Hair Fall: ಚಿಕ್ಕ ವಯಸ್ಸಿನಲ್ಲೇ ಕೂದಲುದುರಲು ಈ ಪೋಷಕಾಂಶದ ಕೊರತೆಯೇ ಪ್ರಮುಖ ಕಾರಣ
Hair Fall: ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಹಲವು ಕಾರಣಗಳಿದ್ದರೂ ಕೂಡ ಈ ಒಂದು ಪೋಷಕಾಂಶದ ಕೊರತೆ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ.
Hair Fall: ಪ್ರಸ್ತುತ ಒತ್ತಡಭರಿತ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಬದಲಾದ ಜೀವನಶೈಲಿ, ಕಳಪೆ ಆಹಾರ ಪದ್ದತಿಯೂ ಕಾರಣ. ಇವೆಲ್ಲದರ ಜೋಟ್ಗೆ ಚಿಕ್ಕ ವಯಸ್ಸಿನಲ್ಲಿ ಎಂದರೆ 20-25ನೇ ವಯಸ್ಸಿನಲ್ಲಿ ಕೂದಲು ಉದುರಲು ದೇಹದಲ್ಲಿ ನಿರ್ದಿಷ್ಟ ಪೋಷಕಾಂಶದ ಕೊರತೆಯೂ ಕಾರಣವಾಗಿರಬಹುದು.
ತಜ್ಞರ ಪ್ರಕಾರ, ದೇಹದಲ್ಲಿ ಸತುವಿನ ಕೊರತೆಯಿಂದಲೂ ಕೂಡ ತುಂಬಾ ಚಿಕ್ಕ ವಯಸ್ಸಿನಲ್ಲಿ ಕೂದಲು ಉದುರುವಿಕೆ ಸಮಸ್ಯೆ ಉಂಟಾಗಬಹುದು. ವಾಸ್ತವವಾಗಿ, ಆರೋಗ್ಯಕರ ಕೂಡಲಿಗಾಗಿ ವಿಟಮಿನ್ ಡಿ ಮತ್ತು ಕಬ್ಬಿಣಾಂಶ ಬಹಳ ಮುಖ್ಯ. ಕೂದಲಿಗೆ ಸತುವು ಕೂಡ ಅಷ್ಟೇ ಮುಖ್ಯ. ದೇಹದಲ್ಲಿ ಸತು(ಝಿಂಕ್) ಕೊರತೆಯಿದ್ದರೂ ಸಹ ತುಂಬಾ ಬೇಗ ಕೂದಲು ಉದುರುತ್ತದೆ.
ಇದನ್ನೂ ಓದಿ- ಇಂಗು ನೀರು ಯಾವುದೇ ಔಷಧಿಗಿಂತ ಕಡಿಮೆಯಲ್ಲ, ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ..!
ಒಂದೊಮ್ಮೆ ಸತುವಿನ ಕೊರತೆಯಿಂದಾಗಿ ಕೂದಲು ಉದುರುವಿಕೆ ಸಮಸ್ಯೆ ಉಂಟಾಗಿದ್ದರೆ ಸತು ಹೇರಳವಾಗಿ ಕಂಡುಬರುವ ಆಹಾರಗಳ ಸೇವನೆಯಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಅಂತಹ ಆಹಾರಗಳೆಂದರೆ...
* ಕಡಲೆಕಾಳು:
ಕಡಲೆಕಾಳಿನಲ್ಲಿ ವಿಟಮಿನ್ ಇ, ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸತು ಸಮೃದ್ಧವಾಗಿದೆ. ಹಾಗಾಗಿ, ಕಡಲೆಕಾಳಿನ ಸೇವನೆಯಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
* ದ್ವಿದಳ ಧಾನ್ಯಗಳು:
ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇರಿಸುವುದರಿಂದ ದೇಹದಲ್ಲಿ ಸತುವಿನ ಕೊರತೆ ಉಂಟಾಗುವುದಿಲ್ಲ. ಇದು ನಿಮ್ಮ ಕೂದಲು ಉದುರುವಿಕೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಹಾಗಾಗಿ, ಕೂದಲು ಉದುರುವಿಕೆ ಸಮಸ್ಯೆಯನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ತಪ್ಪದೇ ಸೇರಿಸಿ.
ಇದನ್ನೂ ಓದಿ- Walking In Winter: ಈ 8 ಅದ್ಭುತ ಪ್ರಯೋಜನಗಳಿಗಾಗಿ ಚಳಿಗಾಲದಲ್ಲಿ ನಿತ್ಯ ವಾಕಿಂಗ್ ಮಾಡಿ
* ಅಣಬೆ:
ಅಣಬೆ ಆರ್ಥಿಕವಾಗಿ ದುಬಾರಿ ಆಹಾರ. ಆದರೆ, ಇದು ಸತುವಿನ ಶ್ರೀಮಂತ ಮೂಲವಾಗಿದ್ದು ಈ ಸೂಪರ್‌ಫುಡ್‌ನಲ್ಲಿ ಪ್ರೋಟೀನ್, ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂ ಸಹ ಕಂಡುಬರುತ್ತವೆ. ನಿಯಮಿತವಾಗಿ ಅಣಬೆಯನ್ನು ಸೇವಿಸುವುದರಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.