Gems For Prosperity: ಮನೆಯ ಸುಖ-ಸಂತೋಷ ಹಾಗೂ ಸಮೃದ್ಧಿಗಾಗಿ ವ್ಯಕ್ತಿ ಸಾಕಷ್ಟು ಕಷ್ಟಪಡುತ್ತಾನೆ. ಕುಟುಂಬದ ಆವಶ್ಯಕತೆಗಳನ್ನು ಪೂರೈಸಲು ಸಾಧ್ಯವಾದಷ್ಟು ಪ್ರಾಯತ್ನಿಸುತ್ತಾನೆ. ಆದರೆ, ಹಲವು ಬಾರಿ ಜಾತಕದಲ್ಲಿನ ಗ್ರಹಗಳ ದೆಸೆಯ ಕಾರಣ ವ್ಯಕ್ತಿಗೆ ಎಷ್ಟೇ ಕಷ್ಟಪಟ್ಟರು  ನಿರೀಕ್ಷೆಗೆ ತಕ್ಕಂತೆ ಫಲ ಪ್ರಾಪ್ತಿಯಾಗುವುದಿಲ್ಲ. ಹೀಗಿರುವಾಗ ವ್ಯಕ್ತಿ ತನ್ನ ಜೀವನದಲ್ಲಿ ಸಾಕಷ್ಟು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಜಾತಕದಲ್ಲಿನ ಗ್ರಹಗಳ ಶುಭ ಪ್ರಭಾವವನ್ನು ಹೆಚ್ಚಿಸಲು ರತ್ನ ಶಾಸ್ತ್ರದಲ್ಲಿ ಹಲವು ಉಪಾಯಗಳನ್ನು ಹೇಳಲಾಗಿದೆ. ರತ್ನ ಶಾಸ್ತ್ರದ ಪ್ರಕಾರ, ಕೆಲ ರತ್ನಗಳನ್ನು ಧರಿಸಿದ ಬಳಿಕ ವ್ಯಕ್ತಿಯ ಜೀವನದಲ್ಲಿ ಅಪಾರ ಸಂಪತ್ತು ಹರಿದುಬರುತ್ತದೆ ಎನ್ನಲಾಗಿದೆ. ಇಂತಹ ಮೂರು ವಿಶೇಷ ರತ್ನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ


COMMERCIAL BREAK
SCROLL TO CONTINUE READING

ಧನ-ಸಮೃದ್ಧಿಗೆ ಈ ರತ್ನ ಧರಿಸಿ
ಜೆಡ್  ಸ್ಟೋನ್

ರತ್ನ ಶಾಸ್ತ್ರದಲ್ಲಿ ಹಲವು ರತ್ನಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳ ಧಾರಣೆ ತುಂಬಾ ಲಾಭಕಾರಿಯಾಗಿದೆ. ಅವುಗಳಲ್ಲಿ ಜೆಡ್ ಸ್ಟೋನ್ ಕೂಡ ಒಂದು. ಇದನ್ನು ಧರಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಬಳಗೊಳ್ಳುತ್ತದೆ. ಇದಲ್ಲದೆ ಕೆಲಸದ ಪ್ರತಿ ವ್ಯಕ್ತಿಯ ಏಕಾಗ್ರತೆ ಹೆಚ್ಚಾಗುತ್ತದೆ. ಬುದ್ಧಿಯ ವಿಕಾಶಕ್ಕೆ ಈ ರತ್ನ ತುಂಬಾ ಉಪಯುಕ್ತವಾಗಿದೆ. ಜೆಡ್ ಸ್ಟೋನ್, ಪಚ್ಚೆಯ ಉಪರತ್ನವಾಗಿದೆ. ಇದು ಆರ್ಥಿಕ ಮುಗ್ಗಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ರತ್ನವನ್ನು ಧರಿಸುವುದರಿಂದ ವ್ಯಕ್ತಿ ವ್ಯಾಪಾರದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆದಾಯದ ಹೊಸ ಮೂಲಗಳಿಗೆ ಇದು ಅತ್ಯಂತ ಶುಭಕಾರಿಯಾಗಿದೆ. 


