hair growth: ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲರನ್ನೂ ಕಾಡುವ ಸಮಸ್ಯೆ ಕೂದಲು ಉದುರುವುದು, ಕಪ್ಪು ಕೂದಲು ಬೆಳ್ಳಗಾಗುವುದು. ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ಶ್ಯಾಂಪೂಗಳು ಮತ್ತು ಬಣ್ಣಗಳು ಲಭ್ಯವಿದ್ದರೂ, ಅವು ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಲು ಸಾಧ್ಯವಿಲ್ಲ.


COMMERCIAL BREAK
SCROLL TO CONTINUE READING

ಇನ್ನು ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕಾಲೇಜು, ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳನ್ನು ಈ ಸಮಸ್ಯೆ ಕಾಡುತ್ತಿದೆ. ಕೆಲವು ಜನರು ಕಪ್ಪು ಬಣ್ಣವನ್ನು ಹಚ್ಚಲು ಸಾಧ್ಯವಿಲ್ಲ.. ಅದಕ್ಕಾಗಿಯೇ ಇಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಶಾಶ್ವತ ಪರಿಹಾರ ನೀಡುವ ಸಲಹೆಗಳನ್ನು ಇದೀಗ ತಿಳಿದುಕೊಳ್ಳೋಣ.. 


ಕಪ್ಪು ಎಳ್ಳು: ಕಪ್ಪು ಎಳ್ಳಿನಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ಕಪ್ಪು ಎಳ್ಳಿನ ಎಣ್ಣೆಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳಿವೆ. ಸಂಶೋಧನೆಯ ಪ್ರಕಾರ, ಈ ಎರಡು ಕೊಬ್ಬಿನಾಮ್ಲಗಳು ಕೂದಲು ಉದುರುವುದನ್ನು ತಡೆಯುತ್ತದೆ. ಎಳ್ಳು ಎಣ್ಣೆಯು ಒಣ ಕೂದಲಿನ ಸಮಸ್ಯೆಯನ್ನು ಸಹ ನಿವಾರಿಸುತ್ತದೆ  


ಇದನ್ನೂ ಓದಿ-ಆಹಾರವನ್ನು ಕೈಯಿಂದ ಸೇವಿಸದೇ, ಸ್ಪೂನ್ ನಿಂದ ಸೇವಿಸಿದರೆ ಏನಾಗುತ್ತದೆ ಗೊತ್ತಾ?


ಬೀನ್ಸ್: ಬೀನ್ಸ್ ಕಾಳು ಕೂದಲಿನ ಬೆಳವಣಿಗೆಗೆ ಅಗತ್ಯವಾದ ವಿವಿಧ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಕಪ್ಪು ಬೀನ್ಸ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.. ಇದು ಕೂದಲನ್ನು ಬಲವಾಗಿ ಇಡುವುದಲ್ಲದೇ.. ಉದುರುವುದನ್ನು ತಡೆಯುತ್ತದೆ. 


ಕಪ್ಪು ಜೀರಿಗೆ: ಕರಿಜೀರಿಗೆ ನಿಮ್ಮ ಕೂದಲು ಸದಾ ಸ್ಟ್ರಾಂಗ್ ಆಗಿರುವಂತೆ ನೋಡಿಕೊಳ್ಳುತ್ತವೆ.. ಅಲ್ಲದೇ ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಇದು ಕೂದಲು ಕಿರುಚೀಲಗಳಿಗೆ ಬಲವನ್ನು ನೀಡುತ್ತದೆ.


ಚಿಯಾ ಬೀಜಗಳು: ಚಿಯಾ ಬೀಜಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಒಂದು ಸೂಪರ್‌ಫುಡ್ ಆಗಿದೆ. ಇದು ಪ್ರೋಟೀನ್ಗಳು, ವಿಟಮಿನ್ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಂತಹ ಅನೇಕ ಸಂಯುಕ್ತಗಳನ್ನು ಒಳಗೊಂಡಿದೆ. ಚಿಯಾ ಬೀಜಗಳನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ..  


ಕಪ್ಪು ಬೆಲ್ಲ: ಬೆಲ್ಲವು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕಪ್ಪು ಬೆಲ್ಲ ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಬೆಲ್ಲವು ನೈಸರ್ಗಿಕ ಎಕ್ಸ್ಫೋಲಿಯೇಟರ್ ಆಗಿದೆ. ಇದು ಚರ್ಮಕ್ಕೂ ತುಂಬಾ ಒಳ್ಳೆಯದು.  


ಇದನ್ನೂ ಓದಿ-ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews