Gurudosh Parihar: ನವಗ್ರಹಗಳಲ್ಲಿ ಬೃಹಸ್ಪತಿಯನ್ನು ಎಂದರೆ ಗುರು ಗ್ರಹವನ್ನು ಅತ್ಯಂತ ಪ್ರಭಾವಶಾಲಿ ಗ್ರಹ ಎಂದು ಪರಿಗಣಿಸಲಾಗಿದೆ.  ಜಾತಕದಲ್ಲಿ ಉಚ್ಛನಾದ ಮನೆಯಲ್ಲಿ ಗುರು ಗ್ರಹವು ಹೆಚ್ಚು ಪ್ರಬಲವಾಗಿದ್ದರೆ, ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಅವನ ಪ್ರಗತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಗುರುಗ್ರಹವು ವಿವಾಹ ಜೀವನ ಮತ್ತು ಅದೃಷ್ಟದ ಕಾರಕ ಗ್ರಹವಾಗಿದೆ. ಆದರೆ ಗುರು ದುರ್ಬಲ ಸ್ಥಿತಿಯಲ್ಲಿದ್ದರೆ ವ್ಯಕ್ತಿಯ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಆತ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಗುರು ದೋಷ ಎಂದೂ ಕೂಡ ಬಣ್ಣಿಸಲಾಗುತ್ತದೆ. ಗುರುದೋಷದಿಂದ ಪರಿಹಾರ (Gurudosh Parihar) ಪಡೆಯಲು ಹಲವು ಪೂಜೆ, ವ್ರತಗಳನ್ನು ಮಾಡಲಾಗುತ್ತದೆ. ಆದರೆ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವ ಮೂಲಕ ಗುರು ದೋಷಕ್ಕೆ ಪರಿಹಾರ ಪಡೆಯಬಹುದಾಗಿದೆ. ಹಾಗಾಗಿ ಸಂತೋಷ ಮತ್ತು ಸಮೃದ್ಧಿಯ ತಾಯಿಯಾದ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಗುರುವಾರ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ತಿಳಿಯೋಣ...


COMMERCIAL BREAK
SCROLL TO CONTINUE READING

ಗುರು ಗ್ರಹದ ಅನುಗ್ರಹಕ್ಕಾಗಿ ಗುರುವಾರದಂದು ಈ ಕೆಲಸಗಳನ್ನು ಮಾಡಿ:
ಭಗವಾನ್ ವಿಷ್ಣು (Lord Vishnu) ಮತ್ತು ತಾಯಿ ಲಕ್ಷ್ಮಿ (Lord Lakshmi) ಅನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಗುರುವಾರ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ನಾನಾ ರೀತಿಯ ಕಷ್ಟಗಳು ಮಂಜಿನಂತೆ ಕರಗಿಹೋಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧ್ಯವಾದರೆ, ಪ್ರತಿ ಗುರುವಾರದಂದು ಗುರುವಾರದ ಕಥೆಗಳನ್ನೂ ಓದಿ. ಈ ಕಾರಣದಿಂದಾಗಿ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಮತ್ತು ಮನೆಯಲ್ಲಿ ಸುಖ-ಶಾಂತಿ, ಸಂತೋಷ ಮತ್ತು ಸಮೃದ್ಧಿಯು ಉಳಿಯುತ್ತದೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ- ನಿಮ್ಮ ಜೀವನದಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆಯೇ? ಪಿತೃ ದೋಷದ ಲಕ್ಷಣಗಳು ಮತ್ತು ಪರಿಹಾರಗಳನ್ನು ತಿಳಿಯಿರಿ


ಗುರುವಾರದಂದು (Thursday Remedies) ಬೇಳೆ, ಬೆಲ್ಲ, ಅಕ್ಕಿ ಮತ್ತು ಅರಿಶಿನವನ್ನು ಹಸುವಿಗೆ ತಿನ್ನಿಸುವುದು ಶಾಸ್ತ್ರದಲ್ಲಿ ಶುಭ ಎಂದು ಪರಿಗಣಿಸಲಾಗಿದೆ.


ಗುರುವಾರದಂದು ಸ್ನಾನ ಮಾಡುವಾಗ ನೀರಿಗೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಅದೇ ನೀರಿನಿಂದ ಸ್ನಾನ ಮಾಡಿದರೆ ಒಳಿತು.


ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಡವರಿಗೆ, ಕೈಲಾಗದವರಿಗೆ ಹಣ್ಣು-ಹಂಪಲು, ಉಡುಪನ್ನು ದಾನ ಮಾಡಿದರೆ ಆರ್ಥಿಕ ಸಂಕಷ್ಟದಿಂದ ಪರಿಹಾರ ದೊರೆಯಲಿದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Vastu Tips: ಮನೆಯಲ್ಲಿ ಈ ಸ್ಥಳದಲ್ಲಿ ಪುಸ್ತಕಗಳನ್ನು ಇರಿಸಿದರೆ, ಜ್ಞಾನ, ತಿಳುವಳಿಕೆ ಹೆಚ್ಚಾಗುತ್ತೆ


ಗುರುವಾರದಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನು ಮಾಡಲೇಬಾರದು:
>> ಗುರುವಾರದಂದು ತಲೆ ತೊಳೆಯುವುದು, ಕೂದಲು ಕತ್ತರಿಸುವುದು, ಕ್ಷೌರ ಮಾಡುವುದು ಮತ್ತು ಉಗುರುಗಳನ್ನು ಕತ್ತರಿಸುವುದನ್ನು ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ ಮತ್ತು ವ್ಯಕ್ತಿಯ ಪ್ರಗತಿ ನಿಲ್ಲುತ್ತದೆ ಎನ್ನಲಾಗಿದೆ.


>> ಗುರುವಾರ ಮನೆಯ ಸ್ವಚ್ಛತೆಯನ್ನು ತಪ್ಪಿಸಬೇಕು. ಪ್ರತಿ ನಿತ್ಯದ ಸ್ವಚ್ಚತೆ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲದಿದ್ದರೂ ವಿಶೇಷ ಕ್ಲೀನಿಂಗ್ ಮಾಡಬೇಡಿ. 


>> ಜ್ಯೋತಿಷಿಗಳ ಪ್ರಕಾರ, ಗುರುವಾರದಂದು ಬಟ್ಟೆ ಒಗೆಯಲು ದೋಬಿಗೆ ಬಟ್ಟೆ ನೀಡುವುದನ್ನು ತಪ್ಪಿಸಿದರೆ ಒಳ್ಳೆಯದು ಎನ್ನಲಾಗಿದೆ.


ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಜೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