Hair Care Tips: ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ! ಹಾಲಿನ ಕೆನೆಯನ್ನು ಈ ರೀತಿ ಬಳಸಿ

Hair Care Tips: ಕೂದಲಿನ ಸಮಸ್ಯೆಯನ್ನು ತೊಡೆದುಹಾಕಲು, ಕೆನೆ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸಬಹುದು.

Written by - Yashaswini V | Last Updated : Jun 24, 2021, 02:53 PM IST
  • ಬೇಸಿಗೆಯಲ್ಲಿ, ಬೆವರು ಮತ್ತು ಧೂಳು ಮತ್ತು ಮಣ್ಣಿನಿಂದಾಗಿ ಕೂದಲು ತುಂಬಾ ನಿರ್ಜೀವವಾಗುತ್ತದೆ
  • ಇದು ಕೂದಲಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ
  • ಇದರಿಂದಾಗಿ ಕೂದಲು ಉದುರುವುದು, ದುರ್ಬಲಗೊಳ್ಳುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ
Hair Care Tips: ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ! ಹಾಲಿನ ಕೆನೆಯನ್ನು ಈ ರೀತಿ ಬಳಸಿ title=
ಕೆನೆಯನ್ನು ಈ ರೀತಿ ಬಳಸಿ ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗಿಸಿ

Hair Care Tips: ಬೇಸಿಗೆಯಲ್ಲಿ, ಬೆವರು ಮತ್ತು ಧೂಳು ಮತ್ತು ಮಣ್ಣಿನಿಂದಾಗಿ ಕೂದಲು ತುಂಬಾ ನಿರ್ಜೀವವಾಗುತ್ತದೆ. ಇದು ಕೂದಲಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೂದಲು ಉದುರುವುದು, ದುರ್ಬಲಗೊಳ್ಳುವುದು ಈ ರೀತಿ ಕೂದಲಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ತೊಡೆದುಹಾಕಲು, ಕೆನೆ ಹೆಚ್ಚು ಉತ್ತಮವೆಂದು ಸಾಬೀತುಪಡಿಸಬಹುದು. ಇಂದು ನಾವು ನಿಮಗೆ ನಯವಾದ, ರೇಷ್ಮೆಯಂತಹ ಕೂದಲು  ಪಡೆಯಲು ಕೆಲವು ಕ್ರೀಮ್ ಹೇರ್ ಮಾಸ್ಕ್‌ಗಳ ಬಗ್ಗೆ ಹೇಳಲಿದ್ದೇವೆ. ಕ್ರೀಮ್ ಹೇರ್ ಮಾಸ್ಕ್ ತಯಾರಿಸುವುದು ಹೇಗೆ ಎಂದು ತಿಳಿಯೋಣ-

ಕ್ರೀಮ್ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್- ಇದನ್ನು ತಯಾರಿಸಲು, ಮಾಗಿದ ಬಾಳೆಹಣ್ಣು (Banana), 2 ಟೀ ಚಮಚ ಕೆನೆ ಮತ್ತು 1 ಟೀಸ್ಪೂನ್ ಹಾಲನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ ಕೆಲವು ಗಂಟೆಗಳ ಕಾಲ ಬಿಡಿ. ಬಳಿಕ ಶಾಂಪೂ ಮಾಡಿ. ಹೀಗೆ ಮಾಡುವುದರಿಂದ ಅದರಲ್ಲಿರುವ ಪ್ರೋಟೀನ್ ನಿಮ್ಮ ಕೂದಲನ್ನು ಮೂಲದಿಂದ ಬಲಪಡಿಸುತ್ತದೆ. ಅಲ್ಲದೆ ಇದು ಕೂದಲನ್ನು ರೇಷ್ಮೆಯನ್ನಾಗಿ ಮಾಡುತ್ತದೆ.

ಇದನ್ನೂ ಓದಿ -  Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ

ಜೇನುತುಪ್ಪ ಮತ್ತು ಕೆನೆ ಹೇರ್ ಮಾಸ್ಕ್-  ಜೇನುತುಪ್ಪ ಮತ್ತು ಕೆನೆ ಹೇರ್ ಮಾಸ್ಕ್ ತಯಾರಿಸಲು 3 ಟೀಸ್ಪೂನ್ ಕ್ರೀಮ್ ಅನ್ನು 1 ಟೀಸ್ಪೂನ್ ಜೇನುತುಪ್ಪದೊಂದಿಗೆ ಬೆರೆಸಿ ಅದರ ಪೇಸ್ಟ್ ಅನ್ನು ನಿಮ್ಮ ಕೂದಲಿನ (Hair) ಬುಡಕ್ಕೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಬೆಚ್ಚಗಿನ ನೀರಿನಿಂದ ಶಾಂಪೂ ಮಾಡಿ. ಜೇನುತುಪ್ಪವು ಕೂದಲನ್ನು ಮೃದುಗೊಳಿಸುತ್ತದೆ ಮತ್ತು ಬುಡವನ್ನು ಬಲಪಡಿಸುತ್ತದೆ.

ಇದನ್ನೂ ಓದಿ - Hair Care Tips: ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಹಾಕಿ ದಟ್ಟವಾದ ಕೂದಲು ನಿಮ್ಮದಾಗಿಸಿ

ಕ್ರೀಮ್ ಮತ್ತು ಆಲಿವ್ ಆಯಿಲ್ ಹೇರ್ ಮಾಸ್ಕ್- ಇದನ್ನು ತಯಾರಿಸಲು, 2 ಟೀ ಚಮಚ ಕೆನೆ, 2 ಟೀ ಚಮಚ ತೆಂಗಿನ ಹಾಲು ಮತ್ತು 2 ಟೀ ಚಮಚ ಆಲಿವ್ ಎಣ್ಣೆಯನ್ನು ಬೆರೆಸಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ಶಾಂಪೂ ಮಾಡಿ. ಹೀಗೆ ಮಾಡುವುದರಿಂದ ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News