Lucky Zodiac Signs : ಶುಕ್ರ ಗ್ರಹವು ಅಕ್ಟೋಬರ್ 2022 ರಲ್ಲಿ ಅಸ್ತಮಿಸಿತ್ತು. ಇದಾದ ನಂತರ ಶುಭ ಕಾರ್ಯಗಳನ್ನು ನಿಲ್ಲಿಸಲಾಯಿತು. ಈಗ ನವೆಂಬರ್ 20 ರಿಂದ ಮತ್ತೆ ಶುಕ್ರದೆಸೆ ಆರಂಭವಾಗಲಿದೆ. ಶುಕ್ರನನ್ನು ಪ್ರೀತಿ, ಸೌಂದರ್ಯ, ಸಂಪತ್ತು ಮತ್ತು ಐಷಾರಾಮಿ ಜೀವನವನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದಾನೋ, ಅವರು ಲಾಭದಾಯಕ ಫಲಿತಾಂಶಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ, ಶುಕ್ರ ಗ್ರಹದ ಉದಯದೊಂದಿಗೆ, ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Kajal Remedies: ಕಾಡಿಗೆ ದಾನ ಮಾಡುವುದರ ಈ ಲಾಭಗಳು ನಿಮಗೆ ತಿಳಿದಿವೆಯೇ?


ವೃಷಭ ರಾಶಿ : ಶುಕ್ರನನ್ನು ವೃಷಭ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೃಷಭ ರಾಶಿಯವರಿಗೆ ಶುಭಕಾಲ ಆರಂಭವಾಗಿದೆ. ಅವರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ, ಅದು ಹಣಕ್ಕೆ ಪ್ರಯೋಜನವನ್ನು ನೀಡುತ್ತದೆ. ವ್ಯಾಪಾರದಲ್ಲಿಯೂ ಸಾಕಷ್ಟು ಲಾಭವಾಗಲಿದೆ. ಈ ಸಮಯದಲ್ಲಿ ಈ ಜನರು ಬಹಳಷ್ಟು ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ.


ತುಲಾ ರಾಶಿ : ಈ ರಾಶಿಯ ಅಧಿಪತಿಯೂ ಶುಕ್ರನೇ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರು ಶುಕ್ರ ದೆಸೆಯಿಂದ ಅಪಾರ ಲಾಭವನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳ ಇರುತ್ತದೆ, ಇದು ಮನೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ದಾಂಪತ್ಯ ಜೀವನ ಮಧುರವಾಗಿ ಉಳಿಯುತ್ತದೆ. ನೀವು ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಪೂರ್ಣಗೊಳಿಸಬಹುದು.


ಇದನ್ನೂ ಓದಿ : Vastu Tips: ಭವಿಷ್ಯದಲ್ಲಿ ಧನ ಸಂಪತ್ತು ಸಿಗುತ್ತಾ ಅಥವಾ ಅಹಿತಕರ ಸುದ್ದಿ? ಹಲ್ಲಿ ನೀಡುತ್ತದೆ ಸಂಕೇತ


ಕಟಕ ರಾಶಿ : ಕರ್ಕಾಟಕ ರಾಶಿಯ ಜನರು ಶುಕ್ರದೆಸೆಯಿಂದ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ, ಇದರಿಂದಾಗಿ ಅಪಾರ ಹಣವನ್ನು ಗಳಿಸಬಹುದು. ವ್ಯಾಪಾರಸ್ಥರು ಮತ್ತು ಉದ್ಯೋಗಸ್ಥರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಸಂಗಾತಿಯೊಂದಿಗೆ ಮಧುರ ಸಂಬಂಧಗಳು ಏರ್ಪಡುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.