ಹೋಲಿಕಾ ದಹನದ ವೇಳೆ ಯಾವ ಮರದ ಕಟ್ಟಿಗೆ ಬಳಸಿದರೆ ಶುಭ ಯಾವುದು ಅಶುಭ ?

ಧರ್ಮ ಗ್ರಂಥಗಳ ಪ್ರಕಾರ, ಪ್ರತಿಯೊಂದು ಮರವು ಒಂದಲ್ಲ ಒಂದು ದೇವ ದೇವತೆಯ ವಾಸ ಸ್ಥಾನ ಎಂಬ ನಂಬಿಕೆಯಿದೆ. ಅಶ್ವಥ ಮರ, ಶಮಿ ವೃಕ್ಷ, ಮಾವಿನ ಮರ, ಆಮ್ಲಾ ಮರ, ಬೇವಿನ ಮರ, ಬಾಳೆ ಗಿಡ, ಅಶೋಕ ಮರ, ಬಿಲ್ವ ಪತ್ರೆ ಇವೆಲ್ಲವನ್ನೂ ಪೂಜಿಸಲಾಗುತ್ತದೆ.

Written by - Ranjitha R K | Last Updated : Mar 28, 2021, 02:30 PM IST
  • ಹೋಲಿಕಾ ದಹನದಲ್ಲಿ ಯಾವುದೇ ಹಸಿರು ಮರವನ್ನು ತಪ್ಪಿಯೂ ಸುಡಬೇಡಿ
  • ಧರ್ಮಗ್ರಂಥದ ಪ್ರಕಾರ ಪ್ರತಿಯೊಂದು ಮರದಲ್ಲೂ ಯಾವುದಾದರೊಂದು ದೇವತೆಯ ವಾಸವಿರುತ್ತದೆ
  • ಹೋಲಿಕಾ ದಹನದ ವೇಳೆ ಹಸುವಿನ ಸಗಣಿಗಳಿಂದ ಮಾಡಿದ ಭರಣಿಯನ್ನು ಬಳಸಿ
ಹೋಲಿಕಾ ದಹನದ ವೇಳೆ ಯಾವ ಮರದ ಕಟ್ಟಿಗೆ ಬಳಸಿದರೆ ಶುಭ ಯಾವುದು ಅಶುಭ ? title=
ಹೋಲಿಕಾ ದಹನದಲ್ಲಿ ಯಾವುದೇ ಹಸಿರು ಮರವನ್ನು ತಪ್ಪಿಯೂ ಸುಡಬೇಡಿ (file photo)

ನವದೆಹಲಿ : ಹೋಳಿ  (Holi) ಹಬ್ಬದ ಹಿಂದಿನ ದಿನ ಹೋಲಿಕಾ ದಹನ ಮಾಡಲಾಗುತ್ತದೆ. ಹೋಲಿಕಾ ದಹನಕ್ಕಾಗಿ ಜನರು ವಾರಗಳಿಂದಲೇ ಕಟ್ಟಿಗೆಗಳನ್ನು ಸಂಗ್ರಹಿಸಲು ಶುರು ಮಾಡುತ್ತಾರೆ.  ಆದರೆ ಹೆಚ್ಚಿನವರಿಗೆ ಹೋಲಿಕಾ ದಹನದಲ್ಲಿ (Holika dahan) ಯಾವ ಮರದ ಕಟ್ಟಿಗೆಯನ್ನು ಬಳಸಬೇಕು ಎನ್ನುವುದು ತಿಳಿದಿರುವುದಿಲ್ಲ.  ಹೋಲಿಕಾ ದಹನದ ವೇಳೆ ಯಾವ ಮರದ ಕಟ್ಟಿಗೆಯನ್ನು ಬಳಸಬೇಕು ಯಾವ ಮರದ ಕಟ್ಟಿಗೆಯನ್ನು ಬಳಸಬಾರದು ಎನ್ನುವುದರ ಮಾಹಿತಿ ಇಲ್ಲಿದೆ. 

