ಈ ರಾಶಿಯವರಿಗೆ ಅತ್ಯಂತ ಕಠಿಣ ಸಮಯ ಆರಂಭ, ಸಂಕಷ್ಟ ಹೆಚ್ಚಿಸಲಿದೆ ಶನಿಯ ವಕ್ರ ದೃಷ್ಟಿ

ಶನಿಯ ಮಹಾದೆಸೆಗಳಲ್ಲಿ ಎರಡು ಹಂತಗಳಿವೆ. ಒಂದು ಸಾಡೆ ಸಾತಿ ಅಂದರೆ ಏಳೂವರೆ ಶನಿ. ಮತ್ತೊಂದು ಎರಡೂವರೆ  ವರ್ಷಗಳ ಶನಿ ದೆಸೆ. ಸಾಡೆ ಸಾತಿ ಅಂದರೆ  ಏಳುವರೆ ವರ್ಷಗಳವರೆಗೆ ಶನಿ ದೆಸೆ ಇರುತ್ತದೆ. 

Written by - Ranjitha R K | Last Updated : Nov 26, 2021, 11:57 AM IST
  • ಶನಿಯು ರಾಶಿಯನ್ನು ಬದಲಾಯಿಸಲಿದ್ದಾನೆ
  • ಕುಂಭ ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಲಿವೆ
  • ಸಾಡೇಸಾತಿಯ ಅತ್ಯಂತ ಕಠಿಣ ಹಂತವು ಪ್ರಾರಂಭವಾಗುತ್ತದೆ
ಈ ರಾಶಿಯವರಿಗೆ ಅತ್ಯಂತ ಕಠಿಣ ಸಮಯ ಆರಂಭ, ಸಂಕಷ್ಟ ಹೆಚ್ಚಿಸಲಿದೆ ಶನಿಯ ವಕ್ರ ದೃಷ್ಟಿ  title=
ಶನಿಯು ರಾಶಿಯನ್ನು ಬದಲಾಯಿಸಲಿದ್ದಾನೆ (file photo)

ನವದೆಹಲಿ :  ಜ್ಯೋತಿಷ್ಯದಲ್ಲಿ (Astrology) ಗ್ರಹಗಳು ಮತ್ತು ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ. ಈ ಗ್ರಹಗಳಲ್ಲಿ ಕೆಲವು ಗ್ರಹಗಳು ಬಹಳ ಪರಿಣಾಮಕಾರಿಯಾಗಿರುತ್ತದೆ. ವ್ಯಕ್ತಿಯ ಜೀವನದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುತ್ತದೆ.  ಈ ಪ್ರಮುಖ ಗ್ರಹಗಳಲ್ಲಿ ಶನಿ ಒಂದು. ಶನಿಯ (Saturn) ದೃಷ್ಟಿಯು ರಾಜನನ್ನು ಭಿಕ್ಷುಕ ಮತ್ತು ಭಿಕ್ಷುಕನನ್ನು ರಾಜನನ್ನಾಗಿ ಮಾಡಿ ಬಿಡುತ್ತದೆ. ಇನ್ನು ಶನಿ ದೆಸೆ ನಡೆಯುವ ರಾಶಿಗಳು ಈ ಸಂದರ್ಭದಲ್ಲಿ ಬಹಳ ಜಾಗರೂಕರಾಗಿರಬೇಕು.  

ಶನಿಯ ಎರಡನೇ ಚರಣ ಅತ್ಯಂತ ಅಪಾಯಕಾರಿ : 
ಶನಿಯ ಮಹಾದೆಸೆಗಳಲ್ಲಿ ಎರಡು ಹಂತಗಳಿವೆ. ಒಂದು ಸಾಡೆ ಸಾತಿ ಅಂದರೆ ಏಳೂವರೆ ಶನಿ. ಮತ್ತೊಂದು ಎರಡೂವರೆ  ವರ್ಷಗಳ ಶನಿ ದೆಸೆ. ಸಾಡೆ ಸಾತಿ (Saadesaati)   ಅಂದರೆ  ಏಳುವರೆ ವರ್ಷಗಳವರೆಗೆ ಶನಿ ದೆಸೆ ಇರುತ್ತದೆ.  ಇದು ಎರಡೂವರೆ ವರ್ಷಗಳ 3 ಹಂತಗಳನ್ನು ಹೊಂದಿದೆ. ಇನ್ನೊಂದು 2.5 ವರ್ಷಗಳ ಶನಿ ದೆಸೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಸಾಡೆಸಾತಿಯ ಮೊದಲ ಹಂತದಲ್ಲಿ ಶನಿಯು ಉದ್ವೇಗ, ಗೊಂದಲ ಮತ್ತು ಅಶಾಂತಿಯನ್ನು ನೀಡುತ್ತಾನೆ. ಎರಡನೇ ಹಂತದಲ್ಲಿ ಮಾನಸಿಕ ಸಮಸ್ಯೆಗಳಲ್ಲದೆ ದೈಹಿಕ ಸಮಸ್ಯೆಗಳನ್ನೂ ನೀಡುತ್ತವೆ. ಇದರೊಂದಿಗೆ ಹಣದ ನಷ್ಟವನ್ನೂ (Money loss) ಉಂಟಾಗುತ್ತದೆ. ಮೂರನೇ ಹಂತದಲ್ಲಿ, ಶನಿಯು ಕಡಿಮೆ ತೊಂದರೆ ನೀಡುತ್ತಾನೆ. ಸಾಡೇ ಸತಿಯ ಎರಡನೇ ಹಂತವು ಅತ್ಯಂತ ಕಷ್ಟಕರವಾಗಿರುತ್ತದೆ. 

