ನವದೆಹಲಿ : ತುಪ್ಪ ಅಡುಗೆಯ ರುಚಿಯನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳನ್ನು (Ghee Benefits) ನೀಡುತ್ತದೆ. ತುಪ್ಪದ ಸೇವನೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ತುಪ್ಪದಲ್ಲಿರುವ ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು (Ghee for skin care) ಕೂಡಾ ದೂರ ಮಾಡುತ್ತದೆ. ತುಪ್ಪವನ್ನು ನೈಟ್ ಕ್ರೀಮ್ ರೂಪದಲ್ಲಿಯೂ ಬಳಸಬಹುದು. ಮುಖಕ್ಕೆ ತುಪ್ಪವನ್ನು ಬಳಸುವುದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. 


COMMERCIAL BREAK
SCROLL TO CONTINUE READING

ಒಡೆದ ತುಟಿಗಳ ಸಮಸ್ಯೆ :
ಚಳಿಗಾಲದಲ್ಲಿ ತುಟಿಗಳು ಒಡೆಯುವ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ತುಪ್ಪವನ್ನು (Ghee benefits) ಹಚ್ಚಿ. ತುಟಿ ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ. 


ಇದನ್ನೂ ಓದಿ : Evening Walk:ಸಂಜೆ ಹೊತ್ತು ಅರ್ಧ ಗಂಟೆ ವಾಕ್ ಏಕೆ ಆವಶ್ಯಕ? ಹಲವು ರೋಗಗಳ ರಾಮಬಾಣ ಚಿಕಿತ್ಸೆ


ಚರ್ಮದ ಸೋಂಕು :
ಚರ್ಮದ ಸೋಂಕನ್ನು (Skin care) ತೆಗೆದುಹಾಕಲು ತುಪ್ಪ ಬಹಳ ಉಪಯುಕ್ತ. ತುರಿಕೆ, ತ್ವಚೆಯ ಶುಷ್ಕತೆ, ಮುಂತಾದ ಸಮಸ್ಯೆ ದೂರವಾಗುತ್ತದೆ. ಮಲಗುವ ಮುನ್ನ ತುಪ್ಪವನ್ನು ಹಚ್ಚುವುದರಿಂದ ತ್ವಚೆಯು ಹೊಳೆಯುತ್ತದೆ. ಆದರೆ ಮೊದಲೇ  ಆಯಿಲಿ ಸ್ಕಿನ್ ಇದ್ದರೆ, ತುಪ್ಪವನ್ನು ಬಳಸುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.  


ಕಪ್ಪು ಕಲೆಗಳ ಮೇಲೆ ಪರಿಣಾಮಕಾರಿ : 
ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ತುಪ್ಪ ಸಹಕಾರಿ. ಮುಖದಲ್ಲಿ ಕಪ್ಪು ಕಲೆಗಳು ಮತ್ತು ಕಪ್ಪು ಕಲೆಗಳ ಸಮಸ್ಯೆ ಇದ್ದರೆ, ರಾತ್ರಿ ತುಪ್ಪ ಹಚ್ಚಿ ಮಲಗಿಕೊಳ್ಳಿ. ನೀವು ಇದನ್ನು ರಾತ್ರಿ ಕ್ರೀಮ್ (Night cream)  ಆಗಿಯೂ ಬಳಸಬಹುದು.  


ಸನ್ ಬರ್ನ್ ಸಮಸ್ಯೆ :
ಸೂರ್ಯನ ಬಲವಾದ ಕಿರಣಗಳಿಂದಾಗಿ ಅನೇಕ ಬಾರಿ ಸನ್ಬರ್ನ್ (Sun burn) ಸಮಸ್ಯೆ ಉಂಟಾಗುತ್ತದೆ. ತುಪ್ಪವನ್ನು ಬಳಸುವುದರಿಂದ ಈ  ಸಮಸ್ಯೆ ದೂರವಾಗುತ್ತದೆ. ಇದು ಮುಖದ ಮೇಲಿನ ಗುರುತುಗಳನ್ನು ತೆಗೆದುಹಾಕುತ್ತದೆ.  ತುಪ್ಪವನ್ನು ಹಚ್ಚಿ ರಾತ್ರಿಯಿಡೀ ಹಾಗೆಯೇ ಬಿಡಲು ಇಷ್ಟವಾಗದಿದ್ದರೆ, ತುಪ್ಪವನ್ನು ಹಚ್ಚಿ ಸುಮಾರು ಒಂದು ಗಂಟೆ ಬಿಟ್ಟು ತೊಳೆಯಿರಿ. ಇದು ಕೂಡಾ ಭಾರೀ ಪರಿಣಾಮ ಬೀರುತ್ತದೆ.  


ಇದನ್ನೂ ಓದಿ : ಈ ಆರೋಗ್ಯ ಕಾರಣಗಳಿಗಾಗಿ ವಾರಕ್ಕೊಮ್ಮೆಯಾದರೂ ತಿನ್ನಬೇಕು ತೆಂಗಿನಕಾಯಿ ಚಟ್ನಿ


ಕಣ್ಣಿನ ಆಯಾಸ ದೂರವಾಗುತ್ತದೆ :
ರಾತ್ರಿ ಮಲಗುವ ಮುನ್ನ ತುಪ್ಪವನ್ನು ಕಣ್ಣಿನ ಸುತ್ತ ವೃತ್ತಾಕಾರವಾಗಿ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಕಣ್ಣಿನ ಆಯಾಸ ನಿವಾರಣೆಯಾಗುತ್ತದೆ ಮತ್ತು ಕಣ್ಣಿನ ಕೆಳಗಿರುವ ಬ್ಲಾಕ್ ಸರ್ಕಲ್ (black circle) ಕೂಡಾ ಕಡಿಮೆಯಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.