ಯಾರು ಈ ರತ್ನವನ್ನು ಧರಿಸಬೇಕು ? - ಜೋತಿಷ್ಯ ಆಚಾರ್ಯರ ಸಲಹೆಯನ್ನು ಪಡೆದು ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಹಾಗೂ ಕುಂಭ ರಾಶಿಯ ಜಾತಕ ಹೊಂದಿದವರು ಈ ರತ್ನವನ್ನು ಧರಿಸಬೇಕು. 


ಗ್ರೀನ್ ಎವೆನ್ಚ್ಯುರಿನ್ ರತ್ನ
ಜೆಡ್ ಸ್ಟೋನ್ ಅನ್ನು ಹೊರತುಪಡಿಸಿ ಮತ್ತೊಂದು ರತ್ನ ಕೂಡ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವ್ಯಾಪಾರಿಗಳಿಗೆ ಈ ರತ್ನ ತುಂಬಾ ಲಾಭಕಾರಿಯಾಗಿದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರತ್ನ ಧರಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿಯಲ್ಲಿ ಭಾರಿ ಸುಧಾರಣೆಯಾಗುತ್ತದೆ ವ್ಯಕ್ತಿಗೆ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. 


ಯಾರು ಈ ರತ್ನವನ್ನು ಧರಿಸಬೇಕು? -  ತುಲಾ ರಾಶಿಯ ಜಾತಕದವರಿಗೆ ಗ್ರೀನ್ ಎವೆನ್ಚ್ಯುರಿನ್ ರತ್ನ ತುಂಬಾ ಲಾಭಕಾರಿ ಎಂದು ಹೇಳಲಾಗಿದೆ.


ಟೈಗರ್ ರತ್ನ
ರತ್ನ ಶಾಸ್ತ್ರದ ಪ್ರಕಾರ ಅತ್ಯಂತ ಶೀಘ್ರ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ತೋರಿಸುವ ರತ್ನ ಇದಾಗಿದೆ ಎಂದು ಹೇಳಲಾಗಿದೆ. ಇದನ್ನು ಧರಿಸುವುದರಿಂದ ವ್ಯಕ್ತಿಯ ದೃಢ ಇಚ್ಛಾಶಕ್ತಿ ಹೆಚ್ಚಾಗುತ್ತದೆ ಹಾಗೂ ವ್ಯಕ್ತಿ ಕಠಿಣ ಪರಿಸ್ಥಿತಿಯಲ್ಲೂ ಕೂಡ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಾನೆ. ಇದನ್ನು ಧಾರಿಸುವುದರಿಂದ ವ್ಯಕ್ತಿಗಳ ನಿಂತುಹೋದ ಕೆಲಸಗಳು ಕೂಡ ವೇಗ ಪಡೆದುಕೊಳ್ಳಲಾರಂಭಿಸುತ್ತವೆ ಎನ್ನಲಾಗುತ್ತದೆ. 


ಇದನ್ನೂ ಓದಿ-Astro Tips: ದಿಢೀರ್ ಹಣ ಪಡೆಯಲು ಪರಿಣಾಮಕಾರಿ ಮಾರ್ಗಗಳು


ಯಾರು ಈ ರತ್ನವನ್ನು ಧರಿಸಬೇಕು ? - ಸರಿಯಾದ ವಿಧಾನದಿಂದ ಒಂದು ವೇಳೆ ಮಿಥುನ ರಾಶಿಯ ಜನರು ಈ ರತ್ನವನ್ನು ಧರಿಸಿದರೆ ಅವರಿಗೆ ಸಾಕಷ್ಟು ಶುಭ ಪರಿಣಾಮಗಳು ಪಾರಪ್ತಿಯಾಗುತ್ತವೆ. ಹಾಗೆ ನೋಡಿದರೆ, ಯಾವುದೇ ರಾಶಿಯ ಜಾತಕ ಹೊಂದಿದವರು ಈ ರತ್ನವನ್ನು ಧರಿಸಬಹುದು . 


ಇದನ್ನೂ ಓದಿ-Vaishakh Purnima 2022: ತುಂಬಾ ವಿಶಿಷ್ಠವಾಗಿದೆ ಈ ಬಾರಿಯ ಹುಣ್ಣಿಮೆ, ಈ ಒಂದು ಕೆಲಸ ಹಣದ ಸುರಿಮಳೆಗೆ ಕಾರಣವಾಗಲಿದೆ


(Disclaimer  - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.