ಬೆಂಗಳೂರು : ಹೆಚ್ಚುತ್ತಿರುವ ಮಾಲಿನ್ಯ, ಬಿಗಡಾಯಿಸುತ್ತಿರುವ ವಾತಾವರಣ ಕೂದಲಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಚಳಿಗಾಲ ಬಂತೆಂದರೆ ಸಾಕು ಕೂದಲ ಸಮಸ್ಯೆಗಳು ಹೆಚ್ಚಾಗುತ್ತವೆ. ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆ ಈ ಋತುವಿನಲ್ಲಿ ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಈ ಸಮಸ್ಯೆಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ಅಡುಗೆಮನೆಯಲ್ಲಿಯೇ ಸಿಗುವ ಮಸಾಲೆ ಈ ಸಮಸ್ಯೆಗೆ ನೀಡುತ್ತದೆ ಪರಿಹಾರ. ಹೌದು, ಕೂದಲಿನ ಪೋಷಣೆಗೆ ಪ್ರಮುಖವಾಗಿ ಬೇಕಾಗುವ ಕಬ್ಬಿಣ ಮತ್ತು ಪ್ರೋಟೀನ್ ಮೆಂತ್ಯೆ ಬೀಜದಲ್ಲಿ ಹೇರಳವಾಗಿ ಕಂಡುಬರುತ್ತದೆ. 


COMMERCIAL BREAK
SCROLL TO CONTINUE READING

ಮೆಂತ್ಯವನ್ನು ಹೀಗೆ ಬಳಸಿ :
1. ಚಳಿಗಾಲದಲ್ಲಿ ತಲೆಹೊಟ್ಟಿನ ಕಾರಣ ಕೂದಲು ಡ್ರೈ ಆಗುತ್ತದೆ. ಆದರೆ ಮೆಂತ್ಯೆ ಬಳಸಿ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದಕ್ಕಾಗಿ  ಒಂದು ಹಿಡಿ ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿಡಬೇಕು. ನಂತರ, ಅದರ ನೀರನ್ನು ಫಿಲ್ಟರ್ ಮಾಡಿ. ಮುಂಜಾನೆ ಈ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ ಸಂಜೆವರೆಗೆ ಹಾಗೆಯೇ ಬಿಡಿ. ನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲಿನ ಹೊಳಪು ಮರಳಿ ಬರುತ್ತದೆ.


ಇದನ್ನೂ ಓದಿ : Winter Health Tips : ಚಳಿಗಾಲದಲ್ಲಿ ಹೆಚ್ಚಾಗುತ್ತಂತೆ ಹೃದಯಾಘಾತ : ಅಪೋಲೋ ಆಸ್ಪತ್ರೆ ವೈದ್ಯರ ಸಲಹೆ


2. ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗುತ್ತಿದ್ದರೆ, ರಾತ್ರಿಯಿಡೀ ನೆನೆಸಿದ ಮೆಂತ್ಯೆಯನ್ನು ಬೇಯಿಸಿ ಅದರಿಂದ ಪೇಸ್ಟ್ ಮಾಡಿ. ನಂತರ, ದಾಸವಾಳದ ಎಲೆಗಳು ಮತ್ತು ಹೂವುಗಳನ್ನು ಅದಕ್ಕೆ ಸೇರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.  ಹೀಗೆ ಎರಡು ವಾರಗಳ ಕಾಲ ಮಾಡಿದರೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. 


3. ಮೆಂತ್ಯೆಯನ್ನು ಸಲಾಡ್‌ ನಲ್ಲಿ ಸೇರಿಸಿ ತಿನ್ನಬಹುದು. ರಾತ್ರಿಯಿಡೀ  ನೆನೆಸಿದ ಮೆಂತ್ಯ ಬೀಜಗಳನ್ನು ಸಲಾಡ್‌ ಜೊತೆ ಸೇರಿಸಿ ತಿನ್ನಬೇಕು. ಈ  ರೀತಿ ಮೆಂತ್ಯೆಯನ್ನು ಸೇವಿಸುತ್ತಾ ಬಂದರೆ ಕೂದಲಿಗೆ ಸಿಗಬೇಕಾದ  ಪೋಷಕಾಂಶಗಳು ಕೂದಲಿಗೆ ಸಿಗುತ್ತದೆ. 


ಇದನ್ನೂ ಓದಿ : ಈ ಆಹಾರಗಳನ್ನು ಸೇವಿಸಿದರೆ ಹೆಚ್ಚಾಗುವುದು ಕಿಡ್ನಿ ಸ್ಟೋನ್ ಅಪಾಯ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.