ಇಂದಿನ ಹೆಣ್ಣು ಮಕ್ಕಳು ಋತುಮತಿಯಾಗುವ ವಯೋಮಾನದಲ್ಲಿ ಕುಸಿತ ಕಂಡುಬಂದಿದೆ. ಇದಕ್ಕೆ ಮುಖ್ಯ ಕಾರಣ ಬದಲಾದ ಆಹಾರ ಪದ್ಧತಿ ಎಂದೂ ಹೇಳಬಹುದು.  2012ರಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, 13 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಸಹಜವಾಗಿ ಋತುಮತಿಯಾಗುತ್ತಿದ್ದರು. ಆದರೆ, 2016–17ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ಋತುಮತಿಯಾಗುವ ವಯೋಮಿತಿ 11 ರಿಂದ 12 ವರ್ಷಕ್ಕೆ ಇಳಿದಿತ್ತು. ಆದರೆ, ಕಳೆದೆರಡು ವರ್ಷದಿಂದ ಈ ಅವಧಿಯು 8 ರಿಂದ 9 ವರ್ಷಕ್ಕೆ ಇಳಿದಿದೆ ಎಂಬುದು ಆತಂಕಾರಿ ವಿಷಯ.


COMMERCIAL BREAK
SCROLL TO CONTINUE READING

ಇದನ್ನು ಓದಿ: National Herald Case: ಇಡಿ ವಿಚಾರಣೆಗೆ ಹಾಜರಾದ ಮಲ್ಲಿಕಾರ್ಜುನ ಖರ್ಗೆ


ಋತುಮತಿಯಾದ ಮೊದಲ ಮಾಸಿಕ ದಿನವನ್ನು ರಜೋದರ್ಶಕ ಅಥವಾ ಮೆನಾರ್ಚೆ ಎಂದು ಕರೆಯಲಾಗುತ್ತದೆ. ಮೊದಲೆಲ್ಲಾ 13 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಸಹಜವಾಗಿ ಮುಟ್ಟಾಗುತ್ತಿದ್ದರು. ಇದೀಗ ಈ ಅವಧಿಯ ಪ್ರಮಾಣ ತೀರ ಕುಸಿದಿದೆ. ಇದಕ್ಕೆ ಕಾರಣ ಬದಲಾದ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಎನ್ನಬಹುದು.  ಹಿಂದೆಲ್ಲಾ ಮಕ್ಕಳು ಗುಣಮಟ್ಟದ ಆಹಾರ ಸೇವಿಸುತ್ತಿದ್ದರು. ಪ್ರತಿನಿತ್ಯ ದೈಹಿಕ ಚಟುವಟಿಕೆ ಸಾಮಾನ್ಯವಾಗಿತ್ತು. ಆದರೆ ಇಂದಿನ ಪೀಳಿಗೆ ಇವೆಲ್ಲದರಿಂದ ಕೊಂಚ ಹೊರತಾಗಿದೆ. ಜೊತೆಗೆ ಮನೆಯಲ್ಲಿ ನಿಯಮಿತಕ್ಕಿಂತ ಹೆಚ್ಚು ಆಹಾರ, ಜಂಕ್‌ಫುಡ್‌ ಸೇವನೆ ಮಾಡುತ್ತಿದ್ದರಿಂದ ಹೆಣ್ಣು ಮಕ್ಕಳ ದೇಹವು ವಯಸ್ಸಿಗಿಂತ ಮೀರಿ ಬೆಳೆದಿದೆ. ಪರಿಣಾಮ 6-7ನೇ ತರಗತಿ ಮಕ್ಕಳೆಲ್ಲರೂ ಋತುಮತಿಯಾಗುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. 


ಆಹಾರ ಪದ್ಧತಿ ಬದಲಾವಣೆ: 
ಬೊಜ್ಜು, ಜಂಕ್ ಫುಡ್ ಸೇವನೆ, ಪ್ರಿಸವೇಟಿವ್‌ನಂಥ ಆಹಾರಗಳ ಸೇವನೆಯಿಂದ ಮಕ್ಕಳ ದೇಹ ಬೇಗ ಸ್ಪಂದಿಸಿ, ಹಾರ್ಮೋನ್ ಬದಲಾವಣೆಯಾಗುತ್ತದೆ. ಹೀಗಾಗಿ ಮಕ್ಕಳು 8-9ನೇ ವಯಸ್ಸಿಗೇ ಋತುಮತಿಯಾಗುತ್ತಾರೆ. ಮೊದಲೆಲ್ಲಾ ಇಂಥ ಪ್ರಕರಣಗಳು ಒಂದೆರಡು ಮಾತ್ರ ಕಂಡು ಬರುತ್ತಿತ್ತು. ಆದರೆ ಈಗ ಬಹುತೇಕ ಹೆಣ್ಣು ಮಕ್ಕಳು ಚಿಕ್ಕವಯಸ್ಸಿಗೆ ಋತುಮತಿಯಾಗುತ್ತಿದ್ದಾರೆ. 


ತೂಕ ಹೆಚ್ಚಳ ಕಾರಣ:
ವಯಸ್ಸಿಗಿಂತ ಅಧಿಕ ತೂಕ ಹೊಂದಿರುವ ಮಕ್ಕಳು ಅವಧಿಗೂ ಮುನ್ನವೇ ಋತುಮತಿಯಾಗುವ ಸಾಧ್ಯತೆ ಹೆಚ್ಚು. ಮೊದಲೆಲ್ಲಾ ವಯಸ್ಸಿಗೂ ಮೊದಲೇ ಋತುಮತಿಯಾದರೆ, ಅವರಿಗೆ ಮೆದುಳಿನಲ್ಲಿ ಗಡ್ಡೆ, ಥೈರಾಡ್‌ನಂಥ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಇತ್ತೀಚೆಗೆ ಬರುವ ಎಲ್ಲಾ ಕ್ರೀಮ್‌ ಹಾಗೂ ರಾಸಾಯನಿಯುಕ್ತ ಪದಾಥಗಳಲ್ಲಿ ಸ್ಟೀರಾಯ್ಡ್‌ ಸಾಮಾನ್ಯವಾಗಿದೆ. ಇದರ ಬಳಕೆಯು ಮಕ್ಕಳ ದೇಹದ ಹಾಗೂ ಹಾರ್ಮೋನ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. 


ಇದನ್ನು ಓದಿ: Hanuma Jayanti: ಹನುಮ ಜಯಂತಿಯಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಸುವರ್ಣಾವಕಾಶ!


ಪೋಷಕರ ಪಾತ್ರ: 
ಮಕ್ಕಳು ಅವಧಿಗೂ ಮುನ್ನ ಋತುಮತಿಯಾದರೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮೊದಲು ಆ ಸತ್ಯವನ್ನು ಒಪ್ಪಿಕೊಂಡು, ಮಗುವಿನಲ್ಲೂ ಆತ್ಮಸೈರ್ಯ ತುಂಬಬೇಕು. ದೇಹದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಆ ಮಗುವಿಗೆ ತಿಳುವಳಿಕೆ ನೀಡಬೇಕು. ಯಾವುದೇ ಭಯದ ವಾತಾವರಣ ಇಲ್ಲದ ರೀತಿ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಆಪ್ತಸಹಾಯಕರನ್ನು ಭೇಟಿ ಮಾಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.