Gemology: ರತ್ನವನ್ನು ಧರಿಸುವುದರಿಂದ, ಜಾತಕದ ಸಂಬಂಧಿತ ಗ್ರಹವು ಬಲಶಾಲಿಯಾಗುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ರತ್ನಗಳು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಹಲವು ಉಲ್ಲೇಖಗಳಿವೆ. ರತ್ನ ಶಾಸ್ತ್ರದಲ್ಲಿ ಪ್ರತಿ ಗ್ರಹಕ್ಕೂ ರತ್ನ ಮತ್ತು ಉಪರತ್ನಗಳನ್ನು ನೀಡಲಾಗಿದೆ. ಇದರೊಂದಿಗೆ ಅವುಗಳನ್ನು ಧರಿಸಲು ಅಗತ್ಯ ನಿಯಮಗಳನ್ನೂ ತಿಳಿಸಲಾಗಿದೆ. ಆದರೆ ಎಲ್ಲರಿಗೂ ಈ ಬಗ್ಗೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ. ಹಾಗಾಗಿಯೇ, ಹಲವರು ತಮ್ಮ ಜಾತಕದ ಅನುಸಾರವಾಗಿ ರತ್ನ ಧರಿಸಿದರೂ ಕೂಡ ಅವರಿಗೆ ರತ್ನವನ್ನು ಧರಿಸುವುದರ ಸಂಪೂರ್ಣ ಪ್ರಯೋಜನ ಲಭ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

ರತ್ನಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳು :
ವಿಜ್ಞಾನದ ಪ್ರಕಾರ, ನಮ್ಮ ದೇಹವು ನಿರಂತರವಾಗಿ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ಕಳೆದುಕೊಳ್ಳುತ್ತಲೇ ಇರುತ್ತದೆ. ಇದಕ್ಕಾಗಿ ಶಕ್ತಿಯನ್ನು ಪಡೆಯುವ ಅತ್ಯಂತ ಪರಿಣಾಮಕಾರಿ ಸ್ಥಳವೆಂದರೆ ನಮ್ಮ ಹಣೆಯ ಎರಡು ಹುಬ್ಬುಗಳ ನಡುವಿನ ಸ್ಥಳ. ಆದರೆ ಹೆಚ್ಚಿನ ಶಕ್ತಿಯು ಕಾಲ್ಬೆರಳುಗಳಿಂದ ಕಳೆದುಹೋಗುತ್ತದೆ. ರತ್ನವನ್ನು (Gemstone)  ಹಣೆಯ ಮೇಲೆ ಎರಡು ಹುಬ್ಬುಗಳ ನಡುವಿನ ಹಣೆಯ ಮೇಲೆ ಧರಿಸಿದಾಗ ಮಾತ್ರ ಅದರ ನಿಜವಾದ ಪ್ರಯೋಜನದ ಬಗ್ಗೆ ತಿಳಿಯುತ್ತದೆ. ಆದ್ದರಿಂದಲೇ ರಾಜ-ಮಹಾರಾಜರು ಕಿರೀಟದಲ್ಲಿ ರತ್ನಗಳನ್ನು ಧರಿಸುತ್ತಿದ್ದರು. ಆದರೆ, ಇಂದಿನ ಕಾಲದಲ್ಲಿ ಈ ರೀತಿಯ ರತ್ನಗಳನ್ನು ಧರಿಸಲು ಸಾಧ್ಯವಿಲ್ಲ. 


ಇದನ್ನೂ ಓದಿ- Gemology: ರತ್ನಗಳನ್ನು ಧರಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ


ಮತ್ತೊಂದೆಡೆ, ನಾವು ರತ್ನಗಳನ್ನು (Ratna) ಧರಿಸಲು ದೇಹದ ಇತರ ಸ್ಥಳಗಳ ಬಗ್ಗೆ ಹೇಳುವುದಾದರೆ, ಕುತ್ತಿಗೆ, ಹೃದಯ, ಮಣಿಕಟ್ಟು ಮತ್ತು ಬೆರಳುಗಳ ಬಳಿ ಇರುವ ಸ್ಥಳಗಳಲ್ಲಿ ರತ್ನಗಳನ್ನು ಧರಿಸಬಹುದು. ಕೈಯ ಪ್ರತಿಯೊಂದು ಬೆರಳೂ ಕೆಲವು ಗ್ರಹಗಳಿಗೆ ಸಂಬಂಧಿಸಿರುವುದರಿಂದ, ರತ್ನಗಳನ್ನು ಸಾಮಾನ್ಯವಾಗಿ ಬೆರಳುಗಳಲ್ಲಿ ಧರಿಸಲಾಗುತ್ತದೆ. 


ಇದನ್ನೂ ಓದಿ- Gemology : ಈ 4 ರತ್ನಗಳನ್ನ ಧರಿಸಿ ನಿಮ್ಮ ಅದೃಷ್ಟ ಬದಲಾಗುತ್ತದೆ : ಅಲ್ಲದೆ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ


ಪ್ರತಿಯೊಂದು ರತ್ನವು ವಿಭಿನ್ನ ಸಮಯಗಳಲ್ಲಿ ಅದರ ಪರಿಣಾಮವನ್ನು ತೋರಿಸುತ್ತದೆ:
ವ್ಯಕ್ತಿಯು ರತ್ನವನ್ನು ಧರಿಸಿದ ತಕ್ಷಣ, ಅದರ ಪರಿಣಾಮವು ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ಕಾಯುತ್ತಾನೆ. ರತ್ನ ಶಾಸ್ತ್ರದ ಪ್ರಕಾರ, ಪ್ರತಿ ರತ್ನದ ಪ್ರಭಾವವನ್ನು ತೋರಿಸುವ ಸಮಯ ವಿಭಿನ್ನವಾಗಿರುತ್ತದೆ. ಅವುಗಳನ್ನು ಧರಿಸುವ ಸಮಯದ ಕುರಿತು ಹೇಳುವುದಾದರೆ, ಮುತ್ತು 3 ದಿನಗಳಲ್ಲಿ ತನ್ನ ಪ್ರಭಾವವನ್ನು ತೋರಿಸುತ್ತದೆ. ರೂಬಿ 30 ದಿನಗಳು, ಹವಳ 21 ದಿನಗಳು, ಪಚ್ಚೆ 7 ದಿನಗಳು, ನೀಲಮಣಿ 15 ದಿನಗಳು, ವಜ್ರ 22 ದಿನಗಳು, ಗೋಮೇಧಿಕ 30 ದಿನಗಳಲ್ಲಿ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಮಹಿಳೆಯರು ಎಡಗೈಯಲ್ಲಿ ಮತ್ತು ಪುರುಷರು ಬಲಗೈಯಲ್ಲಿ ರತ್ನವನ್ನು ಧರಿಸಬೇಕು ಎಂಬುದನ್ನು ನೆನಪಿನಲ್ಲಿಡಿ. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.