನೂ ಗೊತ್ತಿಲ್ಲ ಎಂದಾದಲ್ಲಿ ಅದನ್ನು ಅರ್ಥಮಾಡಿಕೊಳ್ಳೋಣ. ಕನ್ನಡದಲ್ಲಿ ಗಾಯತ್ರಿ ಮಂತ್ರದಲ್ಲಿ ಬರುವ ಪ್ರತಿಯೊಂದು ಪದಗಳ ಅರ್ಥ ಏನು ಎಂಬುದನ್ನು ತಿಳಿದುಕೊಳ್ಳುವುದಾದರೆ, ಓಂ– ಸರ್ವಶಕ್ತ ದೇವರು, ಭೂರ್- ನಾವು ಹುಟ್ಟಿದ ಭೂಮಿ, ಭುವ- ಜೀವನದ ಎಲ್ಲಾ ಸಮಸ್ಯೆಗಳನ್ನು ನಾಶಮಾಡುವವನು, ಸ್ವಹ- ಜೀವನಕ್ಕೆ ಸಂತೋಷವನ್ನು ತರುವವನು, ತತ್- ಸರ್ವೋಚ್ಚ ದೇವರು, ಸವಿತೂರ್- ಸೂರ್ಯನಂತೆ ಹೊಳೆಯುವುದು, ವರೇಣ್ಯಂ- ಅತ್ಯುತ್ತಮ, ಭರ್ಗೋ- ಸೂರ್ಯನ ಕಿರಣದಂತಹ ಶುದ್ಧತೆ, ದೇವಸ್ಯ- ದೇವರಿಗೆ ಸೇರಿದವರು, ಧೀಮಹಿ- ಸ್ವ-ಗುಣವಾಗಲು ಯೋಗ್ಯವಾಗಿರುವುದು, ದಿಯೋ- ಬುದ್ಧಿಶಕ್ತಿ, ಯೋ– ಯಾರು, ನಃ – ನಮ್ಮ, ಪ್ರಚೋದಯಾತ್- ಒಳ್ಳೆಯ ಕಾರ್ಯಗಳಿಗೆ ಪ್ರೇರಣೆ, 


ವಿದ್ಯಾರ್ಥಿಗಳು ಎಷ್ಟು ಬಾರಿ ಜಪ ಮಾಡಬೇಕು?
ಗಾಯತ್ರಿ ಮಂತ್ರದ ಪಠಣವು ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿನಿತ್ಯ 108 ಬಾರಿ ಈ ಮಂತ್ರವನ್ನು ಪಠಿಸುವ ವಿದ್ಯಾರ್ಥಿಗೆ ಶಿಕ್ಷಣ ಪಡೆಯಲು ಯಾವುದೇ ತೊಂದರೆಯಾಗುವುದಿಲ್ಲ.


ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಇರುತ್ತದೆ
ನೀವು ವ್ಯಾಪಾರ ಅಥವಾ ಉದ್ಯೋಗದಲ್ಲಿ ವೈಫಲ್ಯಗಳನ್ನು ಅನುಭವಿಸುತ್ತಿದ್ದರೆ, ನೀವು ಈ ಮಂತ್ರವನ್ನು ಜಪಿಸಲು ಪ್ರಾರಂಭಿಸಬೇಕು. ನೀವು ಪ್ರತಿದಿನ ಈ ಮಂತ್ರವನ್ನು ಜಪಿಸಿದರೆ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.


ಇದನ್ನೂ ಓದಿ-Baba Vanga Prediction: ಮುಂದಿನ ವರ್ಷ ಭೂಮಿಯ ಮೇಲೆ ಭಾರಿ ಹಾಹಾಕಾರ! 2023ರ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ


ಸಂತಾನ ಸುಖ ಪ್ರಾಪ್ತಿಗಾಗಿ
ಬಹುಕಾಲದಿಂದ ಸಂತಾನ ಪ್ರಾಪ್ತಿಗಾಗಿ ಪ್ರಯತ್ನಿಸುತ್ತಿರುವ ಜನರು ಸೂರ್ಯೋದಯಕ್ಕೆ ಮುನ್ನ 1100 ಬಾರಿ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇದರಿಂದ, ನಿಮಗೆ ಶೀಘ್ರದಲ್ಲೇ ಸಂತಾನ ಸುಖ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.


ಇದನ್ನೂ ಓದಿ-Makar Sankranti 2023: ಮಕರ ಸಂಕ್ರಾಂತಿಯ ಬಳಿಕ ಈ 4 ರಾಶಿಗಳ ಜನರ ಭಾಗ್ಯದಲ್ಲಿ ಭಾರಿ ಬದಲಾವಣೆ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.