Guru Purnima 2022 Date Puja Muhurat, Importance: ಈ ವರ್ಷ ಜುಲೈ 13, 2022ರಂದು ಅಂದರೆ ಬುಧವಾರ ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತಿದೆ. ಆಷಾಢ ತಿಂಗಳ ಹುಣ್ಣಿಮೆಯನ್ನು ಸಾಮಾನ್ಯವಾಗಿ ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ವೇದಗಳ ರಚಿಸಿದ ಮಹರ್ಷಿ ವೇದವ್ಯಾಸರ ಜಯಂತಿಯನ್ನು ಆಚರಿಸಲಾಗುತ್ತದೆ ಮತ್ತು ಅವರಿಗೆ ವಿಶೇಷ ಪೂಜೆ-ಅರ್ಚನೆಯನ್ನು ಸಲ್ಲಿಸಲಾಗುತ್ತದೆ. ಮಹರ್ಷಿ ವೇದವ್ಯಾಸ ಅವರನ್ನು ಪ್ರಥಮ ಗುರು ಎಂದು ಕರೆಯಲ್ಲಾಗುತ್ತದೆ. ಗುರು ಪದದ ಅರ್ಥ- ಗು-ಅಂಧಕಾರ, ರು-ದೂರ ಮಾಡುವ ಎಂದಾಗಿದೆ. ಮಹರ್ಷಿ ವೇದವ್ಯಾಸರು ಇಡೀ ಮನುಕುಲಕ್ಕೆ ವೇದಗಳ ಜ್ಞಾನ ನೀಡಿದರು ಎಂದು ಹೇಳಲಾಗುತ್ತದೆ. ಇದಲ್ಲದೆ ವೇದವ್ಯಾಸರನ್ನು ಶ್ರೀವಿಷ್ಣುವಿನ ಅಂಶಾವಾತಾರ ಎಂದೂ ಕೂಡ ಭಾವಿಸಲಾಗುತ್ತದೆ. ಹೀಗಾಗಿ ಗುರು ಪೂರ್ಣಿಮೆಯ ದಿನ ಶ್ರೀವಿಷ್ಣುವಿಗೂ ಕೂಡ ಪೂಜೆ ಸಲ್ಲಿಸಲಾಗುತ್ತದೆ. ಇದಲ್ಲದೆ ಈ ದಿನ ಜನರು ತಮ್ಮ ತಮ್ಮ ಗುರುಗಳಿಗೆ ಪೂಜೆ ಸಲ್ಲಿಸಿ ಅವರನ್ನು ಗೌರವಿಸುತ್ತಾರೆ. 

COMMERCIAL BREAK
SCROLL TO CONTINUE READING

ಗುರು ಪೂರ್ಣಿಮೆಯ ದಿನ ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ
ಗುರು ಪೂರ್ಣಿಮೆಗೆ ಧಾರ್ಮಿಕವಾಗಿ ಎಷ್ಟು ಮಹತ್ವವಿದೇಯೋ ಅಷ್ಟೇ ಮಹತ್ವ ಜೋತಿಷ್ಯ ದೃಷ್ಟಿಯಿಂದಲೂ ಕೂಡ ಇದೆ. ಈ ಬಾರಿಯ ಗುರು ಪೂರ್ಣಿಮೆಯ ದಿನ ಗ್ರಹಗಳ ಸ್ಥಿತಿ ತುಂಬಾ ಶುಭವಾಗಿದೆ. 2022ರ ಗುರು ಪೂರ್ಣಿಮೆಯ ದಿನ ಮಂಗಳ, ಬುಧು, ಗುರು ಹಾಗೂ ಶನಿ ಗ್ರಹಗಳು ತುಂಬಾ ಶುಭ ಸ್ಥಿತಿಯಲ್ಲಿ ಇರಲಿವೆ. ಹೀಗಾಗಿ ಗುರು ಪೂರ್ಣಿಮಾ ದಿನ ರುಚಕ, ಭದ್ರ, ಹಂಸ ಹಾಗೂ ಶಶ್ ಹೆಸರಿನ ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇದರ ಜೊತೆಗೆ ಸೂರ್ಯ ಹಾಗೂ ಬುಧ ಒಂದೇ ರಾಶಿಯಲ್ಲಿರುವ ಕಾರಣ ಬುಧಾದಿತ್ಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಒಟ್ಟಾರೆ ಹೇಳುವುದಾದರೆ, ಗುರು ಪೂರ್ಣಿಮಾ ದಿನ ಮಾಡಲಾಗುವ ಪೂಜೆ ಮತ್ತು ಉಪಾಯಗಳು ಅತ್ಯಂತ ಶುಭ ಫಲಪ್ರದ ಸಾಬೀತಾಗಲಿವೆ.


ಗುರು ಪೂರ್ಣಿಮಾ ಶುಭ ಮುಹೂರ್ತ, ಪೂಜಾ ವಿಧಿ
ಹಿಂದೂ ಪಂಚಾಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ತಿಥಿ 13 ಜುಲೈ ಬೆಳಗ್ಗೆ 4 ರಿಂದ ಆರಂಭಗೊಳ್ಳಲಿದ್ದು, 13 ಜುಲೈ ತಡರಾತ್ರಿ 12.06ರವರೆಗೆ ಇರಲಿದೆ. ಹೀಗಾಗಿ ಇಡೀ ದಿನ ಗುರುವಿನ ಪೂಜೆಗಾಗಿ, ಜೋತಿಷ್ಯ ಉಪಾಯಗಳನ್ನು ಮಾಡಲು ಶುಭ ಮುಹೂರ್ತ ಇರಲಿದೆ.


ಇದನ್ನೂ ಓದಿ-Hanuman Mantra: ಮಂಗಳವಾರ ಆಂಜನೇಯನ ಮಂತ್ರ ಜಪಿಸುವುದಕ್ಕೆ ವಿಶೇಷ ಮಹತ್ವವಿದೆ, ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ

ಗುರು ಪೂರ್ಣಿಮೆಯ ದಿನದಂದು ಬೆಳಗ್ಗೆ ಬೇಗನೆ ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ. ಮನೆಯ ದೇವರ ಕೋಣೆಯಲ್ಲಿ ದೇವತೆಗಳನ್ನು ಪೂಜಿಸಿ. ಶ್ರೀವಿಷ್ಣು ಮತ್ತು ವೇದವ್ಯಾಸರನ್ನು ಆರಾಧಿಸಿ. ನಂತರ ನಿಮ್ಮ ಗುರುಗಳ ತಿಲಕವನ್ನು ಮಾಡಿ, ಮಾಲೆಯನ್ನು ಧರಿಸಿ. ಗುರುಗಳನ್ನು ಭೇಟಿಯಾಗಲು ಸಾಧ್ಯವಾದರೆ, ಹೋಗಿ ಅವರ ಆಶೀರ್ವಾದವನ್ನು ಪಡೆಯಿರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಗೌರವಿಸಿ.


ಇದನ್ನೂ ಓದಿ-Love Marriage Line: ಲವ್ ಲೈಫ್ ಕುರಿತು ಹೇಳುತ್ತೆ ಅಂಗೈಯಲ್ಲಿನ ಈ ರೇಖೆ, ನೀವೂ ಪರೀಕ್ಷಿಸಿಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.