ನವದೆಹಲಿ: Happy Holi 2021 - ತಾಜಾ ಮಾಕ್ ಟೆಲ್ ಗಳು ಹೋಳಿ ಹಬ್ಬದ ಭಾಗವಾಗಿವೆ ಹಾಗೂ ಹೋಳಿ ಡ್ರಿಂಕ್ಸಗಳ ಕುರಿತು ಹೇಳುವುದಾದರೆ ತಂಪಾದ ಪಾನೀಯಗಳು ಉತ್ತಮ ಆಯ್ಕೆಯಾಗಿವೆ. ಟೀ ಹಾಗೂ ಕಾಫಿಗಳು ಸಾಮಾನ್ಯ ಪೇಯ ಆಯ್ಕೆಗಳಾಗಿವೆ. ಆದರೆ, ಇದಕ್ಕಿಂತ ಭಿನ್ನವಾಗಿ ಯಾವುದಾದರೊಂದು ಪಾನೀಯವನ್ನು ಟ್ರೈ ಮಾಡಲು ನೀವೂ ಕೂಡ ಬಯಸುತ್ತಿದ್ದರೆ. ಮಾಕ್ ಟೆಲ್ ಗಳನ್ನು ನೀವು ಟ್ರೈ ಮಾಡಬಹುದು.  ನಿಮ್ಮ ಈ ಹೋಳಿ ಹಬ್ಬದ ಉತ್ಸಾಹವನ್ನುದ್ವಿಗುಣ ಗೊಳಿಸಲು ಇಲ್ಲಿ ನಾವು ಎರಡು ಪಾನೀಯ ರೆಸಿಪಿಗಳ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ. ಒಂದು ಮ್ಯಾಂಗೋ ಲಸ್ಸಿ ಆದರೆ ಇನ್ನೊಂದು ನಿಂಬೂ ಪಾನಿ. ಮ್ಯಾಂಗೋ ಲಸ್ಸಿ ಯೋಗಾರ್ಟ್ ನಿಂದ ತಯಾರಿಸಲಾಗುವ ಪಂಜಾಬಿ ಡ್ರಿಂಕ್ ಆಗಿದೆ. ಇದನ್ನು ಸಾಂಪ್ರದಾಯಿಕ ಲಸ್ಸಿ ಯೋಗಾರ್ಟ್ ಹಾಗೂ ನೀರನ್ನು ಬೆರೆಸಿ ತಯಾರಿಸಲಾಗುತ್ತದೆ. ಇನ್ನೊಂದೆಡೆ ನಿಂಬೂ ಪಾನಿ ನಿಂಬೆ ಹಣ್ಣಿನ ರಸ ಮತ್ತು ನೀರನ್ನು ಬೆರೆಸಿ ತಯಾರಿಸಲಾಗುವ ಒಂದು ಪಾನೀಯವಾಗಿದೆ. ಉತ್ತರ ಭಾರತದಲ್ಲಿ ಇದನ್ನು ಶಿಕಂಜಿ ಎಂದೂ ಕೂಡ ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಮ್ಯಾಂಗೋ ಲಸ್ಸಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
260 ಗ್ರಾಮ್ ಹಣ್ಣು ಮಾವಿನ ಗರ.
300 ಗ್ರಾಮ್ ಗ್ರೀಕ್ ಯೋಗಾರ್ಟ್.  
5 ಚಮಚೆ ಸಕ್ಕರೆ.
15 ರಿಂದ 20 ಐಸ್ ಪೀಸ್ ಗಳು.
420 ಮಿಲಿ ಲೀಟರ್ ನೀರು. 
ತಯಾರಿಸುವ ವಿಧಾನ - ಈ ಎಲ್ಲ ಸಾಮಗ್ರಿಗಳನ್ನು ಒಂದು ಬ್ಲೆಂಡರ್ ಗೆ ಹಾಕಿ. ಲಸ್ಸಿ ರೂಪ ನೀಡಲು ಎಲ್ಲ ಸಾಮಗ್ರಿಗಳನ್ನು ಏಕಕಾಲಕ್ಕೆ ನಿರಂತರವಾಗಿ ಮಿಶ್ರಣ ಮಾಡಿ. ಅವಶ್ಯಕತೆ ಇದ್ದರೆ ಮತ್ತಷ್ಟು ಐಸ್ ಪೀಸ್ ಗಳನ್ನು ಸೇರಿಸಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ರೂಹ್ ಆಫ್ಜಾ ಹಾಗೂ ಪುದಿನಾ ಎಲೆಗಳ ಮೂಲಕ ಗಾರ್ನಿಶ್ ಮಾಡಿ ಹಾಗೂ ತಂಪಾಗಿರುವಾಗಲೇ ಸರ್ವ ಮಾಡಿ.


