Gold Purchase Vastu Tips: ಈ ದಿನ ಅಪ್ಪಿ ತಪ್ಪಿಯೂ ಚಿನ್ನ ಖರೀದಿಸಬೇಡಿ!
Gold Purchase Vastu Tips: ಅಕ್ಷಯ ತೃತೀಯ ಮತ್ತು ಧಂತೇರಸ್ನಲ್ಲಿ ಚಿನ್ನ ಖರೀದಿಸಲು ಅತ್ಯಂತ ಮಂಗಳಕರ ದಿನಗಳು ಎಂದು ಪರಿಗಣಿಸಲಾಗಿದೆ. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ ನೀವು ವಾರದ ಭಾನುವಾರ ಮತ್ತು ಗುರುವಾರ ಚಿನ್ನವನ್ನು ಖರೀದಿಸಬಹುದು.
ನವದೆಹಲಿ: ಪ್ರತಿಯೊಬ್ಬರೂ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ, ವಿಶೇಷವಾಗಿ ಚಿನ್ನದ ಶಾಪಿಂಗ್ ಮಾಡುವುದು ಹೆಣ್ಣುಮಕ್ಕಳಿಗೆ ತುಂಬಾ ಇಷ್ಟ. ನಾವು ಯಾವುದೇ ಸಮಯದಲ್ಲಿ ಚಿನ್ನವನ್ನು ಖರೀದಿಸಲು ಹೊರಡುತ್ತೇವೆ, ಆದರೆ ಅದಕ್ಕೂ ಮಂಗಳಕರ ದಿನ ಮತ್ತು ಸಮಯವಿದೆ ಎಂಬುದು ನಿಮಗೆ ತಿಳಿದಿದೆಯೇ? ಶಾಸ್ತ್ರಗಳ ಪ್ರಕಾರ ಶುಭ ಮುಹೂರ್ತದಲ್ಲಿ ಮಾಡುವ ಕೆಲಸವು ಯಾವಾಗಲೂ ಒಳ್ಳೆಯ ಮತ್ತು ಪ್ರಯೋಜನಕಾರಿ ಫಲಿತಾಂಶ ನೀಡುತ್ತದಂತೆ. ನಾವು ಯಾವಾಗ ಮತ್ತು ಯಾವ ದಿನದಲ್ಲಿ ಯಾವುದನ್ನು ಖರೀದಿಸಬೇಕು ಎಂಬುದರ ಬಗ್ಗೆ ಜ್ಯೋತಿಷ್ಯದಲ್ಲಿ ನಿರ್ದಿಷ್ಟವಾಗಿ ಹೇಳಲಾಗಿದೆ. ಚಿನ್ನ ಮತ್ತು ಲೋಹದ ವಸ್ತುಗಳನ್ನು ಖರೀದಿಸಲು ಯಾವುದು ಶುಭ ದಿನ ಅನ್ನೋದರ ಬಗ್ಗೆ ತಿಳಿಯಿರಿ.
ಚಿನ್ನವು ಮಹಿಳೆಯರ ನೆಚ್ಚಿನ ವಿಶೇಷ ಲೋಹವಾಗಿದೆ. ಮದುವೆ ಸೇರಿದಂತೆ ಇತರ ಅನೇಕ ಸಮಾರಂಭಗಳಂದು ಚಿನ್ನವನ್ನು ಖರೀದಿಸಲಾಗುತ್ತದೆ. ಸಾಮಾನ್ಯವಾಗಿ ನಾವು ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲಿ ಚಿನ್ನವನ್ನು ಖರೀದಿಸುತ್ತೇವೆ. ಆದರೆ ಹಿಂದೂ ಧರ್ಮದಲ್ಲಿ ಚಿನ್ನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ, ಏಕೆಂದರೆ ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳನ್ನು ಕುಬೇರನ ಉಗ್ರಾಣವೆಂದು ಕರೆಯಲಾಗುತ್ತದೆ.
ಇದನ್ನೂ ಓದಿ: Budh Gochar 2023 : ಬುಧ ಗ್ರಹದ ನೀಚ ರಾಜಯೋಗದಿಂದ 3 ರಾಶಿಯವರಿಗೆ ಅದೃಷ್ಟ, ಇದ್ದಕ್ಕಿದ್ದಂತೆ ಹಣದ ಲಾಭ!
ವಾರದ ಈ ದಿನದಂದು ಚಿನ್ನ ಖರೀದಿಸಿ
ಅಂದಹಾಗೆ ಅಕ್ಷಯ ತೃತೀಯ ಮತ್ತು ಧಂತೇರಸ್ ಚಿನ್ನವನ್ನು ಖರೀದಿಸಲು ಅತ್ಯಂತ ಮಂಗಳಕರ ದಿನಗಳೆಂದು ಪರಿಗಣಿಸಲಾಗಿದೆ. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ ನೀವು ವಾರದ ಭಾನುವಾರ ಮತ್ತು ಗುರುವಾರವೂ ಚಿನ್ನವನ್ನು ಖರೀದಿಸಬಹುದು.
ಜ್ಯೋತಿಷ್ಯದಲ್ಲಿ ಈ ಎರಡೂ ದಿನಗಳು ಚಿನ್ನವನ್ನು ಖರೀದಿಸಲು ಶುಭವೆಂದು ಹೇಳಲಾಗುತ್ತದೆ. ಲಕ್ಷ್ಮಿದೇವಿಯ ಜೊತೆಗೆ ಸೂರ್ಯನ ಆಶೀರ್ವಾದವೂ ಸಿಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಪ್ರಗತಿ ಇರುತ್ತದೆ. ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಶನಿವಾರದಂದು ಚಿನ್ನವನ್ನು ಖರೀದಿಸಬಾರದಂತೆ.
ಇದನ್ನೂ ಓದಿ: Budh Gochar 2023: ಬುಧನಿಂದ ರಾಜಯೋಗ, ಈ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ!
ಕಬ್ಬಿಣ ಖರೀದಿಸಲು ಶುಭ ದಿನ
ಹಾಗೆಯೇ ಕಬ್ಬಿಣದ ಖರೀದಿಗೂ ಶುಭದಿನವಿದೆ. ಕಬ್ಬಿಣದ ಲೋಹವನ್ನು ಶನಿ ದೇವನ ಅಂಶವೆಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಶನಿವಾರದಂದು ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಶನಿವಾರದಂದು ಕಬ್ಬಿಣವನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಶನಿವಾರ ಹೊರತುಪಡಿಸಿ ವಾರದ ಯಾವುದೇ ದಿನದಲ್ಲಿ ನೀವು ಅದನ್ನು ಖರೀದಿಸಬಹುದು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.