Vastu Tips: ತುಂಬಾ ಪ್ರಭಾವಶಾಲಿಯಾಗಿದೆ ಈ ಪಂಚಮುಖಿ ದೀಪದ ಉಪಾಯ

Vastu Tips in Kannada - ಮನೆಯಲ್ಲಿ ಯಾವುದೇ ಒಂದು ವಾಸ್ತು ದೋಷ ಇದ್ದರೆ, ಅದು ನಮ್ಮ ಜೀವನದ ಹಲವು ಸಂಗತಿಗಳ ಮೇಲೆ ಪ್ರಭಾವ ಬೀರುತ್ತದೆ. ಮನೆಯ ಸದಸ್ಯರ ಏಳಿಗೆ, ಮನೆಯೊಳಗೆ ಹಣಕಾಸಿನ ಹರಿವು ಇತ್ಯಾದಿಗಳು ಪ್ರಭಾವಕ್ಕೆ ಒಳಗಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಪರಿಣಾಮಕಾರಿ ಉಪಾಯಗಳನ್ನು ಅನುಸರಿಸುವ ಮೂಲಕ ಈ ವಾಸ್ತು ದೋಷವನ್ನು ಪರಿಹಾರಿಸಬಹುದು. 

Written by - Nitin Tabib | Last Updated : May 15, 2022, 08:57 PM IST
  • ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ದೀಪ ಬೆಳಗುವುದಕ್ಕೆ ವಿಶೇಷ ಮಹತ್ವವಿದೆ ಎನ್ನಲಾಗಿದೆ.
  • ಹಸುವಿನ ತುಪ್ಪದಲ್ಲಿ ದೀಪ ಬೆಳಗುವುದರಿಂದ ಮನೆಯಲ್ಲಿನ ಎಲ್ಲಾ ರೀತಿಯ ವಾಸ್ತು ದೋಷ ನಿವಾರಣೆಯಾಗುತ್ತದೆ.
  • ಇದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗಿ ಸಾಕಷ್ಟು ಸಿರಿ ಸಂಪತ್ತು ನೀಡುತ್ತಾಳೆ.
Vastu Tips: ತುಂಬಾ ಪ್ರಭಾವಶಾಲಿಯಾಗಿದೆ ಈ ಪಂಚಮುಖಿ ದೀಪದ ಉಪಾಯ title=
Vastu Tips For Prosperity

Vastu Tips - ಜೋತಿಷ್ಯ ಮತ್ತು ಧರ್ಮಶಾಸ್ತ್ರಗಳಲ್ಲಿ ಹಲವು ಉಪಾಯಗಳನ್ನು ಹೇಳಲಾಗಿದ್ದು, ಅವುಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಬಹುದು. ಈ ಉಪಾಯಗಳನ್ನು ಅನುಸರಿಸಿದರೆ, ನಮ್ಮ ಜೀವನದ ಹಲವು ತೊಂದರೆಗಳಿಂದ ನಾವು ಪಾರಾಗಬಹುದು. ಇದಲ್ಲದೆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಕೂಡ ನೆಲೆಸುತ್ತದೆ. ಮನೆಯ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗಿ, ಅವರು ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ. 

ಪಂಚಮುಖಿ ದೀಪ ಇದು ಮನೆಯ ನಕಾರಾತ್ಮಕ ಶಕ್ತಿ ತೊಲಗಿಸಿ, ಸಕಾರಾತ್ಮಕ ಶಕ್ತಿಯ ವಾಸಕ್ಕೆ ಒಂದು ಅತ್ಯದ್ಭುತ ಉಪಾಯವಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ದೀಪ ಬೆಳಗುವುದಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿ ದೇವರ ಪೂಜೆಯಾಗಲಿ, ಶುಭಕಾರ್ಯಗಳಾಗಿರಲಿ ಅಥವಾ ಸಂಜೆಯ ಹೊತ್ತು ತುಳಿಸಿ ಪೂಜೆಯ ವೇಳೆಯೇ ಆಗಿರಲಿ, ದೀಪ ಬೆಳಗಿಸದೆ ಪೂಜೆ ಅಪೂರ್ಣ ಎನ್ನಲಾಗುತ್ತದೆ. ಮನೆಯಲ್ಲಿ ದೇವಿ ಲಕ್ಷ್ಮಿಯ ವಾಸಕ್ಕಾಗಿ ಮನೆಯ ಮುಖ್ಯದ್ವಾರದ ಬಳಿ ನಿತ್ಯ ಸಾಯಂಕಾಲ ಹಸುವಿನ ತುಪ್ಪದ ದೀಪ ಬೆಳಗಲು ಸಲಹೆ ನೀಡಲಾಗುತ್ತದೆ. ಇದಲ್ಲದೆ ಪ್ರತಿ ಮಂಗಳವಾರ ಪೂಜೆಯ ವೇಳೆ ಚಿರಂಜೀವಿ ಆಂಜನೆಯನ ಮುಂದೆ ಪಂಚಮುಖಿ ದೀಪ ಬೆಳಗುವುದರಿಂದ ಮನೆಯಲ್ಲಿ ಸುಖ-ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಇದು ಮನೆಯಲ್ಲಿನ ಎಲ್ಲಾ ರೀತಿಯ ನಕಾರಾತ್ಮಕತೆಯನ್ನು ತೊಲಗಿಸಿ, ಸಕಾರಾತ್ಮಕತೆ ಸಂಚರಿಸುವಂತೆ ಮಾಡುತ್ತದೆ. ಹಸುವಿನ ತುಪ್ಪದಲ್ಲಿ ದೀಪ ಬೆಳಗುವುದರಿಂದ ಮನೆಯಲ್ಲಿನ ಎಲ್ಲಾ ರೀತಿಯ ವಾಸ್ತು ದೋಷ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. 

