ಪ್ರಯಾಗರಾಜ್: ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಶ್ರೀಆಂಜನೇಯನ ಜನ್ಮದಿನವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಹನುಮ ಜಯಂತಿ (Hanuman Jayanti 2022 Date) ಶನಿವಾರ, ಏಪ್ರಿಲ್ 16 ರಂದು ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ, ನಂಬಿಕೆಗಳಿಗೆ ಖ್ಯಾತ ನಗರ ಪ್ರಯಾಗ್‌ರಾಜ್‌ನಿಂದ ಒಂದು ವಿಶೇಷ ಸುದ್ದಿ ಪ್ರಕಟವಾಗಿದೆ. ಇಲ್ಲಿ ಒಬ್ಬ ಮುಸ್ಲಿಂ ಟೈಲರ್ (Muslim Tailor) ಆಂಜನೇಯನಿಗಾಗಿ ಸಫಾ ಹೊಲಿಯುತ್ತಿದ್ದಾರೆ. ಈ ಮುಸ್ಲಿಂ ಟೈಲರ್ ಬಗ್ಗೆ  ಮಾಹಿತಿ ಇಲ್ಲಿದೆ,

COMMERCIAL BREAK
SCROLL TO CONTINUE READING

11 ವರ್ಷಗಳಿಂದ ರಾಮಲೀಲಾ ಪಾತ್ರಗಳ ವೇಷಭೂಷಣಗಳನ್ನು ಹೊಲಿಯುತ್ತಿದ್ದಾರೆ
ಪ್ರಯಾಗ್‌ರಾಜ್‌ನ ಖುಲ್ದಾಬಾದ್ ನಿವಾಸಿ ಮೊಹಮ್ಮದ್ ಸರ್ತಾಜ್ ಖಾನ್ (Mohammed Sartaj Khan) ವೃತ್ತಿಯಲ್ಲಿ ಓರ್ವ ಟೈಲರ್ ಆಗಿದ್ದಾರೆ. ಸರ್ತಾಜ್ ಒಂದು ದಶಕದಿಂದ ರಾಮಲೀಲಾ ಪಾತ್ರಧಾರಿಗಳ ಪೋಷಾಕನ್ನು ಹೊಲಿಯುತ್ತಿದ್ದಾರೆ. ಇದೀಗ ಅವರು ಹನುಮಂತನಿಗೆ 'ಸಾಫಾ' (ಪೇಟ) ಹೊಲಿಯುವುದರಲ್ಲಿ ನಿರತರಾಗಿದ್ದಾರೆ. ಅವರು ಈ ಸಫಾವನ್ನು ಜರಿ ಕೆಲಸದ ಮೂಲಕ ಶಿಂಗರಿಸುತ್ತಿದ್ದಾರೆ.

ಹನುಮನಿಗೆ ಪೇಟ ತಯಾರಿ
'TOI' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಸರ್ತಾಜ್ ಖಾನ್ ಅವರ ಕೈಯಿಂದ ಹೊಲಿಯಲಾದ ಈ 70 ಇಂಚಿನ ಸಾಫಾವನ್ನು ಏಪ್ರಿಲ್ 16 ರಂದು ಹನುಮಾನ್ ಜಯಂತಿಯ ದಿನ ಬಡಾ ಹನುಮಾನ್ ದೇವಸ್ಥಾನದ ಬಜರಂಗಬಲಿ ಪ್ರತಿಮೆಯ ಮೇಲೆ ಧರಿಸಲಾಗುತ್ತಿದೆ ಎನ್ನಲಾಗಿದೆ. ಸರ್ತಾಜ್ ಅವರು 11 ವರ್ಷಗಳಿಂದ ರಾಮಲೀಲಾದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ ಮತ್ತು ವಿಶೇಷವಾಗಿ ಖುದ್ದು ತಾವೇ ಹೊಲಿದ ಬಟ್ಟೆಯಿಂದ ಪಾತ್ರಗಳನ್ನು ಅಲಂಕರಿಸುತ್ತಾರೆ. ಹನುಮ ಜಯಂತಿಯಂದು ಈ ವಿಶೇಷ ಸಾಫಾ (Saafaa) ಹೊಲಿಯುವ ಮೂಲಕ ತಮ್ಮ ಧ್ಯೇಯೋದ್ದೇಶದಲ್ಲಿ ಒಂದು ಅಡಿ ಮುಂದೆ ಇಟ್ಟಿದ್ದಾರೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ-Hanuman Jayanti 2022: ಹನುಮ ಜಯಂತಿಯ ದಿನ ಈ 5 ಕೆಲಸಗಳನ್ನು ಮಾಡಲು ಮರೆಯಬೇಡಿ, ಜೀವನದ ಎಲ್ಲಾ ಸಂಕಷ್ಟ ಪರಿಹಾರವಾಗುತ್ತದೆ

