ಲಕ್ಷ್ಮೀಯ ಕೃಪೆ ಬೇಕಾದರೆ ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ನೆಡಬೇಕು

ತುಳಸಿ ಗಿಡ ನೆಡುವಾಗ ಅಥವಾ ಮನೆಯಲ್ಲಿರಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಲಕ್ಷ್ಮೀ ದೇವಿಯ ಕೋಪಕ್ಕೆ  ಗುರಿಯಾಗಬೇಕಾಗಬಹುದು.

Written by - Ranjitha R K | Last Updated : Jun 27, 2022, 08:52 AM IST
  • ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಅಗತ್ಯ.
  • ತಪ್ಪು ದಿಕ್ಕಿನಲ್ಲಿ ಇಟ್ಟರೆ ಇಡೀ ಕುಟುಂಬ ತೊಂದರೆ ಎದುರಿಸಬೇಕಾಗುತ್ತದೆ.
  • ತುಳಸಿಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷ್ಮೀ ಯ ಕೋಪಕ್ಕೆ ಕಾರಣವಾಗುತ್ತದೆ.
 ಲಕ್ಷ್ಮೀಯ  ಕೃಪೆ ಬೇಕಾದರೆ ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ನೆಡಬೇಕು  title=
Tulsi vastu tips (file photo)

ಬೆಂಗಳೂರು : ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನವಿದೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯಲ್ಲಿಟ್ಟರೆ, ಅನೇಕ ಸಮಸ್ಯೆಗಳು ದೂರವಾಗುತ್ತವೆ. ತುಳಸಿ ಗಿಡವು ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ತುಳಸಿ ಗಿಡವುಲಕ್ಷ್ಮೀ  ಮತ್ತು ವಿಷ್ಣುವಿನ ಆಶೀರ್ವಾದವನ್ನು ಕರುಣಿಸುತ್ತದೆ. ಆದರೆ, ತುಳಸಿ ಗಿಡ ನೆಡುವಾಗ ಅಥವಾ ಮನೆಯಲ್ಲಿರಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಲಕ್ಷ್ಮೀ ದೇವಿಯ ಕೋಪಕ್ಕೆ  ಗುರಿಯಾಗಬೇಕಾಗಬಹುದು. ಲಕ್ಷ್ಮೀ ದೇವಿಯು ಅಸಮಾಧಾನಗೊಂಡರೆ ಬಡತನ ಸೇರಿದಂತೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು : 
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಅಗತ್ಯ. ತುಳಸಿಯನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಇಡೀ ಕುಟುಂಬ ತೊಂದರೆ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು.  ಏಕೆಂದರೆ ಈ ದಿಕ್ಕು ಯಮ ಮತ್ತು ಪಿತ್ರರಿಗೆ ಸೇರಿದೆ. ತುಳಸಿಯನ್ನು ಈ ದಿಕ್ಕಿನಲ್ಲಿ ಇಟ್ಟರೆ ಲಕ್ಷ್ಮೀ ಯ ಕೋಪಕ್ಕೆ ಕಾರಣವಾಗುತ್ತದೆ.  ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಬಡತನವು ಕುಟುಂಬವನ್ನು ಸುತ್ತುವರೆಯುವಂತಾಗುತ್ತದೆ. ತುಳಸಿಯನ್ನು  ಕುಬೇರನ ದಿಕ್ಕಾಗಿರುವ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮ. ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ. ಕೆಲಸದಲ್ಲಿ ತ್ವರಿತ ಪ್ರಗತಿ ಸಿಗುತ್ತದೆ. 

ಇದನ್ನೂ ಓದಿ: Navgrah Upay : ನೀರಿನಲ್ಲಿ ಈ ವಸ್ತು ಬೆರೆಸಿ ಸ್ನಾನ ಮಾಡಿ, ನಿಮ್ಮ ಜಾತಕ ದೋಷಗಳು ದೂರಾಗುತ್ತವೆ!

ಈ ನಿಯಮಗಳನ್ನು ಅನುಸರಿಸಿ  :
ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಇತರ ಕೆಲವು ನಿಯಮಗಳನ್ನು ಪಾಲಿಸುವುದು ಸಹ ಅಗತ್ಯವಾಗಿದೆ. ಉದಾಹರಣೆಗೆ- ಭಾನುವಾರ ಮತ್ತು ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಅರ್ಪಿಸಬಾರದು.  ಈ ದಿನದಂದು ತುಳಸಿ ವಿಷ್ಣುವಿಗಾಗಿ ಉಪವಾಸವನ್ನು ಆಚರಿಸುತ್ತಾರೆ. ಹಾಗೆಯೇ ಟೆರೇಸ್ ಮೇಲೆ ತುಳಸಿ ಗಿಡ ನೆಡಬಾರದು. ತುಳಸಿ ಗಿಡದ ಸುತ್ತ ಕಸ ಕೊಲೆ ಇರದಂತೆ ನೋಡಿಕೊಳ್ಳಬೇಕು.  ಏಕಾದಶಿ ಮತ್ತು ಅಮವಾಸ್ಯೆಯ ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳಬಾರದು. 

ಇದನ್ನೂ ಓದಿ: Signature Analysis: ನೀವು ಮಾಡುವ ಸಹಿಯಿಂದಲೇ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News