ನವದೆಹಲಿ : ಗ್ರಹಗಳು ಮತ್ತು ರಾಶಿಗಳ ಬದಲಾವಣೆಯ (planet transit in december) ವಿಷಯದಲ್ಲಿ ಡಿಸೆಂಬರ್ ತಿಂಗಳು ಬಹಳ ವಿಶೇಷವಾಗಿರುತ್ತದೆ. 2021 ರ ಈ ಕೊನೆಯ ತಿಂಗಳಲ್ಲಿ, ಅರ್ಧ ಡಜನ್‌ಗಿಂತಲೂ ಹೆಚ್ಚು ಗ್ರಹಗಳು ರಾಶಿಯನ್ನು ಬದಲಿಸುತ್ತಿವೆ. ಈ ಗ್ರಹಗಳ ಬದಲಾವಣೆಯ ಚಕ್ರವು ಡಿಸೆಂಬರ್ 5 ರಂದು ವೃಶ್ಚಿಕ ರಾಶಿಗೆ ಮಂಗಳನ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ. ಡಿಸೆಂಬರ್ 30 ಕ್ಕೆ ಧನು ರಾಶಿಗೆ ಶುಕ್ರನ ಪ್ರವೇಶದೊಂದಿಗೆ (venus transit) ಕೊನೆಗೊಳ್ಳುತ್ತದೆ.  ಈ ಮಧ್ಯೆ, ಡಿಸೆಂಬರ್ 8 ರಂದು, ಶುಕ್ರನು ಮಕರ ರಾಶಿ ಪ್ರವೇಶಿಸುತ್ತಾನೆ. ನಂತರ ಡಿಸೆಂಬರ್ 10 ರಂದು ಬುಧವು ಧನು ರಾಶಿಗೆ ಸ್ಥಾನ ಪಲ್ಲಟವಾಗಲಿದೆ. ಇನ್ನು ಡಿಸೆಂಬರ್ 16 ರಂದು, ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧ ಸೇರಿ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ.  


COMMERCIAL BREAK
SCROLL TO CONTINUE READING

5 ರಾಶಿಯವರ ಅದೃಷ್ಟವು ಬೆಳಗುತ್ತದೆ :
ಮೇಷ ರಾಶಿ : ಮೇಷ ರಾಶಿಯವರಿಗೆ (Aries) ಡಿಸೆಂಬರ್ ಭಾರೀ ಅದೃಷ್ಟವನ್ನು ತರಲಿದೆ. ಅದು ವ್ಯಾಪಾರವಾಗಲಿ ಅಥವಾ ಉದ್ಯೋಗವಾಗಲಿ, ಎಲ್ಲಾ ಕಡೆ ಅದ್ಭುತವಾದ ಪ್ರಯೋಜನ ಪಡೆಯಲಿದ್ದಾರೆ. ಹಣಕಾಸಿನ ಲಾಭವಾಗುವ ಅವಕಾಶಗಳಿವೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ದಿಢೀರ್ ಆಗಿ ಪೂರ್ಣಗೊಳ್ಳುತ್ತದೆ. ಈ ರಾಶಿಯವರ ಆಸೆಗಳು ಈಡೇರಬಹುದು. 


ಇದನ್ನೂ ಓದಿ : ಈ 4 ರಾಶಿಚಕ್ರದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ, ಬಹಳ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ


ಮಿಥುನ: 2021 ರ ಕೊನೆಯ ತಿಂಗಳು ಮಿಥುನ ರಾಶಿಯ (gemini) ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಯಾಗಲಿದೆ.  ಪ್ರತಿಯೊಂದು ಕೆಲಸದಲ್ಲೂ ಅದೃಷ್ಟದ ಬೆಂಬಲ ಸಿಗುವುದರಿಂದ ಯಶಸ್ಸು ನಿಮ್ಮದಾಗುತ್ತದೆ. ಆರ್ಥಿಕ ಲಾಭವಾಗಲಿದೆ.  ಮನೆಯ ವಾತಾವರಣ ಉತ್ತಮವಾಗಿರುತ್ತದೆ. 


ಸಿಂಹ: ಸಿಂಹ ರಾಶಿಯವರಿಗೆ (leo) ಈ ತಿಂಗಳು ಪ್ರಚಾರದ ಜೊತೆಗೆ ಗೌರವ ತಂದು ಕೊಡುತ್ತದೆ. ವಿಶೇಷವಾಗಿ ಪಾಲುದಾರಿಕೆ ಕೆಲಸದಲ್ಲಿ ತೊಡಗಿರುವ ಜನರು, ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ಕೌಟುಂಬಿಕ ಜೀವನವೂ ಸುಖಮಯವಾಗಿರುತ್ತದೆ. 


ಧನು ರಾಶಿ: ಧನು ರಾಶಿಯ (Sagittarius) ಜನರು ಡಿಸೆಂಬರ್ ತಿಂಗಳಲ್ಲಿ ತುಂಬಾ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಾರೆ. ಕಷ್ಟಪಟ್ಟು ದುಡಿದು ಫಲ ಪಡೆಯುತ್ತಾರೆ. ವ್ಯಾಪಾರ-ಉದ್ಯೋಗ ಉತ್ತಮವಾಗಿ ನಡೆಯಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಇದು ಉತ್ತಮ ಸಮಯ. 


ಇದನ್ನೂ ಓದಿ : ಈ ರಾಶಿಯವರಿಗೆ ಅತ್ಯಂತ ಕಠಿಣ ಸಮಯ ಆರಂಭ, ಸಂಕಷ್ಟ ಹೆಚ್ಚಿಸಲಿದೆ ಶನಿಯ ವಕ್ರ ದೃಷ್ಟಿ


ಕುಂಭ: ಡಿಸೆಂಬರ್ ತಿಂಗಳು ಕುಂಭ ರಾಶಿಯವರಿಗೆ (Aquarius) ಉತ್ತಮ ಪ್ರಗತಿಯನ್ನು ತರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಬಡ್ತಿ ಈ ತಿಂಗಳಲ್ಲಿ ಸಿಗಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ.  ಹಳೆಯ ಹೂಡಿಕೆಗಳು ಲಾಭದಾಯಕವಾಗಬಹುದು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.