Gemology: ರತ್ನಗಳನ್ನು ಧರಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ

ಯಶಸ್ಸಿಗಾಗಿ ಸರಿಯಾದ ರತ್ನವನ್ನು ಧರಿಸುವುದರ ಜೊತೆಗೆ, ಸರಿಯಾದ ದಿನ, ಸಮಯದಲ್ಲಿ  ಅದನ್ನು ಧರಿಸುವ ವಿಧಾನ ಕೂಡ ಬಹಳ ಮುಖ್ಯ. ಆದ್ದರಿಂದ, ರತ್ನವನ್ನು ಧರಿಸುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

Written by - Yashaswini V | Last Updated : Jun 25, 2021, 01:05 PM IST
  • ರತ್ನದ ಕಲ್ಲು ಧರಿಸುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ
  • ಸರಿಯಾದ ರತ್ನದ ಹೊರತಾಗಿ, ಅದನ್ನು ಧರಿಸುವ ದಿನ, ಸಮಯ, ವಿಧಾನವೂ ಕೂಡ ಬಹಳ ಮುಖ್ಯ
  • ರತ್ನದ ಕಲ್ಲುಗಳು ಯಶಸ್ಸನ್ನು ತರುತ್ತವೆ ಎಂದು ಹೇಳಲಾಗುತ್ತದೆ
Gemology: ರತ್ನಗಳನ್ನು ಧರಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ title=
ರತ್ನಗಳನ್ನು ಧರಿಸುವಾಗ ಇವುಗಳ ಬಗ್ಗೆ ಇರಲಿ ಎಚ್ಚರ, ಇಲ್ಲದಿದ್ದರೆ ನಷ್ಟವಾಗಬಹುದು

ಬೆಂಗಳೂರು: ರತ್ನ ಮತ್ತು ಉಪ-ರತ್ನವನ್ನು ರತ್ನಶಾಸ್ತ್ರದ (Gemology) ಜಾತಕದ ಪ್ರತಿಯೊಂದು ಗ್ರಹವನ್ನು (Planet) ಬಲಪಡಿಸುವ ಪರಿಹಾರವಾಗಿ ಸೂಚಿಸಲಾಗಿದೆ. ಈ ರತ್ನಗಳನ್ನು ಧರಿಸುವುದರಿಂದ ಜನರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಾಧ್ಯ ಎಂದು ಹಲವರು ನಂಬುತ್ತಾರೆ. ರತ್ನವು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹಾದಿಯಲ್ಲಿ ಬರುವ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅನೇಕ ಬಾರಿ, ಕುಂಡಲಿಯ ಪ್ರಕಾರ ಸರಿಯಾದ ರತ್ನಗಳನ್ನು ಧರಿಸಿದ ನಂತರವೂ ಕೆಲವರಿಗೆ ಸರಿಯಾದ ಫಲಿತಾಂಶ ದೊರೆಯುವುದಿಲ್ಲ. ಇದಕ್ಕೆ ಹಲವು ಕಾರಣ ಇರಬಹುದು.  ರತ್ನದ ಕಲ್ಲುಗಳನ್ನು ಸರಿಯಾದ ರೀತಿಯಲ್ಲಿ ಧರಿಸದಿರುವುದು, ಸರಿಯಾದ ಸಮಯದಲ್ಲಿ ರತ್ನವನ್ನು ಧರಿಸದಿರುವುದು ಸೇರಿದಂತೆ ಇದಕ್ಕೆ ಹಲವು ಕಾರಣಗಳಿರಬಹುದು.

ರತ್ನವನ್ನು ಧರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
- ರತ್ನದಿಂದ ಮಾಡಿದ ಉಂಗುರವನ್ನು ಅಥವಾ ರತ್ನದಿಂದ ಮಾಡಿರುವ ಯಾವುದೇ ಆಭರಣಗಳನ್ನು ಧರಿಸುವ ಮೊದಲು ಅದನ್ನು ಹಾಲಿಗೆ ಹಾಕಿ. ಅದರ ನಂತರ ಅದನ್ನು ಶುದ್ಧ ನೀರಿನಿಂದ ತೊಳೆದು ಧರಿಸಿ. ರಾತ್ರಿಯಿಡೀ ರತ್ನದ ಕಲ್ಲುಗಳನ್ನು ಹಾಲಿಗೆ ಹಾಕಬೇಡಿ ಏಕೆಂದರೆ ಕೆಲವು ರತ್ನಗಳು ಹಾಲನ್ನು ಹೀರಿಕೊಳ್ಳುತ್ತವೆ, ಇದು ರತ್ನದ ಕಲ್ಮಶಗಳಿಗೆ ಕಾರಣವಾಗುತ್ತದೆ.