ಇದನ್ನೂ ಓದಿ- ಹೋಳಿ ದಿನ ಈ ತಪ್ಪನ್ನು ಮಾಡಿದರೆ ವರ್ಷ ಪೂರ್ತಿ ಹಣದ ಸಮಸ್ಯೆ ಎದುರಾಗಬಹುದು


ನಿಂಬೂ ಪಾನಿ ರೆಸಿಪಿ ಇಂತಿದೆ
160 ಮಿ.ಲೀ ಸಕ್ಕರೆಯ ಪಾಕು (ಸಕ್ಕರೆ ಪಾಕು ತಯಾರಿಸಲು 150 ಮಿ.ಲೀ ನೀರು + 130ಗ್ರಾಮ್ ಸಕ್ಕರೆ)
5 ನಿಂಬೆಹಣ್ಣುಗಳು 
15 ರಿಂದ 18 ಪುದೀನಾ ಎಳೆಗಳು. 
8-10 ಐಸ್ ಪೀಸ್ ಗಳು.
950 ಮಿ.ಲೀ ನೀರು.
ಅರ್ಧ ಚಮಚೆ ಚಾಟ್ ಮಸಾಲಾ.
ಅರ್ಧ ಚಮಚೆ ಸೈಂಧವ ಲವಣ.


ಇದನ್ನೂ ಓದಿ- ಹೋಲಿಕಾ ದಹನದ ವೇಳೆ ಯಾವ ಮರದ ಕಟ್ಟಿಗೆ ಬಳಸಿದರೆ ಶುಭ ಯಾವುದು ಅಶುಭ ?


ನಿಂಬೂ ಪಾನಿ ತಯಾರಿಸುವ ವಿಧಾನ
ಎಲ್ಲಕ್ಕಿಂತ ಮೊದಲು ನೀರು ಮತ್ತು ಸಕ್ಕರೆಯನ್ನು ಏಕಕಾಲಕ್ಕೆ ಕುದಿಸಿ ಸಕ್ಕರೆಯ ಪಾಕು ತಯಾರಿಸಿಕೊಳ್ಳಿ. ತಯಾರಾದ ಪಾಕನ್ನು ತಂಪಾಗಲು ಬಿಡಿ. ಶೀಘ್ರ ತಂಪಾಗಲು ಕೆಲ ಐಸ್ ಪೀಸ್ ಗಳನ್ನು ಬೆರೆಸಿ. ಈಗ ದೊಡ್ಡ ಗಾತ್ರದ ಪಾತ್ರೆಯೊಂದನ್ನು ತೆಗೆದುಕೊಳ್ಳಿ. ಅದರಲ್ಲಿ ನಿಂಬೆಹಣ್ಣಿನ ರಸ, ಚಾಟ್ ಮಸಾಲಾ, ಸೈಂಧವ ಲವಣ, ಪುದೀನಾ ಎಲೆಗಳು, ಐಸ್ ಪೀಸ್ ಗಳು , ನೀರು ಹಾಗೂ ತಂಪಾದ ಸಕ್ಕರೆಯ ಪಾಕನ್ನು ಬೆರೆಸಿ. ಎಲ್ಲ ಸಾಮಗ್ರಿಗಳನ್ನು ಒಂದು ದೊಡ್ಡ ಗಾತ್ರದ ಚಮಚೆಯ ಸಹಾಯದಿಂದ ಮಿಕ್ಸ್ ಮಾಡಿ. ಬಳಿಕ ಈ ತಂಪಾದ ರೆಸಿಪಿಯನ್ನು ಗ್ಲಾಸ್ ಗೆ ಹಾಕಿ ಸರ್ವ ಮಾಡಿ.


ಇದನ್ನೂ ಓದಿ- Holi-2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ 'ಧ್ರುವಯೋಗ', ಕನ್ಯಾರಾಶಿಯಲ್ಲಿ ಚಂದ್ರ ಗೋಚರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.