Hair Growth Tips: ನೀಳವಾದ ಮತ್ತು ದಟ್ಟವಾದ ಕೇಶರಾಶಿಗಾಗಿ ಕಾಫಿಯನ್ನು ಈ ಮೂರು ರೀತಿಯಲ್ಲಿ ಬಳಸಿ ನೋಡಿ!
Hair Care Tips: ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಗಟ್ಟಲು ಮತ್ತು ದಟ್ಟವಾದ ಮತ್ತು ನೀಳವಾದ ಕೇಶರಾಶಿಯನ್ನು ಪಡೆದುಕೊಳ್ಳಲು ಕಾಫಿ ತುಂಬಾ ಪ್ರಯೋಜನಕಾರಿಯಾಗಿದೆ. ಬನ್ನಿ, ಅದನ್ನು ಬಳಸಲು ಕೆಲವು ಸುಲಭ ಮಾರ್ಗಗಳನ್ನು ತಿಳಿದುಕೊಳ್ಳೋಣ (Lifestyle News In Kannada)
Coffee For Healthy Hair: ಅನೇಕ ಜನರು ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಕೆಲವರು ಒಂದು ಕಪ್ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಚಿತ್ತವನ್ನು ರಿಫ್ರೆಶ್ ಮಾಡಲು ಕಾಫಿ ಸಹಾಯ ಮಾಡುತ್ತದೆ. ಕಾಫಿ ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕಾಫಿಯನ್ನು ಸಹ ಬಳಸಬಹುದು ಎಂಬ ಸಂಗತಿ ನಮ್ಮಲ್ಲಿ ಬಹುತೇಕರಿಗೆ ತಿಳಿದಿಲ್ಲ. ಹೌದು, ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ಕೂದಲನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಕಾಫಿಯಲ್ಲಿರುವ ಕೆಫೀನ್ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಕೂದಲಿಗೆ ಕಾಫಿಯನ್ನು ಅನ್ವಯಿಸುವುದರಿಂದ ಕೂದಲು ದಟ್ಟ, ನೀಳವಾಗಿ ಬುಡದಿಂದ ಬಲವಾಗುತ್ತವೆ, ಕೂದಲು ಬೆಳೆಯಲು ನೀವು ಕಾಫಿಯನ್ನು ಹಲವು ರೀತಿಯಲ್ಲಿ ಬಳಸಬಹುದು. ಇಂದು ಈ ಲೇಖನದಲ್ಲಿ ಕೂದಲ ಬೆಳವಣಿಗೆಗೆ ಕಾಫಿಯನ್ನು ಬಳಸುವ 3 ಸುಲಭ ವಿಧಾನಗಳನ್ನು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
1. ಕಾಫಿ ಮತ್ತು ತೆಂಗಿನ ಎಣ್ಣೆ
ಕೂದಲಿನ ಬೆಳವಣಿಗೆಗೆ ಕಾಫಿಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ಅಗತ್ಯಕ್ಕೆ ತಕ್ಕಂತೆ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಕಾಫಿ ಪುಡಿಯನ್ನು ಬೆರೆಸಿ ಸರಿಯಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. ಸುಮಾರು 30 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ಸೌಮ್ಯವಾದ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ. ನೀವು ವಾರಕ್ಕೆ ಒಂದು ಅಥವಾ ಎರಡು ಬಾರಿ ಇದನ್ನು ಬಳಸಬಹುದು.
2. ಕಾಫಿ ಮತ್ತು ಅಲೋವೆರಾ
ನೀವು ಅಲೋವೆರಾದೊಂದಿಗೆ ಕಾಫಿಯನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 2 ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಕಾಫಿ ಪುಡಿಯನ್ನು ಬೆರೆಸಿ ಸರಿಯಾಗಿ ಮಿಶ್ರಣ ಮಾಡಿ. ಈಗ ಅದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಮತ್ತು ತಲೆಗೆ ಮಸಾಜ್ ಮಾಡಿ. ಸುಮಾರು 30 ನಿಮಿಷಗಳ ನಂತರ, ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಇದನ್ನು ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ, ಕೂದಲು ದಟ್ಟವಾಗಿ, ನೀಳವಾಗಿ ಹೊಸ ಹೊಳಪನ್ನು ಪಡೆದುಕೊಳ್ಳುತ್ತವೆ.
3. ಕಾಫಿಯೊಂದಿಗೆ ಕೂದಲನ್ನು ತೊಳೆಯಿರಿ
ಇದಕ್ಕಾಗಿ, ಕಪ್ಪು ಕಾಫಿ ಮಾಡಿ ಮತ್ತು ಅದನ್ನು ತಣ್ಣಗಾಗಿಸಿ. ಈಗ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ ಮತ್ತು ಕೂದಲಿನಿಂದ ನೀರನ್ನು ತೆಗೆದುಹಾಕಿ. ಈಗ ನಿಮ್ಮ ತಲೆಯ ಮೇಲೆ ಕಾಫಿ ಸುರಿಯಿರಿ ಮತ್ತು ಲಘು ಕೈಗಳಿಂದ ಮಸಾಜ್ ಮಾಡಿ. ಸುಮಾರು 20 ನಿಮಿಷಗಳ ನಂತರ ನೀರಿನಿಂದ ಕೂದಲನ್ನು ತೊಳೆಯಿರಿ. ವಾರದಲ್ಲಿ 2 ರಿಂದ 3 ಬಾರಿ ಈ ರೀತಿ ನಿಮ್ಮ ಕೂದಲಿಗೆ ಕಾಫಿಯನ್ನು ಬಳಸಬಹುದು. ಹೀಗೆ ಮಾಡುವುದರಿಂದ ಕೂದಲಿನ ಬೆಳವಣಿಗೆಗೆ ಉತ್ತಮವಾಗುತ್ತದೆ. ಇದಲ್ಲದೆ, ಕೂದಲು ಮೃದುವಾಗಿ ಮತ್ತು ಹೊಳೆಯುವಂತೆ ಕಾಣಿಸುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