ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ, ಕೂದಲು ಉದುರುವಿಕೆಯನ್ನು ತಡೆಗಟ್ಟಲು ಹಲವು ಉಪಾಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಇಂದಿಗೂ ಕೂದಲು ಉದುರುವ ಸಮಸ್ಯೆ ಇರುವುದು ನಿಜ. ಆದರೆ ಈ ಹೇಯರ್ ಫಾಲ್ ಅಥವಾ ಕೂದಲು ಉದುರುವಿಕೆಯ ಸಮಸ್ಯೆ ಇದ್ದಕ್ಕಿದ್ದಂತೆ ಉದ್ಭವಿಸುವುದಿಲ್ಲ. ಹಲವು ಬಾರಿ, ಆರೋಗ್ಯಕರ ಆಹಾರ ಸೇವಿಸದ ಕಾರಣ ಕೂಡ, ಕೂದಲು ವೇಗವಾಗಿ ಉದುರುತ್ತವೆ. ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸಲು, ಅವುಗಳ ನಿಯಮಿತ ಆರೈಕೆಯ ಅಗತ್ಯವಿದೆ. ಇದಕ್ಕಾಗಿ ಮೊದಲು ಕೂದಲು ಉದುರಲು ಕಾರಣ ಏನು ಎಂಬುದು ತುಂಬಾ ಮುಖ್ಯ. ಕೂದಲು ಉದುರುವಿಕೆಗೆ ಕಾರಣವನ್ನು ನೀವು ಕಂಡುಕೊಂಡರೆ, ಕೂದಲು ಉದುರುವಿಕೆಯ ಸಮಸ್ಯೆಯನ್ನು ಪರಿಹರಿಸಬಹುದು. ತೆಂಗಿನ ಎಣ್ಣೆಯನ್ನು ಅತ್ಯುತ್ತಮ ಕೂದಲು ಎಣ್ಣೆ ಎಂದು ಪರಿಗಣಿಸಲಾಗುತ್ತದೆ. ಆದರೆ ನೀವು ಎಂದಾದರೂ ನಿಮ್ಮ ಕೂದಲಿಗೆ ತೆಂಗಿನ ಹಾಲನ್ನು ಬಳಸಿದ್ದೀರಾ? ಇಲ್ಲ ಎಂದಾದಲ್ಲಿ, ಕೂದಲು ಉದುರುವಿಕೆಯನ್ನು ತಡೆಯುವ ತೆಂಗಿನ ಹಾಲಿನ ಅಂತಹ 4 ವಿಧಾನಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)


COMMERCIAL BREAK
SCROLL TO CONTINUE READING

ತೆಂಗಿನ ಹಾಲು ಮತ್ತು ಕೂದಲು ಉದುರುವಿಕೆ
>> ಸಾಮಾನ್ಯವಾಗಿ ತೆಂಗಿನ ಹಾಲನ್ನು ಆಹಾರದಲ್ಲಿ ಬಳಸಲಾಗುತ್ತದೆ. ತೆಂಗಿನ ಹಾಲು ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ದುರ್ಬಲ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡಲು ತೆಂಗಿನ ಹಾಲಿನ ಬಳಕೆ ತುಂಬಾ ಪ್ರಯೋಜನಕಾರಿಯಾಗಿದೆ. ಶುಷ್ಕತೆ, ಸೀಳು ತುದಿಗಳು ಮತ್ತು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನ ಹಾಲನ್ನು ಸಹ ಬಳಸಬಹುದು. ಕೂದಲಿಗೆ ತೆಂಗಿನ ಹಾಲನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ.

>> ನಿಮ್ಮ ಕೂದಲು ವೇಗವಾಗಿ ಉದುರುತ್ತಿದ್ದರೆ, ತೆಂಗಿನ ಹಾಲಿನಲ್ಲಿ ಸ್ವಲ್ಪ ಕರ್ಪೂರವನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು. ಈ ತೆಂಗಿನ ಹಾಲು ಮತ್ತು ಕರ್ಪೂರದ ಪೇಸ್ಟ್ ಅನ್ನು ಕೂದಲಿನ ಎಣ್ಣೆಯಂತೆ ಬೇರುಗಳಿಗೆ ಅನ್ವಯಿಸಿ. ಕೂದಲಿನ ಬೇರುಗಳಿಗೆ ಅನ್ವಯಿಸಿದ ನಂತರ, ಸ್ವಲ್ಪ ಸಮಯದವರೆಗೆ ಮಸಾಜ್ ಮಾಡಿ. 1 ರಿಂದ 2 ಗಂಟೆಗಳ ನಂತರ ನಿಮ್ಮ ಕೂದಲನ್ನು ಮೃದು ಹಾಗೂ ಉತ್ತಮ ಗುಣಮಟ್ಟದ ಶಾಂಪೂ ಬಳಸಿ ತೊಳೆದುಕೊಳ್ಳಿ.


>> ಕೂದಲಿನಲ್ಲಿ ಶುಷ್ಕತೆ ಹೆಚ್ಚಿದ್ದರೆ, ಶಾಂಪೂ ಮಾಡಿದ ಬಳಿಕ ಕಂಡೀಷನರ್ ಬದಲಿಗೆ ತೆಂಗಿನ ಹಾಲನ್ನು ಅನ್ವಯಿಸಿ. ಕೂದಲು ಶುಷ್ಕತೆ ಹೆಚ್ಚಾದಾಗ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಕೂದಲಿಗೆ ಶಾಂಪೂ ಮಾಡಿದ ನಂತರ ತೆಂಗಿನ ಹಾಲನ್ನು ಹಚ್ಚುವುದರಿಂದ ಕೂದಲು ಶುಷ್ಕತೆ ನಿವಾರಣೆಯಾಗುತ್ತದೆ ಮತ್ತು ಕೂದಲಿಗೆ ಮತ್ತೆ ಹೊಳಪು ಬರುತ್ತದೆ.


ಇದನ್ನೂ ಓದಿ-ದೀರ್ಘ ಕಾಲದವರೆಗೆ ಕೂದಲನ್ನು ಕಪ್ಪಾಗಿರಿಸಬೇಕೆ? ಇಲ್ಲಿವೆ ಐದು ಸಲಹೆಗಳು!

>> ತೆಂಗಿನ ಹಾಲನ್ನು ವಾರದಲ್ಲಿ ಕನಿಷ್ಠ ಎರಡು ದಿನ ಕೂದಲಿಗೆ ಹಚ್ಚಿ. ತೆಂಗಿನ ಹಾಲನ್ನು ಕೂದಲಿಗೆ ಹಚ್ಚಿ ಮತ್ತು ಲಘುವಾಗಿ ಮಸಾಜ್ ಮಾಡಿ. ತೆಂಗಿನ ಹಾಲನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 1 ಗಂಟೆ ಬಿಡಿ. ಬಳಿಕ ಶಾಂಪೂ ಮಾಡಿ.

>> ಕೂದಲು ಬಿಳಿ  ಬಣ್ಣಕ್ಕೆ ತಿರುಗುತ್ತಿದ್ದರೂ ತೆಂಗಿನ ಹಾಲಿನ ಬಳಕೆ ಪ್ರಯೋಜನಕಾರಿಯಾಗಿದೆ. ತೆಂಗಿನ ಹಾಲನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಬೆಳಗ್ಗೆ ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆ ಮತ್ತು ತೆಂಗಿನ ಹಾಲನ್ನು ಬೆರೆಸಿ ಕೂದಲಿಗೆ ಅನ್ವಯಿಸಿ, ನಂತರ ಸ್ವಲ್ಪ ಸಮಯ ಬಿಟ್ಟು ತೊಳೆದುಕೊಳ್ಳಿ.  ಹೀಗೆ ಮಾಡುವುದರಿಂದ ಕೂದಲು ಬಿಳಿಯಾಗುವುದು ನಿಲ್ಲುತ್ತದೆ.


ಇದನ್ನೂ ಓದಿ-ತಲೆ ಬೋಳಾಗುವಿಕೆಯನ್ನು ತಡೆಯುತ್ತೇ ಬೀಟ್ ರೂಟ್, ಈ ರೀತಿ ಬಳಕೆ ಮಾಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.