'ಧರ್ಮ ಎಂದಿಗೂ ತಡೆಗೋಡೆಯಲ್ಲ'
ಈ ಬಗ್ಗೆ ಖುದ್ದು ಮಾತನಾಡಿರುವ ಸರ್ತಾಜ್ ಖಾನ್, 'ಹನುಮನಿಗೆ 'ಸಫಾ' (ಟರ್ಬನ್) ಯೋಲಿಯುವ ಅವಕಾಶ ದೊರಕಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಅದರಲ್ಲೂ ಝರಿ ವರ್ಕ್ ಇರುವ ಪೇಟ 70 ಇಂಚು ಅಗಲ ಇರಲಿದೆ. ಈ ಪೇಟವನ್ನು ವಿಶೇಷವಾದ ಜಪಾನ್ ರೇಷ್ಮೆ ಬಟ್ಟೆಯಿಂದ ತಯಾರಿಸಲಾಗುತ್ತಿದೆ. ದೇವರಿಗೆ ‘ಸಫಾ’ ಹೊಲಿಯುವ ಸೌಭಾಗ್ಯ ಸಿಕ್ಕಿರುವುದು ನನ್ನಲ್ಲಿ ಅಪಾರ ಸಂತಸ ತಂದಿದೆ. ಇದಕ್ಕಾಗಿ ಧರ್ಮವು ಎಂದಿಗೂ ಅಡ್ಡಿಯಾಗುವುದಿಲ್ಲ ಮತ್ತು ನಾನು ಈ ಆಚರಣೆಯನ್ನು ಮುಂದುವರಿಸುತ್ತೇನೆ' ಹೇಳುತ್ತಾರೆ.


ಇದನ್ನೂ ಓದಿ-Hanuman Jayanti 2022: ಶನಿ-ರಾಹು-ಕೇತುಗಳ ಕಾಟದಿಂದ ಮುಕ್ತಿ ಪಡೆಯಲು ಈ ಉಪಾಯಗಳನ್ನು ಮಾಡಿ

ಹನುಮನಿಗೆ ಇದೇ ಮೊದಲ ಬಾರಿಗೆ ಪೇಟ ತೊಡಿಸಲಾಗುತ್ತಿದೆ
ಆಂಜನೇಯ ಸ್ವಾಮಿಗೆ ಸಾಫಾ ಅರ್ಪಿಸುವುದು ನಗರದ ಉದ್ಯಮಿ ರಾಜೇಶ್ ಚೌರಾಸಿಯಾ ಅವರ ಕಲ್ಪನೆಯಾಗಿದೆ. ಈ ಬಾರಿಯ ಹನುಮ ಜಯಂತಿಯನ್ನು ವಿಶೇಷವಾಗಿಸಲು ಕಿರೀಟದ ಬದಲು ಪೇಟವನ್ನು ದಾನ ಮಾಡಲು ಅವರು ಯೋಚಿಸಿದ್ದಾರೆ. ಆಂಜನೇಯನ ಜನ್ಮೊತ್ಸವಕ್ಕೆ ದೇವರಿಗೆ ಪೇಟವನ್ನು ಅರ್ಪಿಸುವುದು ಇದೇ ಮೊದಲು ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.