ಇದನ್ನೂ ಓದಿ : Horoscope 2022: ಇವು 2022 ರ ಅತ್ಯಂತ ಅದೃಷ್ಟದ 6 ರಾಶಿಚಕ್ರ ಚಿಹ್ನೆಗಳು

ಈ ರಾಶಿಚಕ್ರ ಚಿಹ್ನೆಗೆ ತೊಂದರೆಗಳು :
ಇದೀಗ ಶನಿಯು (Shani dev)  ಮಕರ ರಾಶಿಯಲ್ಲಿದ್ದು 29ನೇ ಏಪ್ರಿಲ್ 2022 ರಂದು ಕುಂಭ ರಾಶಿಗೆ ಪ್ರವೆಶಿಸಲಿದ್ದಾನೆ. ಶನಿಯು ಕುಂಭ ರಾಶಿಗೆ  (Aquarius) ಪ್ರವೇಶಿಸಿದ ಕೂಡಲೇ ಈ ರಾಶಿಯವರಿಗೆ ಎರಡನೇ ಹಂತದ ಸಾಡೇಸಾತಿ ಶುರುವಾಗುತ್ತದೆ. ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ ಧನು ರಾಶಿಯವರ (Sagittarius) ಸಾಡೇಸಾತಿ ಮುಗಿದು ಮೀನ ರಾಶಿಯವರಿಗೆ ಸಾಡೇಸಾತಿಯ ಮೊದಲ ಘಟ್ಟ ಶುರುವಾಗುತ್ತದೆ. ಇದರ ನಂತರ, ಶನಿಯು 2025 ರಲ್ಲಿ ರಾಶಿಚಕ್ರವನ್ನು (Zodiac sign) ಬದಲಾಯಿಸುತ್ತಾನೆ. ಅಲ್ಲಿಯವರೆಗೆ ಈ ರಾಶಿಚಕ್ರ ಚಿಹ್ನೆಗಳು ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ. 

ಶನಿಯು ಕುಂಭ ರಾಶಿಯ ಅಧಿಪತಿ : 
ಸಾಡೇಸಾತಿಯ ಎರಡನೇ ಚರಣದಲ್ಲಿ ಕುಂಭ ರಾಶಿಯವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಅವರು ತುಂಬಾ ಜಾಗರೂಕರಾಗಿರಬೇಕು. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಾಗಬಹುದು. ಹಣದ ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಇಲ್ಲದಿದ್ದರೆ ನಷ್ಟ ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಶನಿ ಸಂಬಂಧಿತ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಶನಿ ಗ್ರಹವು ಕುಂಭ ರಾಶಿಯ (Aquarius) ಅಧಿಪತಿಯಾಗಿರುವುದರಿಂದ, ಈ ರಾಶಿಯ ಜನರು ಸಾಡೇಸಾತಿಯ ಸಮಯದಲ್ಲಿ ಇತರ ರಾಶಿಗಳಿಗಿಂತ ಕಡಿಮೆ ಸಮಸ್ಯೆಗಳನ್ನು ಎದುರಿಸುತ್ತಾರೆ.  

ಇದನ್ನೂ ಓದಿ : Rashi Parivartan: ಮುಂದಿನ 13 ದಿನಗಳವರೆಗೆ ತಾಯಿ ಲಕ್ಷ್ಮಿ ದಯೆ, ಈ 5 ರಾಶಿಯವರಿಗೆ ಅದೃಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News