Akshaya Tritiya 2022: ನೌಕರಿಯಲ್ಲಿ ಬಡ್ತಿ ಪಡೆಯಲು ಹಾಗೂ ಭಾಗ್ಯೋದಯಕ್ಕೆ ಇಂದು ಈ ಉಪಾಯ ಮಾಡಲು ಮರೆಯಬೇಡಿ

Akshaya Tritiya 2022 Date - ಭಾರತದಲ್ಲಿ ಅತ್ಯಂತ ಶುಭ ಎಂದು ಭಾವಿಸಲಾಗುವ ತಿಥಿಗಳಲ್ಲಿ ಅಕ್ಷಯ ತೃತಿಯಾ ಕೂಡ ಒಂದು. ಈ ದಿನ ಆರಂಭಿಸಲಾಗುವ ಕಾರ್ಯದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.

Written by - Nitin Tabib | Last Updated : May 3, 2022, 01:02 PM IST
  • ಭಾರತದಲ್ಲಿ ಆಚರಿಸಲಾಗುವ ಮಹತ್ವದ ತಿಥಿಗಳಲ್ಲಿ ಅಕ್ಷಯ ತೃತೀಯ ಕೂಡ ಒಂದು
  • ಈ ದಿನ ಚಿನ್ನ ಖರೀದಿ ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ
  • ಈ ದಿನ ಕೆಲ ಉಪಾಯಗಳು ನೌಕರಿಯಲ್ಲಿ ಬಡ್ತಿ ಹಾಗೂ ಭಾಗ್ಯೋದಯವನ್ನು ಕೂಡ ನೀಡುತ್ತವೆ.
Akshaya Tritiya 2022: ನೌಕರಿಯಲ್ಲಿ ಬಡ್ತಿ ಪಡೆಯಲು ಹಾಗೂ ಭಾಗ್ಯೋದಯಕ್ಕೆ ಇಂದು ಈ ಉಪಾಯ ಮಾಡಲು ಮರೆಯಬೇಡಿ title=
Akshaya Tritiya 2022

Akshaya Tritiya 2022 Do and Don't: ಭಾರತದಲ್ಲಿ ಹಲವು ತಿಥಿಗಳನ್ನು ಹಾಗೂ ಹಬ್ಬಗಳನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಕೂಡ ಈ ತಿಥಿಗಳಲ್ಲಿ ಒಂದು ಎಂದು ಭಾವಿಸಲಾಗುತ್ತದೆ. ಈ ದಿನ ಆರಂಭಿಸಲಾಗುವ ಕಾರ್ಯದಲ್ಲಿ ಯಶಸ್ಸು ಸಿಕ್ಕೆ ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಅಕ್ಷಯ ತೃತಿಯಾ ದಿನ ಚಿನ್ನ ಖರೀಸಿರುವುದು ಅತ್ಯಂತ ಶುಭಕರ ಎಂದು ಭಾವಿಸಲಾಗುತ್ತದೆ. ಈ ದಿನ ಚಿನ್ನದಲ್ಲಿ ಮಾಡುವ ಹೂಡಿಕೆ ಕೂಡ ಸಾಕಷ್ಟು ಲಾಭ ತರುತ್ತದೆ. ಅಕ್ಷಯ ತೃತಿಯಾ ಚಿನ್ನದಲ್ಲಿ ಹೂಡಿಕೆ ಮಾಡಬಯಸುವವರಿಗೂ ಕೂಡ ತುಂಬಾ ವಿಶೇಷ ಎನ್ನಲಾಗುತ್ತದೆ. ಕಳೆದ ವರ್ಷ ಚಿನ್ನದಲ್ಲಿ ಹೂಡಿಕೆ ಮಾಡಿದವರು ಉತ್ತಮ ಆದಾಯ ಪಡೆದಿದ್ದಾರೆ. 