- ಸಾಧ್ಯವಾದರೆ, ರತ್ನವನ್ನು (Gemstones) ಧರಿಸುವ ಮೊದಲು, ನಿಮ್ಮ ದೇವತೆಯ ವಿಗ್ರಹವನ್ನು ಸ್ಪರ್ಶಿಸಿ.

ಇದನ್ನೂ ಓದಿ- Dream Interpretation: ಕನಸಿನಲ್ಲಿ ಯಾವ ದೇವರನ್ನು ಕಂಡರೆ ಏನು ಫಲ

- ಚತುರ್ಥಿ, ನವಮಿ ಅಥವಾ ಚತುರ್ದಶಿ ದಿನದಂದು ಎಂದಿಗೂ ರತ್ನಗಳನ್ನು ಧರಿಸಬೇಡಿ. ಅಲ್ಲದೆ, ರತ್ನದ ಕಲ್ಲು ಧರಿಸಿದ ದಿನದಂದು ಚಂದ್ರನು ನಿಮ್ಮ ರಾಶಿಚಕ್ರದಿಂದ 4,8,12 ನೇ ಮನೆಯಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಅಮಾವಾಸ್ಯ, ಗ್ರಹಣ ಮತ್ತು ಸಂಕ್ರಾಂತಿಯ ದಿನದಂದೂ ಕೂಡ ರತ್ನದ ಕಲ್ಲುಗಳನ್ನು ಧರಿಸಬಾರದು.

- ಯಾರೇ ಆದರೂ ರತ್ನವನ್ನು ಧರಿಸಲು ಜ್ಯೋತಿಷಿಗಳ ಬಳಿ ಸರಿಯಾದ ಸಮಯವನ್ನು (Right way to wear gemstone) ಕೇಳಿ ರತ್ನವನ್ನು ಧರಿಸಿದರೆ ಒಳ್ಳೆಯದು. 

- ಸಮುದ್ರದಲ್ಲಿ ಸಿಗುವಂತಹ ಮುತ್ತು, ಹವಳದಂತಹ ರತ್ನಗಳನ್ನು ಅಶ್ವಿನಿ, ರೋಹಿಣಿ, ಚಿತ್ರ, ಸ್ವಾತಿ ಮತ್ತು ವಿಶಾಖ ನಕ್ಷತ್ರಗಳಲ್ಲಿ ಧರಿಸುವುದರಿಂದ ವಿಶೇಷ ಪ್ರಯೋಜನ ಲಭ್ಯವಾಗಲಿದೆ. ಮತ್ತೊಂದೆಡೆ, ವಿವಾಹಿತ ಮಹಿಳೆಯರು ಪುನರ್ವಸು, ಪುಶ್ಯ ನಕ್ಷತ್ರದಲ್ಲಿ ರತ್ನಗಳನ್ನು ಧರಿಸಬಾರದು. ರೇವತಿ, ಅಶ್ವಿನಿ, ಹಸ್ತಾ, ಚಿತ್ತ, ಅನುರಾಧಾ ನಕ್ಷತ್ರಗಳಲ್ಲಿ ರತ್ನಗಳನ್ನು ಧರಿಸುವುದು ಅವರಿಗೆ ಶುಭ ಎನ್ನಲಾಗುತ್ತದೆ.

ಇದನ್ನೂ ಓದಿ- Vastu Tips: ಮನೆಯ ಡೋರ್ ಮ್ಯಾಟ್ ಕೆಳಗೆ ಈ ವಸ್ತುವನ್ನು ಇಡಿ, ನಿಮ್ಮ ಅದೃಷ್ಟ ಬದಲಾಯಿಸಿ

-ಹವಳ ಮತ್ತು ಮುತ್ತು ಹೊರತುಪಡಿಸಿ, ಮಾಣಿಕ್ಯ, ಪಚ್ಚೆ, ನೀಲಮಣಿ, ವಜ್ರ ಸೇರಿದಂತೆ ಇತರ ಅಮೂಲ್ಯ ರತ್ನಗಳು ಎಂದಿಗೂ ಹಳೆಯದಾಗುವುದಿಲ್ಲ. ಇವು ಶಾಶ್ವತವಾಗಿರುತ್ತವೆ ಮತ್ತು ಬದಲಾಯಿಸುವ ಅಗತ್ಯವಿಲ್ಲ. ಮತ್ತೊಂದೆಡೆ, ಮುತ್ತುಗಳ ಹೊಳಪು ಕಡಿಮೆಯಾದರೆ ಮತ್ತು ಹವಳದಲ್ಲಿ ಗೀರು ಇದ್ದರೆ, ಅವುಗಳನ್ನು ಬದಲಾಯಿಸಬೇಕು.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ.  ಝೀ ಹಿಂದೂಸ್ಥಾನ್ ಕನ್ನಡ ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News