Happy Valentine's Day 2023: ಪ್ರೇಮಿಗಳ ದಿನ ಕೆಲವರ ಪಾಲಿಗೆ ಅರ್ಥರಹಿತ ದಿನವಾದರೆ ಇನ್ನು ಕೆಲವರಿಗೆ ಹಬ್ಬ.  ಕೆಲವರ ಪ್ರಕಾರ ಪ್ರೀತಿಸಲು ಒಂದು ದಿನ ಅಥವಾ ವಾರದ ಅಗತ್ಯವಿಲ್ಲ. ಪ್ರತಿ ದಿನವೂ  ಪ್ರೀತಿಯ ದಿನವೇ. ಆದರೆ ಇನ್ನು ಕೆಲವರಿಗೆ ಈ ವಿಶೇಷ ದಿನದಂದು ತಮ್ಮ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸುವುದರಲ್ಲಿ ಒಂದು ರೀತಿಯ ಖುಷಿ ಇದೆ.  ಪ್ರತಿಯೊಂದು ಸಂಭ್ರಮಾಚರಣೆಗೂ ಒಂದು ದಿನ ಇರುವಾಗ ಪ್ರೀತಿಗಾಗಿ - ಪ್ರೇಮಕ್ಕಾಗಿಯೂ ಒಂದು ದಿನವಿದ್ದರೆ ಏನು ತಪ್ಪು.  ಪ್ರಪಂಚದಾದ್ಯಂತ  ಇಂದು ಅಂದರೆ ಫೆಬ್ರವರಿ 14 ಅನ್ನು ಪ್ರೀತಿಯ ಹಬ್ಬವಾಗಿ ಆಚರಿಸುತ್ತಾರೆ. ಈ ಪ್ರೀತಿಯ ಹಬ್ಬ ಒಂದು ವಾರದಿಂದ ನಡೆದುಕೊಂಡು ಬರುತ್ತಿದೆ. 


COMMERCIAL BREAK
SCROLL TO CONTINUE READING

ಮನದ ಮಾತು ಹೇಳಲು ಇದೆ ಸಾವಿರ ದಾರಿ :


ಜೀವನದ ಏರಿಳಿತದಲ್ಲಿ ಜೊತೆಯಾದ ಸಂಗಾತಿಗೆ 
ಪ್ರೇಮಿಗಳ ದಿನದ ಶುಭಾಶಯಗಳು


ಜೀವನ  ನೌಕೆಯನ್ನು ಒಲವಿನ ದಡದತ್ತ ಸಾಗಿಸುವ ನಾವಿಕನಿಗೆ 
ಪ್ರೇಮಿಗಳ ದಿನದ ಶುಭಾಶಯಗಳು


ಜೀವನ ತುಂಬ ಪ್ರೀತಿ ಹರಡಿ
ಪ್ರೇಮ ಲೋಕ ಅರಳಿಸಿದ ಪ್ರೇಮಿಗೆ 
ಈ ದಿನದ ಶುಭಾಶಯಗಳು 


ಇದನ್ನೂ ಓದಿ :  ಪ್ರೀತಿ ಎಂದರೇನು ಎಂದು ಈಗ ಅರಿತೆನು...


ಈ ಹೃದಯ ನನ್ನದೇ  ಆದರೆ ಬಡಿತ ನಿನ್ನದು
ಈ ಮನಸ್ಸು ನನ್ನದೇ  ಆದರೆ ಯೋಚನೆ ನಿನ್ನದು
ಈ ಜೀವ ನನ್ನದೇ ಆದರೆ ಆತ್ಮ ನಿನ್ನದು 
ನನ್ನೊಳಗೆ ಬೆರೆತು ಹೋದ ನನ್ನೊಲವಿಗೆ 
ನಮ್ಮ ದಿನದ ಶುಭಾಶಯಗಳು  


ನಿನ್ನ ಮೊದಲ ಭೇಟಿ ನನ್ನ ಜೀವನದಲ್ಲಿ ವಸಂತದ ಆಗಮನ 
ಪ್ರತಿ ಕನ್ನಡಿಯಲ್ಲಿಯೂ ಕಾಣುವುದು ನಿನ್ನದೇ ಬಿಂಬ 
ಪ್ರೀತಿ ರಾತ್ರಿ ನಿದ್ದೆ ಕಸಿಯುತ್ತದೆಯಂತೆ  
ಆದರೆ ನನ್ನ ನಿದ್ದೆಯಲ್ಲಿಯೂ ನಿನ್ನದೇ ಪ್ರೇಮಲೋಕ 
ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು


ನಮ್ಮಿಬ್ಬರ ಸಂಬಂಧ ಹಳೆಯದು, ಆದರೆ ಪ್ರೀತಿ ಕ್ಷಣಕ್ಷಣಕ್ಕೂ ಹೊಸತು  
ನನ್ನೊಂದಿಗೆ ನೀ ಇರಬೇಕು, ನಿನ್ನೊಂದಿಗೆ ನಾನು ನಗಬೇಕು.
ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು


ಇದನ್ನೂ ಓದಿ : Valentine’s Day Wishes: ವ್ಯಾಲೆಂಟೈನ್ಸ್ ಡೇ ದಿನ ನಿಮ್ಮ ಸಂಗಾತಿಗೆ ಹೀಗೆ ವಿಶ್ ಮಾಡಿ: ‘ಮನದ ಪ್ರೀತಿಗೆ ಇಂದೇ ಅರ್ಥ ನೀಡಿ’


ನೀನೆಂದರೆ ನನಗ್ಯಾಕೆ ಇಷ್ಟು ಇಷ್ಟ ! ಗೊತ್ತಿಲ್ಲ
ಕೊನೆಯ ಉಸಿರಿರುವವರೆಗೂ  ನಿನ್ನ ಮೇಲಿನ ಪ್ರೀತಿ ಕಮ್ಮಿ ಆಗಲ್ಲ 
ಪ್ರೇಮಿಗಳ ದಿನದ ಶುಭಾಶಯಗಳು



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.