Lakshmi Narayan Rajyog: ಗ್ರಹಗಳು ಮತ್ತು ನಕ್ಷತ್ರಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ ಮತ್ತು ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ ಎಂದು ವೈದಿಕ ಗ್ರಂಥಗಳಲ್ಲಿ ಹೇಳಲಾಗಿದೆ, ಇದರಿಂದಾಗಿ ನಮ್ಮ ಜೀವನದಲ್ಲಿ ವಿಶೇಷ ಪರಿಣಾಮ ಕಂಡುಬರುತ್ತದೆ. ಗ್ರಹಗಳ ಚಲನೆಗಳು ನಮ್ಮ ಜೀವನದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆ ಈ ಬಾರಿ ಲಕ್ಷ್ಮೀ ನಾರಾಯಣ ರಾಜಯೋಗ ಎಂಬ ಮಂಗಳಕರ ಯೋಗವನ್ನು ರೂಪಿಸುತ್ತಿವೆ. ಲಕ್ಷ್ಮೀ ನಾರಾಯಣ ಯೋಗದ ವಿಶೇಷ ಮಹತ್ವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವುದೇ ರಾಶಿಯಲ್ಲಿ ಬುಧ ಮತ್ತು ಶುಕ್ರ ಒಂದುಗೂಡಿದಾಗ, ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳುತ್ತದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಈ ಯೋಗದಿಂದ ತಾಯಿ ಲಕ್ಷ್ಮಿಯ ಕೃಪಾವೃಷ್ಟಿ ವ್ಯಕ್ತಿಯ ಮೇಲಾಗುತ್ತದೆ ಮತ್ತು ವ್ಯಕ್ತಿಯು ಅಪಾರ ಧನಸಂಪತ್ತು ಪಡೆಯುತ್ತಾನೆ ಎನ್ನಲಾಗುತ್ತದೆ. ಈ ವಿಶೇಷ ಸಂಯೋಜನೆಯ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸುತ್ತದೆ, ಆದರೆ ಅದರ ವಿಶೇಷ ಯೋಗ ಕೆಲ ರಾಶಿಗಳ ಮೇಲೆ ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಹಾಗಾದರೆ ಬನ್ನಿ ಯಾವ ರಾಶಿಗಳ ಜನರಿಗೆ ಈ ರಾಜ ಲಕ್ಷ್ಮಿ ಯೋಗ ಅದೃಷ್ಟವನ್ನು ಕರುಣಿಸಲಿದೆ ತಿಳಿದುಕೊಳ್ಳೋಣ ಬನ್ನಿ,
ಲಕ್ಷ್ಮಿ ನಾರಾಯಣ ಯೋಗ ಈ ರಾಶಿಗಳ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ
ಧನು ರಾಶಿ- ಲಕ್ಷ್ಮೀ ನಾರಾಯಣ ಯೋಗವು ಧನು ರಾಶಿಯವರಿಗೆ ಧನಾತ್ಮಕ ಸಾಬೀತಾಗಲಿದೆ. ಸಂಪತ್ತು ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲ್ಪಟ್ಟ ನಿಮ್ಮ ರಾಶಿಯಿಂದ ದ್ವಿತೀಯ ಭಾವದಲ್ಲಿ ಈ ವಿಶೇಷ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ನೀವು ಸಿಕ್ಕಿಬಿದ್ದ ಮತ್ತು ಸಾಲ ನೀಡಿದ ಹಣವನ್ನು ಮರಳಿ ಪಡೆಯಬಹುದು. ಅಲ್ಲದೆ, ಪಾರ್ಟ್ನರ್ ಶಿಪ್ ನಲ್ಲಿ ಕೆಲಸ ಮಾಡುವವರು ಈ ಅವಧಿಯಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ಈ ಯೋಗವು ಶಿಕ್ಷಣ, ಮಾಧ್ಯಮ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಸಾಬೀತಾಗಲಿದೆ.
ಮಕರ ರಾಶಿ- ಲಕ್ಷ್ಮೀ ನಾರಾಯಣ ರಾಜಯೋಗವು ಮಕರ ರಾಶಿಯವರಿಗೆ ಬಹಳ ವಿಶೇಷವಾಗಿರಲಿದೆ. ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ನೆರವೇರಲಿವೆ. ಇದ್ದಕ್ಕಿದ್ದಂತೆ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನೀವು ಯಾವುದೇ ಯೋಜನೆಯಲ್ಲಿ ಯಶಸ್ಸನ್ನು ಪಡೆಯಬಹುದು. ವಿದ್ಯಾರ್ಥಿ ವರ್ಗದ ಜನರು ಅದೃಷ್ಟವನ್ನು ಪಡೆಯಬಹುದು.
ಮೀನ ರಾಶಿ- ಲಕ್ಷ್ಮೀ ನಾರಾಯಣ ರಾಜಯೋಗದಿಂದ ಮೀನ ರಾಶಿಯವರಿಗೆ ದಿಢೀರ್ ಹಣ ಸಿಗಲಿದೆ. ನಿಮ್ಮ ಜಾತಕದ 11ನೇ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದು ಆದಾಯ ಮತ್ತು ಲಾಭದ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ದೊಡ್ಡ ಒಪ್ಪಂದವನ್ನು ಅಂತಿಮಗೊಳಿಸಬಹುದು. ಭವಿಷ್ಯದಲ್ಲಿ ನೀವು ಅದರ ಪ್ರಯೋಜನವನ್ನು ಪಡೆಯಬಹುದು. ಪ್ರಯಾಣದ ಬಲವಾದ ಅವಕಾಶಗಳು ಗೋಚರಿಸುತ್ತವೆ.
ಇದನ್ನೂ ಓದಿ-Chaturgrahi Yog: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ಜನರ ಮೇಲೆ ಭಾರಿ ಧನವೃಷ್ಟಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.