Good News Indications: ಕನಸಲ್ಲಿ ಈ ವಸ್ತುಗಳು ಕಾಣುವುದು ಶುಭ ಸಂಕೇತ, ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗುತ್ತೆ ಎಂದರ್ಥ
Good News Indications: ಕನಸುಗಳು ಮಾನವ ಜೀವನದ ಒಂದು ಭಾಗವಾಗಿದೆ, ಸಾಮಾನ್ಯವಾಗಿ ಎಲ್ಲರೂ ಮಲಗಿರುವಾಗ ಅವರಿಗೆ ಕನಸುಗಳು ಬೀಳುತ್ತವೆ. ಕನಸುಗಳ ಮೇಲೆ ಮನುಷ್ಯರ ನಿಯಂತ್ರಣವಿರುವುದಿಲ್ಲ. ಆದರೂ ಕೂಡ, ಪ್ರತಿಯೊಂದು ಕನಸು ಒಂದು ಅಥವಾ ಬೇರೆ ಅರ್ಥವನ್ನು ಹೊಂದಿರುತ್ತದೆ, ಕನಸಿನ ಶಾಸ್ತ್ರದ ಮೂಲಕ ಅದನ್ನು ಅರ್ಥಮಾಡಿಕೊಳ್ಳಬಹುದು.
Good News Indications: ಒಂದು ದಿನ ರಾತ್ರಿ ಬಿದ್ದ ಕನಸು ಕೆಲವೊಮ್ಮೆ ಮಾರನೆಯ ದಿನ ನಿಮ್ಮ ಮುಖದಲ್ಲಿ ನಗುವಿಗೆ ಕಾರಣವಾದರೆ ಇನ್ನೂ ಕೆಲವೊಮ್ಮೆ ಟೆನ್ಶನ್ ಗೆ ಕಾರಣವಾಗುತ್ತದೆ. ಕನಸು ಒಳ್ಳೆಯದು ಅಥವಾ ಕೆಟ್ಟದ್ದಾಗಿರಬಹುದು. ಆದಾಗ್ಯೂ, ಈ ಕನಸುಗಳು ಕನಸಿನ ಶಾಸ್ತ್ರದ ಪ್ರಕಾರ ವಿಭಿನ್ನ ಅರ್ಥಗಳನ್ನು ಹೊಂದಿರುತ್ತವೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕಂಡ ಕನಸುಗಳ ಅರ್ಥವನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಇಂತಹುದೇ ಕೆಲ ಕನಸುಗಳ ಸಂಕೇತಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ,
ದೇವಾಲಯ
ಕನಸಿನಲ್ಲಿ ನೀವು ಶಿವ ದೇವಾಲಯವನ್ನು ಕಂಡರೆ, ನಿಮಗೆ ದೇವಾಧಿದೇವ ಮಹಾದೇವನಿಂದ ಆಶೀರ್ವಾದ ಪ್ರಾಪ್ತಿಯಾಗಲಿದೆ ಎಂದರ್ಥ. ಮತ್ತು ಶೀಘ್ರದಲ್ಲೇ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಕನಸಿನಲ್ಲಿ ದೇಗುಲ ನೋಡುವುದು, ದೇವಾಲಯದ ಅರ್ಚಕರಿಂದ ತೆಂಗಿನಕಾಯಿ ಮತ್ತು ಸಿಹಿತಿಂಡಿಗಳನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುವುದು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಮಾವಿನ ಮರ
ಕನಸಿನಲ್ಲಿ ಮಾವಿನ ಮರವನ್ನು ನೋಡುವುದು ಭವಿಷ್ಯದ ಜೀವನದಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ಮತ್ತೊಂದೆಡೆ, ನೀವು ಪರ್ವತವನ್ನು ಏರುವ ಕನಸು ಕಂಡರೆ, ನೀವು ಶಿವನ ಆಶೀರ್ವಾದವನ್ನು ಪಡೆಯುವಿರಿ ಎಂದರ್ಥ. ಕನಸಿನಲ್ಲಿ ಹಸುವಿನ ಹಾಲನ್ನು ನೋಡುವುದು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.
ಇದನ್ನೂ ಓದಿ-Samudrik Shastra : ನಿಮ್ಮ ಸ್ವಭಾವ, ಭವಿಷ್ಯದ ಬಗ್ಗೆ ಹೇಳುತ್ತವೆ ಕಾಲ್ಬೆರಳುಗಳು!
ಗುಲಾಬಿ
ಯಾರಿಗಾದರೂ ಕನಸಿನಲ್ಲಿ ಗುಲಾಬಿ ಕಂಡರೆ, ಅದನ್ನು ಮಂಗಳಕರ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ದೊಡ್ಡ ಕೆಲಸ ಬೇಗನೆ ಕೈಗೂಡಲಿದೆ ಎಂದರ್ಥ. ಕನಸಿನಲ್ಲಿ ಗಿಳಿಯನ್ನು ನೋಡುವುದು ಸಹ ಶುಭ ಸಂಕೇತವನ್ನು ಸೂಚಿಸುತ್ತದೆ. ಇದು ಒಳ್ಳೆಯ ಸುದ್ದಿ ಮತ್ತು ಬೆಳವಣಿಗೆಗೆ ಅವಕಾಶಗಳನ್ನು ತರುತ್ತದೆ.
ಇದನ್ನೂ ಓದಿ-Hair Care : ಕೂದಲ ಬೆಳೆವಣಿಗೆಗೆ ಈ 3 ವಸ್ತುಗಳನ್ನು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.