Green Chilli Health Benefits: ನಾವು ಸಾಮಾನ್ಯವಾಗಿ ಹಸಿರು ಮೆಣಸಿನಕಾಯಿಯನ್ನು ಮಸಾಲೆ ರೂಪದಲ್ಲಿ ಅನೇಕ ಪಾಕವಿಧಾನಗಳಲ್ಲಿ ಬಳಸುತ್ತೇವೆ. ಆದರೆ ಕೆಲವರು ಇದನ್ನು ಹಸಿಯಾಗಿಯೂ ತಿನ್ನುತ್ತಾರೆ. ಆದರೆ ಕೆಲವರಿಗೆ ಇದು ಅಸಾಧ್ಯದ ಮಾತು. ಆದರೆ ಅಂತಹ ಕಟುವಾದ ವಿಷಯದ ಹೊರತಾಗಿಯೂ ಹಸಿ ಮೆಣಸಿನಕಾಯಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹಸಿರು ಮೆಣಸಿನಕಾಯಿಯ ಪ್ರಯೋಜನಗಳನ್ನು ವಿವರವಾಗಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜಾಗಿಂಗ್-ವಾಕಿಂಗ್ ಬೇಡ… 11 ಔಷಧೀಯ ಗುಣವುಳ್ಳ ಈ ಬೀಜ ಸೇವಿಸಿದರೆ ಬೊಜ್ಜು ಸಂಪೂರ್ಣವಾಗಿ ಕರಗುತ್ತೆ!


ಹಸಿರು ಮೆಣಸಿನಕಾಯಿ ತಿನ್ನುವ ಪ್ರಯೋಜನಗಳು


1. ತ್ವಚೆ ಸುಂದರ: ಹಸಿರು ಮೆಣಸಿನಕಾಯಿಯನ್ನು ವಿಟಮಿನ್ ಸಿ ಯ ಶ್ರೀಮಂತ ಮೂಲವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ, ಬೀಟಾ-ಕ್ಯಾರೋಟಿನ್ ಸಹ ಇದರಲ್ಲಿದೆ. ಎರಡೂ ಪೋಷಕಾಂಶಗಳು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದು ಚರ್ಮದ ಹೊಳಪು, ದೃಢತೆ ಮತ್ತು ಉತ್ತಮ ದೇಹವಿನ್ಯಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


2. ಕಬ್ಬಿಣಾಂಶ ಸಮೃದ್ಧ: ಹಸಿರು ಮೆಣಸಿನಕಾಯಿಯಲ್ಲಿ ಬಹಳಷ್ಟು ಕಬ್ಬಿಣಾಂಶ ಕಂಡುಬರುತ್ತದೆ, ಇದು ನಮ್ಮ ದೇಹದೊಳಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಹಾಗೂ ದೇಹವು ಕ್ರಿಯಾಶೀಲವಾಗಿರುತ್ತದೆ.


3. ದೇಹದ ಉಷ್ಣತೆಯ ನಿಯಂತ್ರಣ:  ಕ್ಯಾಪ್ಸೈಸಿನ್ ಎಂಬ ಅಂಶವು ಹಸಿರು ಮೆಣಸಿನಕಾಯಿಯಲ್ಲಿ ಕಂಡುಬರುತ್ತದೆ. ಮೆದುಳಿನಲ್ಲಿರುವ ಹೈಪೋಥಾಲಮಸ್‌ ನ ತಂಪಾಗಿಸುವ ಕೇಂದ್ರವನ್ನು ಸಕ್ರಿಯವಾಗಿಡಲು ಇದು ಸಹಾಯಕವಾಗಿದೆ. ಈ ಕಾರಣದಿಂದಾಗಿ ದೇಹದ ಉಷ್ಣತೆಯೂ ನಿಯಂತ್ರಣದಲ್ಲಿರುತ್ತದೆ.


4. ರೋಗನಿರೋಧಕ ಶಕ್ತಿ ಹೆಚ್ಚಳ: ಹಸಿರು ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ, ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ. ಶೀತ-ಕೆಮ್ಮು ಸಮಸ್ಯೆಗಳಿಗೆ ಹಸಿರು ಮೆಣಸಿನಕಾಯಿಯು ರಾಮಬಾಣವಿದ್ದಂತೆ.  


ಇದನ್ನೂ ಓದಿ: ಮನಿ ಪ್ಲಾಂಟ್ ಬೇರಿಗೆ ಈ ವಸ್ತುವನ್ನು ಕಟ್ಟಿದರೆ ಮನೆಯಲ್ಲಿ ತುಂಬಿ ತುಳುಕುವುದು ಸಂಪತ್ತು!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.