Guru Vakri 2022: ಶನಿಯ ಹಿಮ್ಮುಖ ಚಲನೆಯ ಬಳಿಕ ಈ ದಿನಾಂಕದಿಂದ ಬೃಹಸ್ಪತಿಯ ವಕ್ರ ನಡೆ ಆರಂಭ, ಈ ರಾಶಿಗಳ ಜನರ ಭಾಗ್ಯ ಹೊಳೆಯಲಿದೆ
Guru Vakri 2022 in Pisces: ಜುಲೈ 29 ರಿಂದ, ಗುರು ತನ್ನದೇ ಆದ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದೆ. ಇದು ವಿವಿಧ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಆದರೆ, ಈ ಸಮಯವು 4 ರಾಶಿಗಳ ಜಾತಕದವರಿಗೆ ತುಂಬಾ ಅನುಕೂಲಕರವಾಗಿರಲಿದೆ.
Guru Retrograde In July 2022 - ಧನ ಹಾಗೂ ವೈಭವದ ಸ್ವಾಮಿ ಗ್ರಹವಾಗಿರುವ ದೇವ ಗುರು ಬೃಹಸ್ಪತಿಯ ವಕ್ರನಡೆ ವಿಭಿನ್ನ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಏಪ್ರಿಲ್ 13, 2022 ರಿಂದ ಗುರು ತನ್ನದೇ ಆದ ಮೀನ ರಾಶಿಯಲ್ಲಿ ಗೋಚರಿಸಿದ್ದಾನೆ. ಅಂದಿನಿಂದ ಇದುವರೆಗೆ ಬೃಹಸ್ಪತಿ ಮೀನ ರಾಶಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಬರುವ ಜುಲೈ 29ರಂದು ಗುರು ತನ್ನ ಸ್ವರಾಶಿಯಾಗಿರುವ ಮೀನ ರಾಶಿಯಲ್ಲಿ ಹಿಮ್ಮುಖ ನಡೆಯನ್ನು ಅನುಸರಿಸಲಿದೆ. ಜ್ಞಾನ ಹಾಗೂ ಬುದ್ಧಿಯ ಪ್ರತೀಕವಾಗಿರುವ ಗುರುದೇವ ಬೃಹಸ್ಪತಿಯಾ ವಕ್ರನಡೆಯ ಸಕಾರಾತ್ಮಕ ಪ್ರಭಾವ ಒಟ್ಟು 4 ರಾಶಿಗಳ ಮೇಲೆ ಗೋಚರಿಸಲಿದೆ.
ಈ ರಾಶಿಗಳಿಗೆ ಭಾರಿ ಲಾಭ
ವೃಷಭ ರಾಶಿ- ದೇವ-ದೇವತೆಗಳ ಗುರು ಬೃಹಸ್ಪತಿಯ ಹಿಮ್ಮುಖ ಚಲನೆ ವೃಷಭ ರಾಶಿಯ ಜಾತಕದವರಿಗೆ ಅನುಕೂಲಕರವಾಗಿರಲಿದೆ. ವ್ಯಾಪಾರದಲ್ಲಿ ವೃದ್ಧಿ ಇರಲಿದೆ. ಕುಟುಂಬದ ಆರ್ಥಿಕ ಸಂಪನ್ನತೆ ಹೆಚ್ಚಾಗಲಿದೆ. ಕುಟುಂಬದ ಸದಸ್ಯರ ಆರೋಗ್ಯ ಉತ್ತಮವಾಗಲಿದೆ. ಶಿಕ್ಷಣ ಹಾಗೂ ನೌಕರಿ ಕ್ಷೇತ್ರದಲ್ಲಿ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ- ಮಿಥುನ ರಾಶಿಯಲ್ಲಿ ಜನಿಸಿದ ಜಾತಕದವರಿಗೆ ಈ ಸಮಯ ಅನುಕೂಲಕರವಾಗಿರಲಿದೆ. ಆದರೆ, ಭಾಷೆ ಹಾಗೂ ಮಾತಿನ ಮೇಲೆ ನಿಯಂತ್ರಣವಿರಲಿ. ಅತ್ಯಂತ ಕಡಿಮೆ ಪ್ರಯತ್ನದಿಂದ ಹೆಚ್ಚು ಲಾಭ ಸಿಗಲಿದೆ. ಇದಕ್ಕಾಗಿ ಕಾರ್ಯಕ್ಷೇತ್ರದಲ್ಲಿ ವಿಶೇಷ ವ್ಯಕ್ತಿಯ ಮಾರ್ಗದರ್ಶನ ನಿಮಗೆ ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-ಜುಲೈ 12ರ ನಂತರ ಈ ರಾಶಿಯವರ ಮೇಲಿರಲಿದೆ ಶನಿಯ ಕೃಪಾ ದೃಷ್ಟಿ
ಕರ್ಕ ರಾಶಿ- ಈ ಸಮಯವು ಕರ್ಕ ರಾಶಿಯವರಿಗೆ ತುಂಬಾ ಉಪಯುಕ್ತ ಸಾಬೀತಾಗಲಿದೆ. ಅವರ ಸಂಪತ್ತು, ಕೀರ್ತಿ, ಪ್ರತಿಷ್ಠೆ, ಗೌರವ, ಸ್ಥಾನ-ಮಾನ ಹೆಚ್ಚಾಗಲಿದೆ. ಯಾವುದೇ ಸ್ಥಗಿತಗೊಂಡ ಕಾರ್ಯ ಪೂರ್ಣಗೊಳ್ಳುವುದರಿಂದ ಆರ್ಥಿಕ ಪಕ್ಷಕ್ಕೆ ಬಲ ಸಿಗಲಿದೆ. ಹೊಸ ಹೂಡಿಕೆಯಲ್ಲಿ ಯಶಸ್ಸು ಕಾಣುವಿರಿ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಇದನ್ನೂ ಓದಿ-ಲಕ್ಷ್ಮೀಯ ಕೃಪೆ ಬೇಕಾದರೆ ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ನೆಡಬೇಕು
ಕುಂಭ ರಾಶಿ- ಜುಲೈ 29 ರಿಂದ ಆರಂಭಗೊಳ್ಳುತ್ತಿರುವ ಗುರುವಿನ ಹಿಮ್ಮುಖ ಚಲನೆ ಕುಂಭ ರಾಶಿಯವರ ಮೇಲೂ ಸಕಾರಾತ್ಮಕ ಪ್ರಭಾವ ಬೀರಲಿದೆ. ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ವ್ಯಾಪಾರದ ಬೆಳವಣಿಗೆಯೊಂದಿಗೆ, ಹೊಸ ಹೂಡಿಕೆಗಳು ಸಹ ಯಶಸ್ವಿಯಾಗುವ ನಿರೀಕ್ಷೆಯಿದೆ. ಕುಟುಂಬದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಸಮಾಜದಲ್ಲಿನ ನಿಮ್ಮ ಸಕ್ರಿಯ ಪಾತ್ರ ಹೆಚ್ಚಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿ ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.