“ನಾನು 10,000 ಮಹಿಳೆಯರೊಂದಿಗೆ ಸೆಕ್ಸ್ ಮಾಡಿದ್ದೇನೆ…”: ದಿಗ್ಗಜನ ಹೇಳಿಕೆಗೆ ಕ್ರೀಡಾ ಜಗತ್ತಿನಲ್ಲಿ ಕೋಲಾಹಲ!

Benjamin Mendy: ಸದ್ಯ ಭಾರೀ ಚರ್ಚೆಯಲ್ಲಿರುವುದು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಆಟಗಾರ ಬೆಂಜಮಿನ್ ಮೆಂಡಿ ಹೆಸರು. ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ಆರೋಪದ ಮೇಲೆ ಮೆಂಡಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ.

Written by - Bhavishya Shetty | Last Updated : Jul 2, 2023, 10:33 AM IST
    • ಸದ್ಯ ಭಾರೀ ಚರ್ಚೆಯಲ್ಲಿರುವುದು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಆಟಗಾರ ಬೆಂಜಮಿನ್ ಮೆಂಡಿ ಹೆಸರು.
    • ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ಆರೋಪದ ಮೇಲೆ ಮೆಂಡಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ
    • ವರದಿಗಳ ಪ್ರಕಾರ, ಬೆಂಜಮಿನ್ ಮೆಂಡಿ ಅವರು 10,000 ಮಹಿಳೆಯರೊಂದಿಗೆ ಸೆಕ್ಸ್ ಮಾಡಿದ್ದಾರೆ
“ನಾನು 10,000 ಮಹಿಳೆಯರೊಂದಿಗೆ ಸೆಕ್ಸ್ ಮಾಡಿದ್ದೇನೆ…”: ದಿಗ್ಗಜನ ಹೇಳಿಕೆಗೆ ಕ್ರೀಡಾ ಜಗತ್ತಿನಲ್ಲಿ ಕೋಲಾಹಲ! title=
Benjamin Mendy

Benjamin Mendy: ಕ್ರಿಕೆಟ್ ಜಗತ್ತಿನಲ್ಲೆ ಅದೆಷ್ಟೋ ಮಂದಿ ದಾಖಲೆಗಳ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಅವರು ಶ್ರೀಮಂತಿಕೆಯ ಸುಖವನ್ನೂ ಅನುಭವಿಸುತ್ತಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಕೆಲವೊಂದು ಬಾರಿ ಈ ಎಲ್ಲಾ ವಿಚಾರಗಳನ್ನು ಮೀರಿ, ಶೋಷಣೆ ಎಂಬ ವಿಚಾರ ಮುನ್ನೆಲೆಗೆ ಬಂದಾಗ ಮುಜುಗರ ಉಂಟಾಗಿತ್ತದೆ. ಇದೀಗ ಅನುಭವಿ ಆಟಗಾರನೊಬ್ಬ ನೀಡಿದ ಹೇಳಿಕೆಯಿಂದ ಇಡೀ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸಿದೆ. ಈ ಫುಟ್ಬಾಲ್ ಆಟಗಾರನ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿದೆಯಂತೆ!

ಇದನ್ನೂ ಓದಿ: ಟೆಸ್ಟ್’ನಲ್ಲಿ ಶತಕ ಸಿಡಿಸಿದ್ದ ಈ ಸ್ಫೋಟಕ ಬ್ಯಾಟ್ಸ್’ಮನ್ Team Indiaಗೆ ಕೈಕೊಟ್ಟು ವಿದೇಶಿ ತಂಡಕ್ಕೆ ಸೇರ್ಪಡೆ…!

