ಬೆಳಗಿನ ಉಪಹಾರದಂತೆ, ಮಧ್ಯಾಹ್ನದ ಊಟವೂ ಆರೋಗ್ಯಕ್ಕೆ ಬಹಳ ಅಗತ್ಯವಾಗಿರುತ್ತದೆ. ದಿನದ ಆರಂಭದಲ್ಲಿ ಆರೋಗ್ಯಕರ ಮತ್ತು ಟೇಸ್ಟಿ ಊಟವನ್ನು ಸೇವಿಸಿದರೆ, ದಿನವಿಡೀ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಜನರು ಮಧ್ಯಾಹ್ನದ ಊಟದಲ್ಲಿ ತರಕಾರಿ ಪದಾರ್ಥಗಳು, ರೊಟ್ಟಿ ಮತ್ತು ಅನ್ನವನ್ನು ಸೇವಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಲಾಡ್‌ ಸೇವಿಸುವುದು ಅತೀ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಮಧ್ಯಾಹ್ನದ ಊಟದಲ್ಲಿ ಸಲಾಡ್ ಸೇವಿಸುವುದರಿಂದ ಕೆಲವು ಪ್ರಯೋಜನಗಳಿವೆ. ಈ ಬಗ್ಗೆ ನಾವಿಲ್ಲ ನಿಮಗೆ ಹೇಳಬಯಸುತ್ತೇವೆ. 


COMMERCIAL BREAK
SCROLL TO CONTINUE READING

ಸಾಕಷ್ಟು ಫೈಬರ್ ಸಿಗುತ್ತದೆ: 
ಸಲಾಡ್ ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ವಿಧದ ಖನಿಜಗಳು, ಜೀವಸತ್ವಗಳು ಮತ್ತು ಫೈಬರ್ ಅನ್ನು ನೀಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.


ಇದನ್ನು ಓದಿ: ಜೂನ್ 27 ರವರೆಗೆ ಅತ್ಯಂತ ಎಚ್ಚರದಿಂದ ಇರಬೇಕು ಈ ನಾಲ್ಕು ರಾಶಿಯವರು , ಮಂಗಳ ನೀಡಲಿದ್ದಾನೆ ಭಾರೀ ಕಷ್ಟ


ತೂಕ ನಿರ್ವಹಣೆ: 
ಊಟದ ಜೊತೆ ಸಲಾಡ್ ಸೇವಿಸುವುದರಿಂದ ದೇಹದಲ್ಲಿ ಉತ್ತಮ ಪ್ರಮಾಣದ ಫೈಬರ್ ಉತ್ಪತ್ತಿಯಾಗುತ್ತದೆ. ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಕಣ್ಣುಗಳಿಗೆ ಉತ್ತಮ:
ನೀವು ಸಲಾಡ್‌ನಲ್ಲಿ ಪಾಲಕ್‌ ಅಥವಾ ಕೆಂಪು ಲೆಟಿಸ್ ಸೊಪ್ಪನ್ನು ಸೇರಿಸಿದರೆ, ಅದು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿಡುತ್ತದೆ. ಇದರಲ್ಲಿ ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳು ಇರುತ್ತದೆ. ಈ ಪೋಷಕಾಂಶಗಳು ನಿಮ್ಮ ದೇಹಕ್ಕೆ ಮತ್ತು ಕಣ್ಣುಗಳಿಗೆ ಪ್ರಯೋಜನವನ್ನು ನೀಡುತ್ತದೆ.


ತರಕಾರಿ ಪೋಷಕಾಂಶಗಳು: 
ಈರುಳ್ಳಿ, ಟೊಮೇಟೊ, ಸೌತೆಕಾಯಿ, ಮೂಲಂಗಿ ಮುಂತಾದ ಹಲವು ಬಗೆಯ ತರಕಾರಿಗಳನ್ನು ಸಲಾಡ್‌ನಲ್ಲಿ ಸೇರಿಸುವುದರಿಂದ ದೇಹಕ್ಕೆ ಪ್ರಯೋಜನಕಾರಿಯಾದ ಹಲವು ರೀತಿಯ ಖನಿಜಾಂಶಗಳು ಸಿಗುತ್ತವೆ.


ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ: 
ಮಧ್ಯಾಹ್ನದ ಊಟದಲ್ಲಿ ಸಲಾಡ್ ತಿನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಸಲಾಡ್ ಸೇವಿಸುವುದರಿಂದ ಹೊಟ್ಟೆ ಉಬ್ಬುವ ಸಮಸ್ಯೆ ಇರುವುದಿಲ್ಲ. ಅಷ್ಟೇ ಅಲ್ಲದೆ, ಹೆಚ್ಚಿನ ಫೈಬರ್ ಇರುವ ಕಾರಣದಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


ಇದನ್ನು ಓದಿ: White Hair Problem: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸರಳ ಮನೆಮದ್ದು


ನೀವು ಈ ವಸ್ತುಗಳನ್ನು ಸಲಾಡ್‌ನಲ್ಲಿ ಸೇರಿಸಬಹುದು:
ವಿವಿಧ ರೀತಿಯ ತರಕಾರಿಗಳಿಂದ ಪ್ರತಿದಿನ ವಿವಿಧ ರೀತಿಯ ಸಲಾಡ್ ಅನ್ನು ತಯಾರಿಸಬಹುದು. ಈರುಳ್ಳಿ, ಸೌತೆಕಾಯಿ, ಟೊಮೆಟೊ, ಮೂಲಂಗಿ, ಪಾಲಕ್, ಟರ್ನಿಪ್ ಅನ್ನು ಸಲಾಡ್‌ನಲ್ಲಿ ಸೇರಿಸಬಹುದು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.