Budh Rashi Parivartan 2022: ಇಂದು ಅಕ್ಟೋಬರ್ 26 ಬುಧವಾರದಂದು ಬುಧ ಗ್ರಹವು ಕನ್ಯಾರಾಶಿಯನ್ನು ತೊರೆದು ತುಲಾ ರಾಶಿಯನ್ನು ಪ್ರವೇಶಿಸುತ್ತಿದೆ. ಸಂಪತ್ತು, ಬುದ್ಧಿವಂತಿಕೆ, ವ್ಯವಹಾರ, ತರ್ಕಗಳ ಅಂಶವಾದ ಬುಧವು ನವೆಂಬರ್ 19, 2022 ರವರೆಗೆ ತುಲಾ ರಾಶಿಯಲ್ಲಿರುತ್ತಾನೆ. ಬುಧ ಗ್ರಹದ ಈ ರಾಶಿಚಕ್ರ ಬದಲಾವಣೆಯು ತುಲಾ ರಾಶಿಯಲ್ಲಿ 4 ಗ್ರಹಗಳ ಸಂಯೋಜನೆಯನ್ನು ಉಂಟು ಮಾಡುತ್ತಿದೆ. ತುಲಾ ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಕೇತು ಈಗಾಗಲೇ ಇದ್ದಾರೆ. ಈ ರೀತಿಯಾಗಿ, ತುಲಾ ರಾಶಿಯಲ್ಲಿ ಈ 4 ಪ್ರಮುಖ ಗ್ರಹಗಳ ಉಪಸ್ಥಿತಿಯು ಕೆಲವು ರಾಶಿಯವರಿಗೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ.
ತುಲಾ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ ಮತ್ತು ಕೇತು ಗ್ರಹಗಳ ಸಂಯೋಜನೆಯು 4 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವೆಂದು ಸಾಬೀತುಪಡಿಸುತ್ತದೆ. ಆ ರಾಶಿಗಳು ಯಾವುವು ತಿಳಿಯೋಣ...
ಮಿಥುನ ರಾಶಿ: ತುಲಾ ರಾಶಿಯಲ್ಲಿ ಬುಧ ಸಂಕ್ರಮಣವು ಮಿಥುನ ರಾಶಿಯವರಿಗೆ ಶುಭ ಫಲ ನೀಡಲಿದೆ. ಅವರು ವೃತ್ತಿಜೀವನದಲ್ಲಿ ಪ್ರಯೋಜನ ಪಡೆಯುತ್ತಾರೆ. ಆದಾಯ ಹೆಚ್ಚಾಗಬಹುದು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಏಕಾಗ್ರತೆ ಹೆಚ್ಚಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ನಿಮ್ಮ ಮಾತಿನ ಆಧಾರದ ಮೇಲೆ ಕೆಲಸ ನಡೆಯಲಿದೆ.
ಇದನ್ನೂ ಓದಿ- ತುಲಾ ರಾಶಿಯಲ್ಲಿ ಬುಧ ಸಂಚಾರದಿಂದ ಈ ರಾಶಿಯವರಿಗೆ ಕುಬೇರನ ನಿಧಿ ಪ್ರಾಪ್ತಿ
ಕರ್ಕಾಟಕ ರಾಶಿ: ಬುಧ ಸಂಕ್ರಮಣವು ಕರ್ಕ ರಾಶಿಯವರ ಜೀವನದಲ್ಲಿ ಕೌಟುಂಬಿಕ ಶಾಂತಿಯನ್ನು ತರುತ್ತದೆ. ಬುಧನ ರಾಶಿ ಪರಿವರ್ತನೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ಹಣದ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಉದ್ಯೋಗಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ದೊಡ್ಡ ಆರ್ಡರ್ ದೊರೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವವರಿಗೂ ಉತ್ತಮ ಸಮಯ.
ಸಿಂಹ ರಾಶಿ: ಬುಧ ಸಂಕ್ರಮಣವು ಸಿಂಹ ರಾಶಿಯವರ ಸಂಬಂಧವನ್ನು ಸುಧಾರಿಸುತ್ತದೆ. ಸಹೋದರ ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಈ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
ಇದನ್ನೂ ಓದಿ- Diwali 2022: ದೀಪಾವಳಿಯಂದು ಈ 6 ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ
ಧನು ರಾಶಿ: ಬುಧ ರಾಶಿಯ ಬದಲಾವಣೆಯಿಂದ ಧನು ರಾಶಿಯವರಿಗೆ ಲಾಭವಾಗಲಿದೆ. ಹಣ ಗಳಿಸುವ ಅವಕಾಶವಿರುತ್ತದೆ. ಆದಾಯದ ಹೆಚ್ಚಳದೊಂದಿಗೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕುಟುಂಬದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ಹೆಚ್ಚಾಗುತ್ತದೆ. ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.