ಬೆಂಗಳೂರು :  ಬಣ್ಣಗಳ ಹಬ್ಬ ಹೋಳಿ ಬಂದೆ ಬಿಟ್ಟಿದೆ (Holi 2022). ಈ ಹಬ್ಬಕಾಗಿ ಜನ  ವರ್ಷ ಪೂರ್ತಿ ಕಾಯುತ್ತಿರುತ್ತಾರೆ. ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರವೂ ಈ ಹಬ್ಬಕ್ಕೆ ಬಹಳ ಮಹತ್ವವಿದೆ. ಈ ದಿನ, ನಿಮ್ಮ ರಾಶಿಚಕ್ರದ ಚಿಹ್ನೆಯ (Zodiac Sign)ಪ್ರಕಾರ ಬಟ್ಟೆಗಳನ್ನು ಆರಿಸಿದರೆ, ಜೀವನದಲ್ಲಿ ಹೊಸ ಯಶಸ್ಸನ್ನು ಕಾಣಬಹುದು. ಹೋಳಿಯ ದಿನ ರಾಶಿಗನುಗುಣವಾಗಿ  ಅದೃಷ್ಟದ ಬಣ್ಣದ ಬಟ್ಟೆಗಳನ್ನು ಧರಿಸಿದರೆ , ಧನಾತ್ಮಕ ಫಲಿತಾಂಶಗಳು ಬರಬಹುದು. 


COMMERCIAL BREAK
SCROLL TO CONTINUE READING

ಹೋಳಿ ದಿನದಂದು ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆಗಳನ್ನು ಧರಿಸಿ :
ಮೇಷ ರಾಶಿ (Aries)  : ಈ ರಾಶಿಯ ಜನರು ಹೋಳಿಯಲ್ಲಿ ಕೆಂಪು ಬಟ್ಟೆಯನ್ನು ಧರಿಸಬೇಕು. ಈ ಬಣ್ಣವನ್ನು ಪ್ರೀತಿ ಮತ್ತು ಸತ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ : Holi 2022 : ಕಾಮನ ಸುಡುವ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!


ವೃಷಭ ರಾಶಿ (Taurus): ಈ ರಾಶಿಯ ಜನರು ಹೋಳಿಯಲ್ಲಿ (Holi 2022) ಬಿಳಿ ಬಟ್ಟೆಯನ್ನು ಧರಿಸಬೇಕು. ಈ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.


ಮಿಥುನ ರಾಶಿ (Gemini) : ಈ ರಾಶಿಯ ಜನರು ಹೋಳಿಯಲ್ಲಿ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ಬಣ್ಣವನ್ನು ಪ್ರಕೃತಿಯ ಸೂಚಕವೆಂದು ಪರಿಗಣಿಸಲಾಗುತ್ತದೆ.


ಕರ್ಕಾಟಕ (Cancer): ಈ ರಾಶಿಯ ಜನರು ಹೋಳಿಯಲ್ಲಿ ಬಿಳಿ ಬಟ್ಟೆಯನ್ನು ಧರಿಸಬೇಕು. ಈ ಬಣ್ಣವನ್ನು ನಿರ್ಭಯತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ : Holi 2022: ಝಾರ್ಖಂಡ್ ನ ಈ ಸಮುದಾಯದಲ್ಲಿ ಹುಡುಗಿಯರ ಮೇಲೆ ಬಣ್ಣ ಹಾಕಿದರೆ ಏನಾಗುತ್ತದೆ ಗೊತ್ತಾ?


ಸಿಂಹ (Leo): ಈ ರಾಶಿಯ ಜನರು ಹೋಳಿಯಲ್ಲಿ ಕೆಂಪು, ಗುಲಾಬಿ, ಬಿಳಿ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.


ಕನ್ಯಾ ರಾಶಿ (Virgo): ಈ ರಾಶಿಯ ಜನರು ಹೋಳಿಯಲ್ಲಿ ಹಸಿರು, ನೀಲಿ ಮತ್ತು ಕಂದು ಬಣ್ಣದ ಬಟ್ಟೆಗಳನ್ನು ಧರಿಸಬೇಕು.


ತುಲಾ (Libra): ಈ ರಾಶಿಯ ಜನರು ಹೋಳಿಯಲ್ಲಿ ಬಿಳಿ, ಗುಲಾಬಿ ಮತ್ತು ತಿಳಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.


ವೃಶ್ಚಿಕ ರಾಶಿ (Scorpio): ಈ ರಾಶಿಯ ಜನರು ಹೋಳಿಯಲ್ಲಿ ಕೆಂಪು, ಕಿತ್ತಳೆ, ಕೇಸರಿ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.


ಇದನ್ನೂ ಓದಿ : Numerology: ಯಾವ ರಾಶಿಯ ಜನರಿಗೆ ಯಾವುದು ಅದೃಷ್ಟ ಸಂಖ್ಯೆ..?


ಧನು ರಾಶಿ (Sagitarius): ಈ ರಾಶಿಯ ಜನರು ಹೋಳಿಯಲ್ಲಿ ಹಳದಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು.


ಮಕರ ರಾಶಿ (Capricorn): ಈ ರಾಶಿಯ ಜನರು ಹೋಳಿಯಲ್ಲಿ ನೀಲಿ ಅಥವಾ ಕಪ್ಪು ಬಟ್ಟೆಗಳನ್ನು ಧರಿಸಬೇಕು.


ಕುಂಭ (Aquarius):ಈ ರಾಶಿಯ ಜನರು ಹೋಳಿಯಲ್ಲಿ ನೇರಳೆ, ಕಪ್ಪು, ನೀಲಿ ಅಥವಾ ಹಸಿರು ಬಟ್ಟೆಗಳನ್ನು ಧರಿಸಬೇಕು.


ಮೀನ (pisces): ಈ ರಾಶಿಯ ಜನರು ಹೋಳಿಯಲ್ಲಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.


ಗಮನಿಸಿ : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು  ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.