Guru Purnima 2022 Daan: ಜುಲೈ 13, 2022 ರಂದು ಈ ವರ್ಷದ ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತಿದೆ. ಗುರುವಿನ ಪ್ರತಿ ಆದರ ಹಾಗೂ ಗೌರವವನ್ನು ಪ್ರಕಟಿಸಲು ಈ ಉತ್ಸವವನ್ನು ಆಚರಿಸಲಾಗುತ್ತದೆ. ಗುರುವಿಲ್ಲದ ಬಾಳೇ ಕತ್ತಲು ಅರ್ಥಾತ್ ಗುರುವೇ ನಮಗೆ ಸರಿಯಾದ ಮಾರ್ಗದರ್ಶನವನ್ನು ತೋರುತ್ತಾರೆ ಎಂಬುದು.. ಪ್ರಾಚೀನ ಕಾಲದಿಂದಲೂ ಕೂಡ ಗುರು-ಶಿಷ್ಯರ ಪರಂಪರೆ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯನ್ನು ಗುರು ಪೂರ್ಣಿಮಾ ರೂಪದಲ್ಲಿ ಆಚರಿಸಲಾಗುತ್ತದೆ. ಗುರುವಿನ ಆಶೀರ್ವಾದ ಜೀವನದಲ್ಲಿ ಉನ್ನತಿ ಹಾಗೂ ಸಮೃದ್ಧಿಯನ್ನು ದಯಪಾಲಿಸುತ್ತದೆ. ಈ ಹುಣ್ಣಿಮೆಯ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಹಾಗಾದರೆ, ಬನ್ನಿ ರಾಶಿಗಳಿಗೆ ಅನುಗುಣವಾಗಿ ಗುರು ಪೂರ್ಣಿಮೆಯ ದಿನ ವಿಶೇಷ ಉಪಾಯಗಳು ಹಾಗೂ ದಾನಗಳನ್ನು ಮಾಡಿ ನೀವು ನಿಮ್ಮ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಮೇಷ ರಾಶಿ- ಆಷಾಢ ಹುಣ್ಣಿಮೆಯಂದು ಮೇಷ ರಾಶಿಯ ಜಾತಕದವರು ನಿರ್ಗತಿಕರಿಗೆ ಬೆಲ್ಲ, ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.

ವೃಷಭ ರಾಶಿ- ವೃಷಭ ರಾಶಿಯ ಜನರು ಕಲ್ಲು ಸಕ್ಕರೆ ದಾನ ಮಾಡಿ, ದಿನವಿಡೀ ಪೂಜೆಯ ಕೊಠಡಿಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ.

ಮಿಥುನ ರಾಶಿ- ಹಸುವಿಗೆ ಹಸಿರು ಮೇವು ಹಾಕಿದರೆ ನಿಮಗೆ ಶುಭಫಲಗಳು ಪ್ರಾಪ್ತಿಯಾಗಲಿವೆ. ನೀವು ಹಸಿರು ಬಣ್ಣದ ಹೆಸರು ಬೆಳೆಯನ್ನು ಸಹ ನೀವು ದಾನ ಮಾಡಬಹುದು. ಇದು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.


ಕರ್ಕ ರಾಶಿ- ಬಡವರಿಗೆ ಅಥವಾ ನಿರ್ಗತಿಕರಿಗೆ ಅನ್ನವನ್ನು ದಾನ ಮಾಡುವುದು ಉತ್ತಮ. ಒತ್ತಡವನ್ನು ತೊಡೆದುಹಾಕಲು ಈ ಪರಿಹಾರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.


ಸಿಂಹ ರಾಶಿ- ಗುರು ಪೂರ್ಣಿಮೆಯಂದು ಸಿಂಹ ರಾಶಿಯವರು ಗೋಧಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ.


ಕನ್ಯಾ ರಾಶಿ- ಈ ದಿನ, ಕನ್ಯಾ ರಾಶಿಯ ಜನರು ಬ್ರಾಹ್ಮಣರಿಗೆ ತಮ್ಮ ತಮ್ಮ ಭಕ್ತಿಗೆ ಅನುಗುಣವಾಗಿ ಆಹಾರ ಅಥವಾ ದಕ್ಷಿಣೆಯನ್ನು ನೀಡಬೇಕು. ಹಸುವಿಗೆ ಮೇವು ತಿನ್ನಿಸಿ.


ತುಲಾ ರಾಶಿ- ಆಷಾಢ ಹುಣ್ಣಿಮೆಯಂದು ತುಲಾ ರಾಶಿಯವರು ಚಿಕ್ಕ ಹೆಣ್ಣು ಮಕ್ಕಳಿಗೆ ಪಾಯಸ ದಾನ ಮಾಡಬೇಕು. ಇದು ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯವರು ಮಂಗಗಳಿಗೆ ಬೇಳೆ ಮತ್ತು ಬೆಲ್ಲವನ್ನು ತಿನ್ನಿಸಬೇಕು. ಅಲ್ಲದೆ, ಬಡ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಕರ.


ಧನು ರಾಶಿ- ಗುರು ಪೂರ್ಣಿಮೆಯ ದಿನದಂದು ಧನು ರಾಶಿಯವರು ದೇವಸ್ಥಾನದಲ್ಲಿ ಕಡಲೆ ಬೆಳೆ ದಾನ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.


ಮಕರ ರಾಶಿ- ಹುಣ್ಣಿಮೆಯಂದು ಬಡವರಿಗೆ ಕಂಬಳಿಗಳನ್ನು ಹಂಚುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಉದ್ಯೋಗದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.


ಇದನ್ನೂ ಓದಿ-Mercury Transit 2022: ಮಿಥುನ ರಾಶಿಯಲ್ಲಿ ಇಂದು ಬುಧ-ಸೂರ್ಯರ ಸಂಯೋಜನೆ, 3 ರಾಶಿಗಳ ಜನರಿಗೆ ಜಬರ್ದಸ್ತ್ ಧನಲಾಭ


ಕುಂಭ ರಾಶಿ- ವೃದ್ಧಾಶ್ರಮಕ್ಕೆ ಬಟ್ಟೆ, ಆಹಾರ ಮತ್ತು ಹಣವನ್ನು ದಾನ ಮಾಡಿ. ಅಲ್ಲದೆ ದೇವಸ್ಥಾನದಲ್ಲಿ ಕಪ್ಪು ಉಂಡೆಯನ್ನು ದಾನ ಮಾಡಬೇಕು.


ಇದನ್ನೂ ಓದಿ-Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ


ಮೀನ ರಾಶಿ- ಮೀನ ರಾಶಿಯ ಜಾತಕದವರು ಹುಣ್ಣಿಮೆಯಂದು ಬಡವರಿಗೆ ಅರಿಶಿನ ಮತ್ತು ಬೇಳೆ ಹಿಟ್ಟಿನಿಂದ ಮಾಡಿದ ಸಿಹಿತಿಂಡಿಗಳನ್ನು ದಾನ ಮಾಡಿ. ಇದು ನಿಮ್ಮ ಆಸೆಯನ್ನು ಪೂರೈಸುತ್ತದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.