Guru Margi 2022 Impact: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿನ ರಾಶಿ ಬದಲಾವಣೆಯ ವಿಶೇಷ ಮಹತ್ವವನ್ನು ಹೇಳಲಾಗಿದೆ. ಯಾವುದೇ ಗ್ರಹದ ಪಥ ಮತ್ತು  ಹಿಮ್ಮುಖ ಚಲನೆ ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗುರು ಗ್ರಹವನ್ನು ಜ್ಞಾನ, ಗುರು, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಸಂಪತ್ತು, ದಾನದ ಅಂಶವೆಂದು ಪರಿಗಣಿಸಲಾಗಿದೆ. ನವೆಂಬರ್ 24 ರಂದು ದೇವಗುರು ಬೃಹಸ್ಪತಿ  ನೇರ ನಡೆ ಆರಂಭಿಸಲಿದ್ದಾರೆ. ಇದರ ಪರಿಣಾಮ ಅಖಂಡ ಸಾಮ್ರಾಜ್ಯ ಯೋಗ ರೂಪುಗೊಳ್ಳಲಿದೆ. ಈ ಯೋಗವು ಕೆಲವು ರಾಶಿಯವರಿಗೆ ವಿಶೇಷ ಫಲ ನೀಡಲಿದೆ. ಗುರುವಿನ ಪಥ ಬದಲಾವಣೆಯಿಂದಾಗಿ, ಈ ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ.


COMMERCIAL BREAK
SCROLL TO CONTINUE READING

ಕರ್ಕಾಟಕ ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರುವು ಈ ರಾಶಿಯವರ ಜಾತಕದಲ್ಲಿ ಒಂಭತ್ತನೇ ಮನೆಯಲ್ಲಿ ಸಾಗಲಿದ್ದಾನೆ. ಗುರುವಿನ ಈ ಸಂಚಾರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿರಲಿದೆ. ಅವರು ಅಧ್ಯಯನದಲ್ಲಿ ಹೆಚ್ಚು ಗಮನಹರಿಸುವುದು ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿದ್ದರೆ ಅದರಲ್ಲಿ ಯಶಸ್ಸು ಸಿಗಲಿದೆ. ಈ ಅವಧಿಯಲ್ಲಿ ವ್ಯಾಪಾರಸ್ಥರು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾಗಬಹುದು. ಇದು ನಿಮಗೆ ಮಂಗಳಕರವಾಗಿ ಸಾಬೀತಾಗಲಿದೆ. ಅಖಂಡ ಸಾಮ್ರಾಜ್ಯದ ಯೋಗದ ಮೂಲಕ ಅಧಿಕಾರವನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ.  


ಇದನ್ನೂ ಓದಿ : Solar Eclipse 2022: ಸೂರ್ಯಗ್ರಹಣದಂದು ರೂಪುಗೊಳ್ಳಲಿದೆ 'ಚತುರ್ಗ್ರಾಹಿ ಯೋಗ': ಈ 3 ರಾಶಿಗಳಿಗೆ ಭಾರೀ ಅಪಾಯ!


ವೃಷಭ ರಾಶಿ  :  ಗುರುವಿನ ಸಂಚಾರದಿಂದಾಗಿ ರೂಪುಗೊಳ್ಳುವ ಅಖಂಡ ಸಾಮ್ರಾಜ್ಯ ಯೋಗವು ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ನೀಡುತ್ತದೆ. ಈ ರಾಶಿಯ ಹನ್ನೊಂದನೇ ಮನೆಯಲ್ಲಿ, ಗುರುವಿನ ಸಂಚಾರ ಇರಲಿದೆ. ಈ ಜನರ ಶಕ್ತಿ, ಆತ್ಮವಿಶ್ವಾಸ ಹೆಚ್ಚಲಿದೆ. ವಾಹನ, ಆಸ್ತಿ ಖರೀದಿಗೆ ಮನಸ್ಸು ಮಾಡಬಹುದು. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ, ಇದರಿಂದಾಗಿ ಲಾಭ ಇರುತ್ತದೆ.    


ಮಿಥುನ ರಾಶಿ : ಈ ರಾಶಿಯವರಿಗೆ ಗುರುವಿನ ಸಂಚಾರವು ಪ್ರಯೋಜನಕಾರಿಯಾಗಲಿದೆ. ನಿರುದ್ಯೋಗಿಗಳು ಈ ಅವಧಿಯಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು. ಇವರ  ಜಾತಕದ ಹತ್ತನೇ ಸ್ಥಾನದಲ್ಲಿ ಗುರುವು ಚಲಿಸಲಿದ್ದಾನೆ. ಈ ರಾಶಿಯವರು ನಿರೀಕ್ಷಿತ ಯಶಸ್ಸನ್ನು ಪಡೆಯಲಿದ್ದಾರೆ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಸಂಬಂಧವು ಸುಧಾರಿಸುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಆಡಳಿತಾತ್ಮಕ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡುವ ಜನರು ಧನಾತ್ಮಕ ಫಲಿತಾಂಶ ಸಿಗಲಿದೆ. 


ಇದನ್ನೂ ಓದಿ : ಯಶಸ್ವಿ ಜೀವನ ನಿಮ್ಮದಾಗಬೇಕೆ? ಹಾಗಿದ್ದಲ್ಲಿ ಈ ಐದು ಸೂತ್ರಗಳನ್ನು ಪಾಲಿಸಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.