ಅಕ್ಷಯ ತೃತಿಯಾ ದಿನ ಏನನ್ನು ಮಾಡಬೇಕು
>>  ಸುಖ-ಶಾಂತಿ- 11 ಗೋಮತಿ ಚಕ್ರಗಳನ್ನು ಕೆಂಪು ಬಣ್ಣದ ವಸ್ತ್ರದಲ್ಲಿರಿಸಿ, ಅದನ್ನು ಬೆಳ್ಳಿಯ ಪೊಟ್ಟಣದಲ್ಲಿಟ್ಟು ಪೂಜಾ ಸ್ಥಾನದಲ್ಲಿರಿಸುವುದರಿಂದ ಮನೆಯಲ್ಲಿ ಸದಾ ಸುಖ-ಶಾಂತಿಯ ವಾತಾವರಣ ನೆಲೆಸುತ್ತದೆ. 

>> ವ್ಯಾಪಾರದಲ್ಲಿ ಲಾಭಕ್ಕಾಗಿ ಏನು ಮಾಡಬೇಕು - 27 ಗೋಮತಿ ಚಕ್ರಗಳನ್ನು ಹಳದಿ ಅಥವಾ ಕೆಂಪು ಬಣ್ಣದ ವಸ್ತ್ರದಲ್ಲಿ ಕಟ್ಟಿ, ನಿಮ್ಮ ಪ್ರತಿಷ್ಠಾನದ ಮುಖ್ಯ ದ್ವಾರದಲ್ಲಿ ಕಟ್ಟುವುದರಿಂದ ನಿಮಗೆ ನಿಮ್ಮ ವ್ಯಾಪಾರದಲ್ಲಿ ನೀವು ಬಯಸಿದ ಲಾಭ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-Akshaya Tritiya 2022: ಅಕ್ಷಯ ತೃತಿಯಾ ದಿನ ದೇವಿ ಲಕ್ಷ್ಮಿಯನ್ನು ಈ ರೀತಿ ಪ್ರಸನ್ನಗೊಳಿಸಿ, ವರ್ಷವಿಡಿ ಧನವೃಷ್ಟಿ ಗ್ಯಾರಂಟಿ

>> ಕಾರ್ಯಕ್ಷೇತ್ರ - ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಎದುರಾಗುತ್ತಿದ್ದರೆ ಅಥವಾ ಬಡ್ತಿ ನಿಂತು ಹೋಗಿದ್ದರೆ, ಅಕ್ಷಯ ತೃತಿಯಾ ದಿನ ಶಿವಾಲಯಕ್ಕೆ ತೆರಳಿ ನಿಮ್ಮ ಮನೋಕಾಮನೆಯನ್ನು ಸ್ಮರಿಸಿ ಶಿವಲಿಂಗಕ್ಕೆ 11 ಗೋಮತಿ ಚಕ್ರಗಳನ್ನು ಅರ್ಪಿಸಿ. ಇದರಿಂದ ಸಾಕಷ್ಟು ಲಾಭ ಸಿಗಲಿದೆ.

ಇದನ್ನೂ ಓದಿ-Akshaya Tritiya 2022: ಇತಿಹಾಸ, ಪೂಜಾ ವಿಧಾನ, ಚಿನ್ನ ಖರೀದಿಸುವ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ

>>  ಭಾಗ್ಯೋದಯ- ಭಾಗ್ಯೋದಯಕ್ಕಾಗಿ ಅಕ್ಷಯ ತೃತಿಯಾ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು 11 ಗೋಮತಿ ಚಕ್ರಗಳ ಚೂರ್ಣ ತಯಾರಿಸಿ. ನಂತರ ನಿಮ್ಮ ಇಷ್ಟದೇವರನ್ನು ಸ್ಮರಿಸುತ್ತ ಆ ಚೂರ್ಣವನ್ನು ನಿಮ್ಮ ಮನೆಯ ಮುಖ್ಯದ್ವಾರದ ಮುಂದೆ ಪಸರಿಸಿ. ಈ ಉಪಾಯ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ದೌರ್ಭಾಗ್ಯ ಅಂತ್ಯಗೊಂಡು ಭಾಗ್ಯೋದಯ ಆರಂಭಗೊಳ್ಳುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News