ಈ ಸಂಗತಿಗಳನ್ನು ನೆನಪಿನಲ್ಲಿಡಿ 
>> ಸ್ವಚ್ಛತೆ ಇರುವ ಹಾಗೂ ಜನರು ಪ್ರೀತಿಯಿಂದ ಬಾಳುವ ಸ್ಥಳದಲ್ಲಿ ದೇವಿ ಲಕ್ಷ್ಮಿಯ ವಾಸ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ.  ಸಂಜೆಯ ಹೊತ್ತು ತುಳಸಿ ಬಳಿ ಮತ್ತು ಮನೆಯ ಮುಖ್ಯದ್ವಾರದ ಎರಡು ಬದಿ  ಹಸುವಿನ ತುಪ್ಪದ ದೀಪ ಬೆಳಗಿ. ಇದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗಿ  ಸಾಕಷ್ಟು  ಸಿರಿ ಸಂಪತ್ತು ನೀಡುತ್ತಾಳೆ. 

>> ಮನೆಯಲ್ಲಿ ಆಹಾರ ಮತ್ತು ನೀರು ಎಂದಿಗೂ ವ್ಯರ್ಥವಾಗಲು ಬಿಡಬೇಡಿ. ಇಲ್ಲದಿದ್ದರೆ ಈ ತಪ್ಪು ನಿಮ್ಮನ್ನು ಬಡವರನ್ನಾಗಿಸಬಹುದು. 

ಇದನ್ನೂ  ಓದಿ-Palm Reading : ಅಂಗೈಯಲ್ಲಿ ರಾಜಯೋಗ ನೋಡುವುದು ಹೇಗೆ? ಇಲ್ಲಿದೆ ನೋಡಿ

>> ಮನೆಯಲ್ಲಿ ಎಂದಿಗೂ ತುಕ್ಕು ಹಿಡಿದ ವಸ್ತುಗಳು, ನಿಂತುಹೋದ ಗಡಿಯಾರಗಳು, ಕೆಟ್ಟುಹೋದ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ. ಇವು ನಕಾರಾತ್ಮಕ ಶಕ್ತಿಯ ಮೂಲಗಳಾಗಿವೆ ಮತ್ತು ಮನೆಯಲ್ಲಿ ವಾಸ್ತು ದೋಷವನ್ನು ಉಂಟುಮಾಡುತ್ತವೆ. ಇದರಿಂದ ಮನೆಯ ಜನರ ಏಳಿಗೆಯಲ್ಲಿ ಅಡೆತಡೆಗಳು ಉಂಟಾಗುತ್ತವೆ. ಅವರು ಒತ್ತಡ ಮತ್ತು ರೋಗಗಳಿಗೆ ಗುರಿಯಾಗುತ್ತಾರೆ.

ಇದನ್ನೂ ಓದಿ-Chandra Grahan 2022: ಚಂದ್ರ ಗ್ರಹಣದ ದಿನ ರಕ್ತ ರಂಗಿನಲ್ಲಿ ಚಂದ್ರನ ಗೋಚರ, ಇಲ್ಲಿದೆ ಬ್ಲಡ್ ಮೂನ್ ಗೋಚರದ ಸಮಯ

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News