ನವದೆಹಲಿ: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹವು ಸಂಕ್ರಮಿಸಿದಾಗ ರಾಶಿಗಳ ಜೀವನದ ಮೇಲೆ ಪರಿಣಾಮವುಂಟಾಗುತ್ತದೆ. ಅಲ್ಲದೆ ಅನೇಕ ಬಾರಿ ಮತ್ತೊಂದು ಗ್ರಹದೊಂದಿಗೆ ರಾಶಿಯ ಒಕ್ಕೂಟವು ಶುಭ ಮತ್ತು ಅಶುಭ ಮೈತ್ರಿಗಳನ್ನು ಸೃಷ್ಟಿಸುತ್ತದೆ. ಗುರುವು ಏಪ್ರಿಲ್ 22ರಂದು ಸ್ವರಾಶಿ ಮೀನದಿಂದ ಹೊರಟು ಮೇಷ ರಾಶಿಯಲ್ಲಿ ಸಾಗಲಿದೆ. ಛಾಯಾಗ್ರಹ ರಾಹು ಈಗಾಗಲೇ ಇಲ್ಲಿದ್ದು, ಎರಡೂ ಗ್ರಹಗಳು ಸೇರಿ ಗುರು ಚಂಡಾಲ ಯೋಗ ಉಂಟಾಗುತ್ತಿದೆ. ಇದರ ಪರಿಣಾಮವು ಅನೇಕ ರಾಶಿಗಳ ಜೀವನದ ಮೇಲೆ ಕಂಡುಬರುತ್ತದೆ. ಆದರೆ ಈ 3 ರಾಶಿಯ ಜನರು ವಿಶೇಷವಾಗಿ ಜಾಗರೂಕರಾಗಿರಬೇಕು.


COMMERCIAL BREAK
SCROLL TO CONTINUE READING

ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಗುರು ಮತ್ತು ರಾಹುಗಳ ಸಂಯೋಗವು ಮಿಥುನ ರಾಶಿಯವರಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಗುರು ಚಂಡಾಲ ಯೋಗವು ಈ ಜನರಿಗೆ ಪ್ರತಿಕೂಲ ಪರಿಣಾಮಗಳನ್ನು ನೀಡುತ್ತದೆ. ಈ ಸಮಯದಲ್ಲಿ ಧನಹಾನಿಯಾಗುವ ಸಂಭವವಿದೆ. ಈ ಅವಧಿಯಲ್ಲಿ ಯಾವುದನ್ನಾದರೂ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಅಥವಾ ಅದನ್ನು ತಪ್ಪಿಸಿ. ಇಷ್ಟೇ ಅಲ್ಲ ಕೆಲವು ಸಮಯದವರೆಗೆ ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ.


ಇದನ್ನೂ ಓದಿ: Palmistry: ಕೈಯಲ್ಲಿ ‘ವಿಷ್ಣು ರೇಖೆ’ ಹೊಂದಿರುವವರು ತುಂಬಾ ಅದೃಷ್ಟವಂತರು!


ಮೇಷ ರಾಶಿ: ಗುರು ಮತ್ತು ರಾಹುವಿನ ಸಂಯೋಗದೊಂದಿಗೆ ಈ ರಾಶಿಯಲ್ಲಿ ಗುರು ಚಂಡಾಲ ಯೋಗವು ರೂಪುಗೊಳ್ಳಲಿದ್ದು, ಈ ರಾಶಿಯವರಿಗೆ ಒಳ್ಳೆಯದಾಗುವುದಿಲ್ಲ. ಏಪ್ರಿಲ್ 22ರ ನಂತರ 2 ಗ್ರಹಗಳು ಈ ರಾಶಿಯಲ್ಲಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯ ಜನರ ಸಮಸ್ಯೆಗಳು ನಿರಂತರವಾಗಿ ಹೆಚ್ಚಾಗುತ್ತವೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅದೇ ರೀತಿ ಹೂಡಿಕೆಗೆ ಈ ಸಮಯ ಸರಿಯಲ್ಲ, ಹಣ ನಷ್ಟವಾಗುವ ಸಂಭವವಿದೆ. ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ. ಯಾವುದೇ ರೀತಿಯ ಚರ್ಚೆಯಿಂದ ನಿಮ್ಮನ್ನು ದೂರವಿರಿ. 


ಕರ್ಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಗುರುವಿನ ಸಂಚಾರವು ಕರ್ಕ ರಾಶಿಯವರಿಗೆ ಅಶುಭಕರವಾಗಿರುತ್ತದೆ. ಈ ಸಮಯದಲ್ಲಿ ಈ ಜನರು ನಕಾರಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ. ಈ ಮೈತ್ರಿಯು ಈ ರಾಶಿಯ ಜನರಿಗೆ ತುಂಬಾ ಕೆಟ್ಟದಾಗಿರುತ್ತದೆ. ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು ಮತ್ತು ಪ್ರತಿ ಹಂತದಲ್ಲೂ ವ್ಯಕ್ತಿಯು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಾತಿನ ಮೇಲೆ ವಿಶೇಷ ನಿಯಂತ್ರಣ ಹೊಂದುವ ಅವಶ್ಯಕತೆಯಿದೆ. ವಿಶೇಷವಾಗಿ ಶತ್ರುಗಳೊಂದಿಗೆ ಜಾಗರೂಕರಾಗಿರಬೇಕು. 


ಇದನ್ನೂ ಓದಿ: ಗುರು ಸಂಕ್ರಮಣ 2023: ಈ 3 ರಾಶಿಯವರು ಅದೃಷ್ಟದ ಜೊತೆಗೆ ಹಣವಂತರಾಗುತ್ತಾರೆ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.