Hair Care Tips: ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರದ ಕಾರಣದಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಇದರೊಂದಿಗೆ, ಒತ್ತಡ ಮತ್ತು ಮಲಿನ ನೀರು ಕೂಡ ಬಿಳಿ ಕೂದಲ ಸಮಸ್ಯೆಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಆದರೆ ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಈ ಸಮಸ್ಯೆಯನ್ನು ನಿವಾರಿಸಬಹುದು.  


COMMERCIAL BREAK
SCROLL TO CONTINUE READING

ನಿಮ್ಮ ಕೂದಲು ಸಮಯಕ್ಕೆ ಮುಂಚಿತವಾಗಿ ಬಿಳಿಯಾಗಲು ಪ್ರಾರಂಭಿಸುತ್ತಿದ್ದರೆ, ಬಿಳಿ ಕೂದಲನ್ನು (White Hair) ಕಿತ್ತು ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಈ ಕಾರಣದಿಂದಾಗಿ, ಬಿಳಿ ಕೂದಲು ಇನ್ನಷ್ಟು ಹೆಚ್ಚಾಗಬಹುದು. 


ಇದನ್ನೂ ಓದಿ-  How To Make Milk Conditioner: ಕೂದಲಿನ ಆರೈಕೆಗಾಗಿ ಹಾಲಿನಿಂದ ಮನೆಯಲ್ಲೇ ತಯಾರಿಸಿ ಹೇರ್ ಕಂಡಿಷನರ್


ಬಿಳಿ ಕೂದಲು ಪ್ರಾರಂಭವಾದಾಗ, ಕೆಫೀನ್ ಹೊಂದಿರುವ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿ. ಇದಲ್ಲದೆ, ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ನೀವು ನಿಮ್ಮ ಆಹಾರದಲ್ಲಿ ಹಸಿರು ಚಹಾ ಎಂದರೆ ಗ್ರೀನ್ ಟೀ (Green Tea) ಬಳಸುವುದೂ ಕೂಡ ಒಳ್ಳೆಯದು. 


ಬಿಳಿ ಕೂದಲನ್ನು ತಡೆಯಲು ಗೋರಂಟಿ ಎಂದರೆ ಮೆಹಂದಿಯನ್ನು ಬಳಸಿ. ಇದು ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಅನ್ವಯಿಸುವ ಮೂಲಕ, ನಿಮ್ಮ ಕೂದಲು ಹೊಳೆಯುತ್ತದೆ.


ಇದನ್ನೂ ಓದಿ- Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ


ಕೂದಲಿಗೆ ಬಣ್ಣ ಹಾಕುವ ಮೂಲಕ ಅವುಗಳ ನೈಸರ್ಗಿಕ ಬಣ್ಣ ಹೋಗುತ್ತದೆ. ನಿಮ್ಮ ಕೂದಲಿನ ಬಣ್ಣವನ್ನು ಆರಿಸುವಾಗ, ಅದು ತೈಲ ಆಧಾರಿತ ಬಣ್ಣವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.


ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.