ಹೋಲಿಕಾ ದಹನದ ವೇಳೆ ತಪ್ಪಿಯೂ ಈ ಮರಗಳ ಕಟ್ಟಿಗೆ ಬಳಸಬೇಡಿ : 
ಧರ್ಮ ಗ್ರಂಥಗಳ ಪ್ರಕಾರ, ಪ್ರತಿಯೊಂದು ಮರವು ಒಂದಲ್ಲ ಒಂದು ದೇವ ದೇವತೆಯ ವಾಸ ಸ್ಥಾನ ಎಂಬ ನಂಬಿಕೆಯಿದೆ. ಅಶ್ವಥ ಮರ (Peepal tree) , ಶಮಿ ವೃಕ್ಷ, ಮಾವಿನ ಮರ, ಆಮ್ಲಾ ಮರ, ಬೇವಿನ ಮರ, ಬಾಳೆ ಗಿಡ, ಅಶೋಕ ಮರ, ಬಿಲ್ವ ಪತ್ರೆ (Bilva patra) ಇವೆಲ್ಲವನ್ನೂ ಪೂಜಿಸಲಾಗುತ್ತದೆ. ಆದ್ದರಿಂದ, ಹೋಲಿಕಾ ದಹನದ (Holika dahan) ಸಂದರ್ಭದಲ್ಲಿ, ಈ ಮರದ ಕಟ್ಟಿಗೆಗಳನ್ನು ಅಪ್ಪಿ ತಪ್ಪಿಯೂ ಸುಡಬಾರದು. ಒಂದು ವೇಳೆ ಹಾಗೇನಾದರು ಸುಟ್ಟರೆ ಅದು  ಕೆಟ್ಟ ಫಲವನ್ನು ನೀಡುತ್ತದೆ ಎನ್ನಲಾಗುತ್ತದೆ.   

ಇದನ್ನೂ ಓದಿ Holi-2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ 'ಧ್ರುವಯೋಗ', ಕನ್ಯಾರಾಶಿಯಲ್ಲಿ ಚಂದ್ರ ಗೋಚರ

ಈ ಮರಗಳ ಕಟ್ಟಿಗೆಯನ್ನು  ಬಳಸಬಹುದು :
ಹೋಲಿಕಾ ದಹನದ  ಸಂದರ್ಭದಲ್ಲಿ, ಆಯ್ದ ಕೆಲವು ಮರಗಳ ಕಟ್ಟಿಗೆಯನ್ನು ಮಾತ್ರ ಸುಡಬೇಕು. ಅವು ಯಾವುವೆಂದರೆ  ಔಡಲ ಮರ ಅಥವ  ಕ್ಯಾಸ್ಟರ್ (caster) ಮತ್ತು ಹತ್ತಿ ಮರದ ಕಟ್ಟಿಗೆ. ಈ ಸಮಯದಲ್ಲಿ   ಔಡಲ ಮತ್ತು  ಹತ್ತಿ  ಎರಡು ಮರಗಳ ಎಲೆಗಳು ಉದುರುತ್ತವೆ. ಹಾಗಾಗಿ  ಅವುಗಳನ್ನು ಸುಡದಿದ್ದರೆ, ಅವುಗಳಲ್ಲಿ ಕೀಟಗಳಾಗುತ್ತವೆ. ಈ ಕಾರಣದಿಂದ ಈ ಎರಡೂ ಮರಗಳ ಕಟ್ಟಿಗೆಯನ್ನು ಹೋಲಿಕಾ ದಹನದಲ್ಲಿ ಬಳಸಬಹುದು.

ಹಸುವಿನ ಸಗಣಿಯಿಂದ ತಯಾರಿಸಿದ ಭರಣಿ :   
ಹೋಲಿಕಾ ದಹನದ ವೇಳೆ,  ಗೋವಿನ ಸಗಣಿಯಿಂದ (Cow dung) ತಯಾರಿಸಿದ ಭರಣಿಯನ್ನು ಬಳಸಿದರೆ ಶುಭ ಫಲ ಸಿಗುತ್ತದೆ ಎನ್ನುತ್ತಾರೆ.  ಹೋಲಿಕಾ ಬೆಂಕಿಯಲ್ಲಿ ಕಳೆಗಳನ್ನು ಸಹ ಸುಡಬೇಕು. ಹೋಲಿಕಾ ದಹನ ದುಷ್ಟತೆಯ ಅಂತ್ಯವನ್ನು ಪ್ರತಿನಿಧಿಸುತ್ತದೆ. 

ಇದನ್ನೂ ಓದಿ : ಹೋಳಿ ದಿನ ಈ ತಪ್ಪನ್ನು ಮಾಡಿದರೆ ವರ್ಷ ಪೂರ್ತಿ ಹಣದ ಸಮಸ್ಯೆ ಎದುರಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News