ಸದ್ಯ ಭಾರೀ ಚರ್ಚೆಯಲ್ಲಿರುವುದು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಆಟಗಾರ ಬೆಂಜಮಿನ್ ಮೆಂಡಿ ಹೆಸರು. ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ಆರೋಪದ ಮೇಲೆ ಮೆಂಡಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ. ಹಲವಾರು ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಬೆಂಜಮಿನ್ ಮೆಂಡಿ ಅವರು 10,000 ಮಹಿಳೆಯರೊಂದಿಗೆ ಸೆಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

10 ಸಾವಿರ ಮಹಿಳೆಯರೊಂದಿಗೆ ಸೆಕ್ಸ್!!!

ಮ್ಯಾಂಚೆಸ್ಟರ್ ಸಿಟಿಯೊಂದಿಗಿನ ಮೆಂಡಿಯ ಒಪ್ಪಂದವು ಶನಿವಾರದಂದು ಮುಕ್ತಾಯಗೊಂಡಿದೆ. 2020 ರ ಅಕ್ಟೋಬರ್‌ ನಲ್ಲಿ ಚೆಷೈರ್‌ ನ ಮೋಟ್ರಾಮ್ ಸೇಂಟ್ ಆಂಡ್ರ್ಯೂನಲ್ಲಿರುವ ಮನೆಯಲ್ಲಿ ಆಗ 24 ವರ್ಷ ವಯಸ್ಸಾಗಿದ್ದ ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪವೂ ಇವರ ಮೇಲಿದೆ. ಬಿಬಿಸಿ ಮತ್ತು ದಿ ಗಾರ್ಡಿಯನ್ ವರದಿಗಳ ಪ್ರಕಾರ, “ಮೆಂಡಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಗೆ ಹೀಗೆ ಹೇಳಿದ್ದಾನೆ- ನಾನು 10,000 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ, ಪರವಾಗಿಲ್ಲ”.

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ನಡೆದ ಕೊನೆಯ ವಿಚಾರಣೆಯ ಸಮಯದಲ್ಲಿ, ಇಬ್ಬರು ವಿಭಿನ್ನ ಮಹಿಳೆಯರನ್ನು ಒಳಗೊಂಡ ಆರೋಪದ ಮೇಲೆ ತೀರ್ಪುಗಾರರು ತೀರ್ಮಾನಕ್ಕೆ ಬರಲು ವಿಫಲರಾದರು. ಜನವರಿಯಲ್ಲಿ ವಿಚಾರಣೆ ಮುಗಿದ ನಂತರ, ಚೆಸ್ಟರ್ ಕ್ರೌನ್ ಕೋರ್ಟ್‌ ನ ನ್ಯಾಯಾಧೀಶರು ಆರು ಮಹಿಳೆಯರು ಮತ್ತು ಆರು ಪುರುಷನ್ನು ಒಳಗೊಂಡ ತೀರ್ಪುಗಾರರ ಸಮಿತಿಗೆ ಹೀಗೆ ಹೇಳಿತು- “ಇತರ ಮಹಿಳೆಯರು ಆರೋಪಿಸಿದ ಅಪರಾಧಗಳಲ್ಲಿ ಮೆಂಡಿ ತಪ್ಪಿತಸ್ಥರಲ್ಲ”

2017 ರಲ್ಲಿ ಫ್ರೆಂಚ್ ಕ್ಲಬ್ ಮೊನಾಕೊದಿಂದ ಮ್ಯಾಂಚೆಸ್ಟರ್ ಸಿಟಿಗೆ ಸೇರಿದ ಮೆಂಡಿ ಈಗ ಫ್ರೀ ಏಜೆಂಟ್ ಆಗಿದ್ದಾರೆ. ಅವರು ಮ್ಯಾಂಚೆಸ್ಟರ್ ಸಿಟಿಗಾಗಿ 75 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ: Photo Gallery: ನೀರಜ್ ಚೋಪ್ರಾರ ‘ಚಿನ್ನ’ದ ಬೇಟೆಯ ಸಾಧನೆಗಳು

(ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಇತರ ಮಾಧ್ಯಮ ವರದಿಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಖಚಿತ ಪಡಿಸುವುದಿಲ್ಲ)

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News