ಹವಳದ ರತ್ನ ಧರಿಸುವುದರ ಪ್ರಯೋಜನಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರತ್ನಗಳಿಗೂ ಮಾನವನ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿಯೊಂದು ರತ್ನವು ಕೆಲವು ಗ್ರಹಗಳಿಗೆ  ಸಂಬಂಧಿಸಿವೆ. ರತ್ನ ಶಾಸ್ತ್ರದಲ್ಲಿ 12 ರತ್ನಗಳು ಮತ್ತು ಅವುಗಳ ಉಪರತ್ನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಗ್ರಹವು ದುರ್ಬಲ ಅಥವಾ ಅಶುಭ ಸ್ಥಾನದಲ್ಲಿದ್ದರೆ, ಅದಕ್ಕೆ ಅನುಗುಣವಾಗಿ ರತ್ನಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಅದೇ ರೀತಿ ಯಾರೊಬ್ಬರ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲ ಸ್ಥಾನದಲ್ಲಿದ್ದರೆ, ಹವಳವನ್ನು ಧರಿಸಲು ಸೂಚಿಸಲಾಗುತ್ತದೆ. ಹವಳದ ರತ್ನವು ಕೆಂಪು, ಸಿಂಧೂರ, ಓಚರ್, ಕಪ್ಪು ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ.


COMMERCIAL BREAK
SCROLL TO CONTINUE READING

ಮಂಗಳ ದೋಷ ನಿವಾರಣೆಗೆ ಹವಳ:
ಯಾವುದೇ ಒಬ್ಬ ವ್ಯಕ್ತಿ ಜಾತಕದಲ್ಲಿ ಮಂಗಳ ದೋಷವನ್ನು ಹೊಂದಿದ್ದರೆ, ಹವಳ ಧಾರಣೆಯಿಂದ ಈ ದೋಷವನ್ನು ಪರಿಹರಿಸಬಹುದು ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಯಾರೊಬ್ಬರ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲ ಸ್ಥಾನದಲ್ಲಿದ್ದರೆ, ಅವರು  ಸಹ ಹವಳದ ರತ್ನವನ್ನು ಧರಿಸಬೇಕು. ಇದನ್ನು ಧರಿಸುವುದರಿಂದ ಮಂಗಳ ಗ್ರಹಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ- Budh Gochar: ಇಂದಿನಿಂದ 24 ದಿನಗಳವರೆಗೆ ಕೆಲವು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ


ಹವಳ ಒಂದು ಅದ್ಭುತ ರತ್ನ:
ಹವಳದ ರತ್ನವು ವಿಶೇಷ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಈ ರತ್ನವನ್ನು ಧರಿಸುವುದರಿಂದ, ಮಂಗಳ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ವ್ಯಕ್ತಿಯು ಪರಿಹಾರ ಪಡೆಯುತ್ತಾನೆ. ಹವಳವನ್ನು ಬಹಳ ಅದ್ಭುತವಾದ ರತ್ನವೆಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದು ಅದೃಷ್ಟವನ್ನು ತರುತ್ತದೆ ಮತ್ತು ವ್ಯಕ್ತಿಯು ಮಂಗಳಕರ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ ಎಂದು ಹೇಳಲಾಗುತ್ತದೆ. 


ಆರೋಗ್ಯಕ್ಕೆ ಪ್ರಯೋಜನಕಾರಿ:
ಹವಳದ ರತ್ನವನ್ನು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅದ್ಭುತವಾದ ರತ್ನವೆಂದು ಪರಿಗಣಿಸಲಾಗಿದೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅದೇ ಸಮಯದಲ್ಲಿ, ಇದು ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ ಎನ್ನಲಾಗುವುದು.


ಇದನ್ನೂ ಓದಿ- ತುಲಾ ರಾಶಿಯಲ್ಲಿ ಬುಧ ಸಂಚಾರದಿಂದ ಈ ರಾಶಿಯವರಿಗೆ ಕುಬೇರನ ನಿಧಿ ಪ್ರಾಪ್ತಿ


ಈ ರಾಶಿಯವರು ಹವಳ ಧರಿಸುವುದು ತುಂಬಾ ಶುಭ:
ಮಂಗಳ ಗ್ರಹವನ್ನು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದ ಜನರು ಹವಳವನ್ನು ಧರಿಸುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಚಿನ್ನ, ಬೆಳ್ಳಿ ಅಥವಾ ತಾಮ್ರದ ಉಂಗುರದಲ್ಲಿ ಹವಳವನ್ನು ಧರಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಅದನ್ನು ಬಲಗೈಯ ಉಂಗುರದ ಬೆರಳಿನಲ್ಲಿ ಧರಿಸುವುದು ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.