Ghee To Stop Hairfall: ಕೂದಲನ್ನು ದಟ್ಟವಾಗಿಸಲು ಮತ್ತು ಬಳಪಡಿಸಲು  ಜನರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುವುದನ್ನು ನೀವು ನೋಡಿರಬಹುದು. ಇದಕ್ಕಾಗಿ ಜನರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮತ್ತು ಹೊಸ ಎಣ್ಣೆಗಳು ಹಾಗೂ ಮನೆಮದ್ದುಗಳನ್ನು ಬಳಸಿಕೊಂಡು ತಮ್ಮ ಕೂದಲಿನ ಆರೈಕೆ ಮಾಡುತ್ತಾರೆ. ಹಿಂದಿನ ಕಾಲದಲ್ಲಿ, ಜನರು ತಮ್ಮ ಕೂದಲಿಗೆ ತುಪ್ಪವನ್ನು ಹೆಚ್ಚಾಗಿ ಬಳಸುತ್ತಿದ್ದರು (ghee on hair overnight benefits). ಏಕೆಂದರೆ ಇದು ಕೂದಲನ್ನು ದಟ್ಟವಾಗಿಸಲು ಮತ್ತು ಆರೋಗ್ಯಕರವಾಗಿಸಲು ಸಹಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಕೂದಲಿಗೆ ತುಪ್ಪ ಹಚ್ಚುವುದು ಸರಿಯೋ ಇಲ್ಲವೋ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಇರುತ್ತದೆ. ಕೂದಲಿಗೆ ತುಪ್ಪ ಅನ್ವಯಿಸಿದರೆ ಏನಾಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.(Lifestyle News In Kannada)


COMMERCIAL BREAK
SCROLL TO CONTINUE READING

ಕೂದಲಿಗೆ ತುಪ್ಪವನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳು
ತುಪ್ಪದಲ್ಲಿ ವಿಟಮಿನ್ ಎ, ಇ, ಕೆ, ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳಿವೆ, ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕೂದಲನ್ನು ಪೋಷಿಸುತ್ತದೆ ಮತ್ತು ಅವುಗಳನ್ನು ಬಳಪಡಿಸುತ್ತದೆ. ಇದಲ್ಲದೆ, ತುಪ್ಪ ತಲೆಹೊಟ್ಟು ಕಡಿಮೆ ಮಾಡಲು (ghee for hair dandruff) ಸಹಾಯ ಮಾಡುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಕೂದಲನ್ನು ದಟ್ಟವಾಗಿಸಲು ಮತ್ತು ಹೊಳೆಯುವಂತೆ ಮಾಡಲು ತುಪ್ಪವು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಕೂದಲು ಉದುರುವಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Coconut Chutney Health Benefits: ತೂಕ ಇಳಿದೇ ಸೇರಿದಂತೆ ಹೈ ಬಿಪಿ ನಿಯಂತ್ರಣಕ್ಕೆ ರಾಮಬಾಣ ಈ ಚಟ್ನಿ!


ತಲೆಗೆ ತುಪ್ಪ ಬಲಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ (How to use ghee for hair fall)
ಕೂದಲಿಗೆ ತುಪ್ಪವನ್ನು ಹಚ್ಚುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದ್ದರೂ ಕೂಡ ಅದನ್ನು ಅನ್ವಯಿಸಲು ಕೆಲ ನಿಯಮಗಳಿವೆ. ತಣ್ಣನೆಯ ತುಪ್ಪವನ್ನು ಕೂದಲಿಗೆ ಹಚ್ಚುವುದು ಹೇಗೆ ಕಷ್ಟವೋ ಹಾಗೆಯೇ ತುಪ್ಪವನ್ನು ಬಿಸಿ ಮಾಡಿ ಕೂದಲಿಗೆ ಹಚ್ಚುವುದು ಅಷ್ಟೇ ಸುಲಭವಾಗಿದೆ. ತಲೆಗೆ ತುಪ್ಪ ಹಚ್ಚಲು ಸರಿಯಾದ ಸಮಯ ರಾತ್ರಿಯ ಸಮಯ. ರಾತ್ರಿಯಲ್ಲಿ ತುಪ್ಪವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಬೆಳಗ್ಗೆ  ಅದನ್ನು ತೊಳೆಯಿರಿ. ವಾರಕ್ಕೆ 2 ರಿಂದ 3 ಬಾರಿ ಮಾತ್ರ ತುಪ್ಪವನ್ನು ಕೂದಲಿಗೆ ಹಚ್ಚಿ. ಪ್ರತಿಯೊಬ್ಬರ ಕೂದಲಿನ ಪ್ರಕಾರಗಳು ಭಿನ್ನಾಭಿನ್ನವಾಗಿರುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಇಂತಹ ಪರಿಸ್ಥಿತಿಯಲ್ಲಿ ತುಪ್ಪ ಕೆಲವರ ಕೂದಲಿಗೆ ಪ್ರಯೋಜನಕಾರಿಯಾದರೆ, ಕೆಲವರಿಗೆ ಪ್ರಯೋಜನಕಾರಿ ಅಲ್ಲ. ತುಪ್ಪದಿಂದ ನಿಮಗೆ ಅಲರ್ಜಿ ಇದ್ದರೆ ಅಥವಾ ಕೂದಲಿನ ಸಮಸ್ಯೆಯಿದ್ದರೆ, ಖಂಡಿತವಾಗಿಯೂ ಅದನ್ನು ಬಳಸಬೇಡಿ. 


ಇದನ್ನೂ ಓದಿ-HDL Increase Remedies: ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ ಈ ನಾಲ್ಕು ಉಪಾಯಗಳು!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ಞರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI