ಬೆಂಗಳೂರು  : ಜ್ಯೋತಿಷ್ಯದಲ್ಲಿ, ಯಾವುದೇ ವ್ಯಕ್ತಿಯ ಹೆಸರನ್ನು ಅವನ ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ. ಹೆಸರಿನ ಮೂಲಕ ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವದ ಬಗ್ಗೆ ಲೆಕ್ಕ ಹಾಕಲಾಗುತ್ತದೆ.  ಹೆಸರಿನ ಆಧಾರದ ಮೇಲೆ ವ್ಯಕ್ತಿಯ ಜೀವನದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು.ಜ್ಯೋತಿಷ್ಯದ ಪ್ರಕಾರ, ಹೆಸರಿನ ಆಧಾರದ ಮೇಲೆ, ಒಬ್ಬರ ಗುಣ ಸ್ವಭಾವ, ಇಷ್ಟ-ಅನಿಷ್ಟಗಳು, ವೃತ್ತಿ, ಪ್ರೀತಿ ಮತ್ತು ವೈವಾಹಿಕ ಜೀವನ ಇತ್ಯಾದಿಗಳನ್ನು ತಿಳಿಯಬಹುದು.


COMMERCIAL BREAK
SCROLL TO CONTINUE READING

ಅಂತೆಯೇ, ಇಂದು ನಾವು ಸ್ವಭಾವತಃ ತುಂಬಾ ಶಾಂತವಾಗಿರುವ ಹುಡುಗಿಯರ ಬಗ್ಗೆ ತಿಳಿಸುತ್ತೇವೆ. ಇವರನ್ನು  ಸದ್ಗುಣಗಳ ಗಣಿ ಎಂದು ಕರೆಯಲಾಗುತ್ತದೆ. 


L ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರ  ಹೆಸರು : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ನೋಡಲು ಸುಂದರವಾಗಿರುತ್ತಾರೆ. ಮಾತ್ರವಲ್ಲ  ಉತ್ತಮ ಗುಣ ನಡತೆ, ಸ್ವಭಾವ ಹೊಂದಿರುತ್ತಾರೆ. ಪ್ ಇವ್ರು ಮೊದಲ ನೋಟದಲ್ಲಿಯೇ ಎದುರಿಗಿರುವವರನ್ನು ಆಕರ್ಷಿಸಿ ಬಿಡುತ್ತಾರೆ.  


ಇದನ್ನೂ ಓದಿ : ಬಿಸಿ ತವಾದ ಮೇಲೆ ನೀರನ್ನು ಏಕೆ ಹಾಕಬಾರದು? ಇದರಿಂದಾಗುವ ನಷ್ಟವೇನು?


ಅಷ್ಟೇ ಅಲ್ಲ, ಎಲ್ ಅಕ್ಷರದ ಹೆಸರಿನ ಹುಡುಗಿಯರು ಸ್ವಭಾವತಃ ತುಂಬಾ ಉಲ್ಲಾಸ ಮತ್ತು ಸ್ನೇಹಪರರು. ಅವರ ಈ ಸ್ವಭಾವದಿಂದಾಗಿ ಅವರೂ ಸುಲಭವಾಗಿ ಇತರರ ಸ್ನೇಹವನ್ನು ಸಂಪಾದಿಸಿ ಬಿಡುತ್ತಾರೆ. ಅವರು ತುಂಬಾ ಪ್ರಾಮಾಣಿಕರು ಮತ್ತು ಕಠಿಣ ಪರಿಶ್ರಮಿಗಳು ಮತ್ತು ಅದಕ್ಕಾಗಿಯೇ ಅವರು ತಮ್ಮ ವೃತ್ತಿಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಈ ಹುಡುಗಿಯರು ತಾವು ಪ್ರಾರಂಭಿಸಿದ ಕೆಲಸವನ್ನು ಮುಗಿಸಿಯೇ ಬಿಡುತ್ತಾರೆ. 


ಕುಟುಂಬದ ಸಂತೋಷವೇ ಇವರಿಗೆ ಮುಖ್ಯ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ ಹೆಸರಿನ ಹುಡುಗಿಯರು ಯಾರ ಮಾತಿಗೂ ಬೇಸರಿಸಿಕೊಳ್ಳುವುದಿಲ್ಲ. ಈ ಹುಡುಗಿಯರು ತುಂಬಾ ಮುಕ್ತ ಮನಸ್ಸಿನವರು. ತಮ್ಮ ಸಂಸಾರದ ಸುಖ-ಸಂತೋಷದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಗುಣವೂ ಅವರಲ್ಲಿದೆ. ಹಿರಿಯರನ್ನು ಗೌರವಿಸುತ್ತಾರೆ. ಯಾರೊಂದಿಗಾದರೂ ಸಂಬಂಧವನ್ನು ಬೆಳೆಸಿದರೆ,  ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. 


ಇದನ್ನೂ ಓದಿ : Akshaya Tritiya 2022: ನೌಕರಿಯಲ್ಲಿ ಬಡ್ತಿ ಪಡೆಯಲು ಹಾಗೂ ಭಾಗ್ಯೋದಯಕ್ಕೆ ಇಂದು ಈ ಉಪಾಯ ಮಾಡಲು ಮರೆಯಬೇಡಿ


ರೊಮ್ಯಾಂಟಿಕ್ ಸ್ವಭಾವದವರು :
ಈ ಹುಡುಗಿಯರು ಗಂಡನ ಜೊತೆಗೆ, ತನ್ನ ಅತ್ತೆ ಮಾವಂದಿರೊಂದಿಗೆ ತುಂಬಾ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳುತ್ತಾರೆ. ಈ ಹುಡುಗಿಯರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳುತ್ತಾರೆ. 


( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.