ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಲಾಭಕಾರಿ.. ಆದರೆ, ಅತಿಯಾದ ಗ್ರೀನ್ ಟೀ ಸೇವನೆ!
Green Tea Side Effects: ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ಹಲವಾರು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಅತಿಯಾಗಿ ಗ್ರೀನ್ ಟೀ ಕುಡಿಯುವುದರಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ ಮತ್ತು ಯಕೃತ್ತು ಹಾನಿಗೊಳಗಾಗುತ್ತದೆ. ಅತಿಯಾಗಿ ಗ್ರೀನ್ ಟೀ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Green Tea Side Effects: ಸಾಮಾನ್ಯವಾಗಿ ತೂಕ ಇಳಿಕೆ ಮಾಡಿಕೊಂಡು, ಫಿಟ್ ಆಗಿರಲು ಜನರು ಗ್ರೀನ್ ಟೀ ಅನ್ನು ಸೇವಿಸುತ್ತಾರೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇದರಿಂದ ಆರೋಗ್ಯ ಸುಧಾರಿಸುತ್ತದೆ. ಹೀಗಾಗಿ ಭಾರತದಲ್ಲಿ ಗ್ರೀನ್ ಟೀ ಕುಡಿಯುವ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಕ್ರಮೇಣ ಹೆಚ್ಚುತ್ತಿದೆ. ಪೌಷ್ಠಿಕಾಂಶದ ಅಂಶಗಳಿಂದ ಸಮೃದ್ಧವಾಗಿರುವ ಈ ಚಹಾವನ್ನು ನೀವು ಅಧಿಕವಾಗಿ ಸೇವಿಸಿದರೆ, ನಿಮ್ಮ ಆರೋಗ್ಯವೂ ಸಹ ಹಾನಿಗೊಳಗಾಗಬಹುದು. ಹಸಿರು ಚಹಾದ ಪ್ರಯೋಜನಗಳಿಂದಾಗಿ, ಅನೇಕ ಜನರು ಅದನ್ನು ಅಗತ್ಯವಾಗಿ ಸೇವಿಸುತ್ತಾರೆ. ಆದರೆ, ಹೆಚ್ಚು ಗ್ರೀನ್ ಟೀ ಕುಡಿಯುವುದರಿಂದ ನಿಮ್ಮ ಸ್ನಾಯುಗಳನ್ನು ದುರ್ಬಲಗೊಳ್ಳಬಹುದು ಮತ್ತು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಹೆಚ್ಚು ಗ್ರೀನ್ ಟೀ ಸೇವನೆಯಿಂದ ಆರೋಗ್ಯದಲ್ಲಿ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಅತಿಯಾದ ಕೆಫೀನ್ ಇರುತ್ತದೆ
ಹಸಿರು ಚಹಾ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ ಇದು ಅತಿಯಾದ ಕೆಫೀನ್ ಅನ್ನು ಹೊಂದಿರುತ್ತದೆ. ಒಂದು ಕಪ್ ಗ್ರೀನ್ ಟೀ 12 ಮಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಕೆಫೀನ್ ಸಾಮಾನ್ಯವಾದ ಚಹಾ ಮತ್ತು ಕಾಫಿಯಲ್ಲಿಯೂ ಕಂಡುಬರುತ್ತದೆ, ಇದರ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಕೆಫೀನ್ ತಲೆತಿರುಗುವಿಕೆ, ನಿದ್ರಾಹೀನತೆ, ವಾಕರಿಕೆ ಮತ್ತು ಚಡಪಡಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಕಬ್ಬಿಣದ ಕೊರತೆ
ಹಸಿರು ಚಹಾದ ಅತಿಯಾದ ಸೇವನೆಯು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಉಂಟುಮಾಡಬಹುದು. ಸಂಶೋಧನೆಯ ಪ್ರಕಾರ, ಹಸಿರು ಚಹಾದ ಅತಿಯಾದ ಸೇವನೆಯು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದು ಕಬ್ಬಿಣದ ಕೊರತೆಗೆ ಕಾರಣವಾಗುತ್ತದೆ ಮತ್ತು ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ.
ಜೀರ್ಣಾಂಗ ವ್ಯವಸ್ಥೆ
ಹೆಚ್ಚು ಕೆಫೀನ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಅತಿಯಾಗಿ ಗ್ರೀನ್ ಟೀ ಕುಡಿಯುವುದರಿಂದ ಜೀರ್ಣಕಾರಿ ರಸದ ಸಮತೋಲನ ಹಾಳುಮಾಡುತ್ತದೆ ಮತ್ತು ಹೊಟ್ಟೆಯ ತೊಂದರೆ ಹೆಚ್ಚಾಗುತ್ತದೆ. ಗ್ರೀನ್ ಟೀ ಕೂಡ ಅಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು.
ಇದನ್ನೂ ಓದಿ-ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹರಹಾಕಬೇಕೆ? ಇಲ್ಲಿದೆ ಒಂದು ಅದ್ಭುತ ಪಾನೀಯ!
ಯಕೃತ್ತಿನ ಹಾನಿ
ಹಸಿರು ಚಹಾವು ನಿಮ್ಮ ಯಕೃತ್ತನ್ನು ಸಹ ಹಾನಿಗೊಳಿಸುತ್ತದೆ. ಸಂಶೋಧನೆಯ ಪ್ರಕಾರ, ಹಸಿರು ಚಹಾವು EGCG (ಒಂದು ರೀತಿಯ ಕ್ಯಾಟೆಚಿನ್) ಅನ್ನು ಹೊಂದಿರುತ್ತದೆ, ಇದು ಯಕೃತ್ತಿಗೆ ಹಾನಿಕಾರಕ. ಸದ್ಯಕ್ಕೆ ಈ ವಿಷಯದ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.
ಇದನ್ನೂ ಓದಿ-Benefit Of Clove: ಬೆಳಗ್ಗೆ ಖಾಲಿ ಹೊಟ್ಟೆ ಲವಂಗ ಸೇವನೆಯ ಈ ಲಾಭಗಳು ನಿಮಗೆ ತಿಳಿದಿವೆಯಾ?
ಗರ್ಭಿಣಿಯರು ಹೆಚ್ಚು ಗ್ರೀನ್ ಟೀ ಕುಡಿಯಬಾರದು
ಗರ್ಭಿಣಿಯರು ದಿನಕ್ಕೆ ಎರಡು ಬಾರಿ ಮಾತ್ರ ಗ್ರೀನ್ ಟೀ ಕುಡಿಯಬೇಕು. ಇದರಲ್ಲಿ ಕೆಫೀನ್ ಇದ್ದು, ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದನ್ನೂ ಓದಿ-Blood Sugar Control: ನಿತ್ಯ ಬೆಳಗಿನ ಉಪಹಾರದಲ್ಲಿ ಈ ಸಂಗತಿಗಳಿರಲಿ, ನಿಯಂತ್ರಣದಲ್ಲಿರುತ್ತದೆ ಮಧುಮೇಹ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.